ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌–ಇರಾನ್‌ ಸಂಘರ್ಷ: ಶಮನಕ್ಕೆ ಭಾರತ ಸಮರ್ಥ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌
Published 15 ಏಪ್ರಿಲ್ 2024, 19:36 IST
Last Updated 15 ಏಪ್ರಿಲ್ 2024, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಷ್ಯಾ- ಉಕ್ರೇನ್ ವಿಷಯವನ್ನು ನಿಭಾಯಿಸಿದ  ರೀತಿಯಲ್ಲೇ ಇಸ್ರೇಲ್‌– ಇರಾನ್‌ ಪರಿಸ್ಥಿತಿ ನಿಭಾಯಿಸಲು ಭಾರತ ಸಮರ್ಥವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದರು.

ರಾಜ್ಯ ಬಿಜೆಪಿ ಘಟಕ ನಗರದಲ್ಲಿ ಸೋಮವಾರ ನಾಗರಿಕರ ಜತೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಯಾವುದೇ ದೇಶದ ಮೇಲೆ ನಡೆಯುವ ದಾಳಿ, ಆ ಎರಡು ದೇಶಗಳ ಭೌಗೋಳಿಕ ವಿಷಯವಷ್ಟೇ ಆಗಿರದೆ ಇತರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿವೆ. ರಷ್ಯಾ–ಉಕ್ರೇನ್‌, ಇಸ್ರೇಲ್‌–ಪ್ಯಾಲೆಸ್ಟೀನ್ ಯುದ್ಧಗಳು ಜಗತ್ತಿನ ಮೇಲೂ ಪರಿಣಾಮ ಬೀರುತ್ತವೆ. ಎಲ್ಲೋ ನಡೆಯುವ ಯುದ್ಧ, ಇತರೆ ರಾಷ್ಟ್ರಗಳ ಆರ್ಥಿಕತೆಯ ಮೇಲೂ ಪ್ರಭಾವ ಬೀರುತ್ತವೆ. ಇಂತಹ ವಾತಾವರಣ ತಿಳಿಗೊಳ್ಳಬೇಕಿದೆ. ಎಂದರು.

2014 ರಿಂದ ದೇಶದ ವಿದೇಶಾಂಗ ನೀತಿಯು ಬದಲಾಗಿದೆ. ದೇಶದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗಡಿ ಉದ್ದಕ್ಕೂ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಎಂತಹ ಸನ್ನಿವೇಶಗಳಲ್ಲೂ ವಿಚ್ಛಿದ್ರ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಾಗ ರಾಜಿಯಾಗುವುದಿಲ್ಲ. ಭಯೋತ್ಪಾದನೆಯ ನಿಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಮುಂದಿನ 25 ವರ್ಷಗಳಲ್ಲಿ ಭಾರತ ವಿಶ್ವಕ್ಕೇ ಮಾದರಿಯಾಗಲಿದೆ. ಚೀನಾದ ಪ್ರಗತಿಯನ್ನು ಎದುರಿಸುವುದು ದೊಡ್ಡ ಸವಾಲಾಗಿದೆ. ವಿಶ್ವದ ಇತರೆ ರಾಷ್ಟ್ರಗಳ ವೇಗಕ್ಕೆ ತಕ್ಕಂತೆ ಬೆಳೆಯಲು ತಂತ್ರಜ್ಞಾನ, ಕೈಗಾರಿಕೆಗಳ ಬೆಳವಣಿಗೆಗಳೂ ಮುಖ್ಯ. ಅದಕ್ಕೆ ಪೂರಕ ವಾತಾವರಣ ಇದೀಗ ಸೃಷ್ಟಿಯಾಗಿದೆ. ಭಾರತ ಮಧ್ಯಪ್ರಾಚ್ಯ, ಪಾಶ್ಚಿಮಾತ್ಯ ಮತ್ತು ಅರಬ್‌ ಜಗತ್ತಿನ ಜತೆ ಹಳೆಯ ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಭಾರತ ಆಸಕ್ತಿ ಹೊಂದಿದೆ ಎಂದು ಹೇಳಿದರು.

ಕೋವಿಡ್‌ ನಂತರ ವಿಶ್ವದ ಹಲವು ದೇಶಗಳ ಆರ್ಥಿಕತೆ ನೆಲಕಚ್ಚಿದ್ದರೂ, ಭಾರತದ ಆರ್ಥಿಕ ಸಾಧನೆಗೆ ವಿಶ್ವವೇ ಬೆರಗಾಗಿದೆ. ಎನ್‌ಡಿಎ ರೂಪಿಸಿದ ಆರ್ಥಿಕ ನೀತಿಗಳು. ತೆಗೆದುಕೊಂಡ ದೃಢ ನಿರ್ಧಾರಗಳಿಂದಾಗಿ ದೇಶ ಆರ್ಥಿಕ ಸದೃಢತೆಯತ್ತ ಸಾಗಿದೆ ಎಂದರು.

ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್‌, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್‌ಗೌಡ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT