ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

19 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಅಲೋಕ್ ಕುಮಾರ್‌ ಬೆಂಗಳೂರಿಗೆ
Published : 15 ಸೆಪ್ಟೆಂಬರ್ 2018, 18:21 IST
ಫಾಲೋ ಮಾಡಿ
Comments

ಬೆಂಗಳೂರು: ‘ಮೀಟರ್‌ ಬಡ್ಡಿ ಹಾಗೂ ಇಸ್ಪೀಟ್ ದಂಧೆಕೋರರು ಸರ್ಕಾರ ಉರುಳಿಸಲು ಕಸರತ್ತು ನಡೆಸುತ್ತಿದ್ದು, ಅದಕ್ಕೆ ಕೆಲವು ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದ ಬೆನ್ನಲ್ಲೇ, ಆಯಕಟ್ಟಿನ ಜಾಗದಲ್ಲಿದ್ದ ಕೆಲವು ಐಪಿಎಸ್‌ ಅಧಿಕಾರಿಗಳನ್ನು ಶನಿವಾರ ಎತ್ತಂಗಡಿ ಮಾಡಲಾಗಿದೆ.

‘ಮೀಟರ್ ಬಡ್ಡಿ, ರಿಯಲ್ ಎಸ್ಟೇಟ್‌ ಹಾಗೂ ಇಸ್ಪೀಟ್ ದಂಧೆ ನಡೆಸುವ ಮಾಫಿಯಾದ ಕೆಲವು ವ್ಯಕ್ತಿಗಳು ಸರ್ಕಾರ ಉರುಳಿಸಲು ಕೋಟ್ಯಂತರ ರೂಪಾಯಿ ಸಂಗ್ರಹಿಸುತ್ತಿದ್ದು, ಕಿಂಗ್‌‍ಪಿನ್‌ಗಳಂತೆ ಕೆಲಸ ಮಾಡುತ್ತಿರುವ ಇವರು ಬಿಜೆಪಿ ನಾಯಕರ ಜತೆ ಕೈಜೋಡಿಸಿದ್ದಾರೆ. ಸರ್ಕಾರ ರಕ್ಷಿಸಿಕೊಳ್ಳುವುದು ನನ್ನ ಕರ್ತವ್ಯ. ಅದಕ್ಕೆ ಬೇಕಾದ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದರು.

‘ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಸತೀಶ್ ರೆಡ್ಡಿ, ಎಸ್.ಆರ್. ವಿಶ್ವನಾಥ್, ಅಶ್ವತ್ಥನಾರಾಯಣ ಅವರು ಸರ್ಕಾರ ಉರುಳಿಸಲು ಮುಂದಾಗಿದ್ದು, ಕಾಂಗ್ರೆಸ್ ಶಾಸಕರಿಗೆ ಕೋಟ್ಯಂತರ ರೂಪಾಯಿ ಹಣದ ಆಮಿಷ ಒಡ್ಡುತ್ತಿದ್ದಾರೆ’ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕರು, ಆದಾಯ ತೆರಿಗೆ ಇಲಾಖೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಟ್ಟಿದ್ದರು.

ಈ ಎಲ್ಲ ಬೆಳವಣಿಗೆಗಳ ಮುಂದಿನ ಭಾಗವಾಗಿ ಅಪರಾಧ ವಿಭಾಗ ಹಾಗೂ ಗುಪ್ತದಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಪರಾಧ ಜಗತ್ತನ್ನು ಮಟ್ಟ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬೆಳಗಾವಿ ವಿಭಾಗದ ಐಜಿಪಿ ಆಗಿದ್ದ ಅಲೋಕ್ ಕುಮಾರ್‌ ಅವರನ್ನು ಬೆಂಗಳೂರಿನ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಆಗಿ ವರ್ಗಾಯಿಸಲಾಗಿದೆ. ಈ ಜಾಗದಲ್ಲಿದ್ದಎನ್‌.ಸತೀಶ್‌ಕುಮಾರ್‌ ಅವರನ್ನು ಕೆಎಸ್‌ಆರ್‌ಪಿಗೆ ಹಾಗೂ ಗುಪ್ತದಳದ ಡಿಐಜಿಯಾಗಿದ್ದ ಸಂದೀಪ ಪಾಟೀಲ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಒಟ್ಟು 19 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದ ಅಧಿಕಾರಿಗಳು: ಪಿ.ಎಸ್.ಸಂಧು–ಕಮಿಷನರ್‌, ಸಂಚಾರ ವಿಭಾಗ, ಬೆಂಗಳೂರು. ಡಾ ಪಿ.ರವೀಂದ್ರನಾಥ್–ಎಡಿಜಿಪಿ, ಅರಣ್ಯ ವಿಭಾಗ. ಸಂಜಯ್ ಸಹಾಯ್‌–ಎಡಿಜಿಪಿ, ಪೊಲೀಸ್ ಕಂಪ್ಯೂಟರ್ ವಿಂಗ್‌. ಅಲಿಕಾನ ಎಸ್‌. ಮೂರ್ತಿ–ಎಡಿಜಿಪಿ,ಲೋಕಾಯುಕ್ತ

ಸಂದೀಪ ಪಾಟೀಲ ಡಿಐಜಿ, ಸಿಎಆರ್‌, ಬೆಂಗಳೂರು. ಡಾ ಪಿ.ಎಸ್.ಹರ್ಷ –ಡಿಐಜಿ, ಕಾರಾಗೃಹಗಳ ಇಲಾಖೆ. ಕೆ.ಟಿ.ಬಾಲಕೃಷ್ಣನ್,ಎಸ್ಪಿ, ಗುಪ್ತದಳ, ಬೆಂಗಳೂರು ನಗರ. ಪಿ.ರಾಜೇಂದ್ರ ಪ್ರಸಾದ್–ಎಸ್ಪಿ, ವೈರ್‌ಲೆಸ್‌ ವಿಭಾಗ, ಬೆಂಗಳೂರು. ರಾಮನಿವಾಸ್ ಸೆಪಟ್‌–ಎಸ್ಪಿ, ಎಸಿಬಿ, ಇಡಾ ಮಾರ್ಟಿನ್–ಡಿಸಿಪಿ,ಸಂಚಾರ ವಿಭಾಗ, ಬೆಂಗಳೂರು ಪಶ್ಚಿಮ. ಭೀಮಾಶಂಕರ್ ಗುಳೇದ್–ಎಸ್ಪಿ, ಬೆಂಗಳೂರು ರೈಲ್ವೆ. ಜಿ.ರಾಧಿಕಾ–ಎಐಜಿಪಿ, ಡಿಜಿಪಿ ಕಚೇರಿ. ಹನುಮಂತರಾಯ–ಎಸ್ಪಿ, ಯಾದಗಿರಿ. ಎಸ್.ಗಿರೀಶ್–ಡಿಸಿಪಿ, ಅಪರಾಧ ವಿಭಾಗ, ಬೆಂಗಳೂರು.ಡಾ ಎ.ಎನ್.ಪ್ರಕಾಶ್ ಗೌಡ–ಎಸ್ಪಿ, ಹಾಸನ. ಕೆ.ವಿ.ಜಗದೀಶ್–ಡಿಸಿಪಿ, ಸಂಚಾರ ವಿಭಾಗ, ಬೆಂಗಳೂರು ಪೂರ್ವ. ಎನ್‌.ಚೈತ್ರಾ–ಎಸ್ಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.

ಐಎಫ್ಎಸ್, ಎಸ್‌ಎಫ್‌ಎಸ್‌ ಅಧಿಕಾರಿಗಳ ವರ್ಗ: ಎಚ್.ಪಿ. ಪ್ರಕಾಶ್–ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ, ಬೆಂಗಳೂರು. ಒ. ಪಾಲಯ್ಯ–ವ್ಯವಸ್ಥಾಪಕ ನಿರ್ದೇಶಕ, ಕಿಯೋನಿಕ್ಸ್, ಬೆಂಗಳೂರು. ಡಿ. ಯತೀಶ್ ಕುಮಾರ್–ಡಿಸಿಎಫ್‌, ಹಳಿಯಾಳ ವಿಭಾಗ, ಹಳಿಯಾಳ. ಆರ್.ಜಿ. ಭಟ್–ಡಿಸಿಎಫ್‌, ಯಲ್ಲಾಪುರ ವಿಭಾಗ, ಯಲ್ಲಾಪುರ. ಬಿ.ವಿ. ಬಯ್ಯಾರೆಡ್ಡಿ– ಡಿಸಿಎಫ್‌, ಬೆಂಗಳೂರು ಗ್ರಾಮಾಂತರ ವಿಭಾಗ, ಬೆಂಗಳೂರು. ಪ್ರಶಾಂತ್ ಶಂಕಿನಮಠ–ಡಿಸಿಎಫ್‌, ಬಾಗಲಕೋಟೆ ವಿಭಾಗ, ಬಾಗಲಕೋಟೆ. ಸರಿನಾ ಸಿಕ್ಕಲಿಗರ್–ಡಿಸಿಎಫ್‌, ಸಾಮಾಜಿಕ ಅರಣ್ಯ, ವಿಜಯಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT