ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶುಕ್ರವಾರ ಕರ್ನಾಟಕದ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಿಂದ ‘ಪುಷ್ಪಕ್’ ಎಂಬ ಹೆಸರಿನ ಮರುಬಳಕೆ ಉಡಾವಣಾ ವಾಹನದ (ಆರ್‌ಎಲ್‌ವಿ) ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಗೊಳಿಸಿದೆ.

ಉಡಾವಣಾ ವಾಹನವನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಿಂದ ಸುಮಾರು 4.5 ಕಿಮೀ ಎತ್ತರಕ್ಕೆ ಕೊಂಡೊಯ್ದು ಬಳಿಕ ಪೂರ್ವನಿರ್ಧರಿತ ಪಿಲ್‌ಬಾಕ್ಸ್ ನಿಯತಾಂಕಗಳನ್ನು ಪಡೆದ ನಂತರ ಬಿಡುಗಡೆ ಮಾಡಲಾಯಿತು ಎಂದು ಸಂಸ್ಥೆ ಹೇಳಿದೆ.

‘ಸಂಪೂರ್ಣ ಮರುಬಳಕೆ ಮಾಡಬಹುದಾದ ಉಡಾವಣೆಗೆ ಅಗತ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಾಹ್ಯಾಕಾಶ ಸಂಸ್ಥೆಯ ಪ್ರಯತ್ನದ ಭಾಗ ಇದಾಗಿದೆ. ಅಲ್ಲದೆ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶವನ್ನು ಪ್ರವೇಶಿಸುವ ಯತ್ನವಿದು ಎಂದು ಇಸ್ರೊ ಹೇಳಿದೆ.

ಯಶಸ್ಸಿನ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಬಾಹ್ಯಾಕಾಶ ಸಂಸ್ಥೆ, ‘ಇಸ್ರೊ ಮತ್ತೊಂದು ಮೈಲಿಗಲ್ಲು ಸಾಧಿಸಿದೆ, ಪುಷ್ಪಕ್ ತನ್ನ ನಿಖರವಾದ ಸ್ಥಾನದಲ್ಲಿ ಲ್ಯಾಂಡ್ ಆಗಿದೆ’ ಎಂದು ಬರೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.