‘ದೂರುಗಳ ಆಧಾರದ ಮೇಲೆ ಸಹಕಾರ ಇಲಾಖೆ ಈಗಾಗಲೇ ವಿಚಾರಣೆ ಆರಂಭಿಸಿದೆ. ಬುಧವಾರ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಹಣಕಾಸು ಸಮಿತಿ ಪ್ರಕಟಣಾ ಸಮಿತಿಯಲ್ಲಿಯೂ ಚರ್ಚಿಸಿ ದಾಖಲೆ ಸಮೇತ ಸಮಗ್ರ ಉತ್ತರವನ್ನು ಸೆ.15ರೊಳಗೆ ನೀಡುವುದಾಗಿ ವಿಚಾರಣಾಧಿಕಾರಿಗೆ ತಿಳಿಸಿದ್ದೇವೆ. ಈಗಾಗಲೇ ನೀಡಿರುವ ದೂರು ಅರ್ಜಿಗಳ ವಿಚಾರಣೆ ನಡೆಯುತ್ತಿರುವಾಗ ಅದೇ ದೂರು ಅರ್ಜಿಗಳ ಮೇಲೆ ಮತ್ತೊಂದು ವಿಚಾರಣೆ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಇದನ್ನು ‘ಡಬಲ್ ಜಿಯೋಪಾರ್ಡಿ’ ಎಂದು ಕರೆಯುತ್ತಾರೆ. ಹಾಗಾಗಿ ನ್ಯಾಯಾಲಯದಲ್ಲಿ ಈ ಆದೇಶ ಅಸಿಂಧುವಾಗಲಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.