ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿಯಿಂದ ಬೇಸರ; ಎರಡೂ ಪಕ್ಷಗಳ ಹಲವರು ಸಂಪರ್ಕದಲ್ಲಿ: ಚಲುವರಾಯಸ್ವಾಮಿ

Published 1 ಅಕ್ಟೋಬರ್ 2023, 0:34 IST
Last Updated 1 ಅಕ್ಟೋಬರ್ 2023, 0:34 IST
ಅಕ್ಷರ ಗಾತ್ರ

ಕೋಲಾರ: ‘ಜೆಡಿಎಸ್‌–ಬಿಜೆಪಿ ಮೈತ್ರಿ ಎರಡೂ ಪಕ್ಷಗಳ ಕೆಲವು ನಾಯಕರಿಗೆ ಇಷ್ಟವಿಲ್ಲ. ಅಂತಹ ಕೆಲವರು ನಮ್ಮನ್ನು ಸಂಪರ್ಕಿಸಿರುವುದು ನಿಜ’ ಎಂದು ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

‘ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ನಾವಾಗಿಯೇ ಯಾರನ್ನೂ ಸಂಪರ್ಕಿಸಿಲ್ಲ, ತೊಂದರೆ ಕೊಡುತ್ತಿಲ್ಲ. ತತ್ವ, ಸಿದ್ಧಾಂತ ಒಪ್ಪಿ ಕಾಂಗ್ರೆಸ್‌ಗೆ ಬರುವುದಾದರೆ ಸೇರಿಸಿಕೊಳ್ಳಲು ಸಿದ್ಧ. ನಾವು 136 ಸ್ಥಾನಗಳಲ್ಲಿ ಗೆದ್ದಿರುವಾಗ ನಮಗೆ ಯಾರ ಅವಶ್ಯಕತೆಯೂ ಇಲ್ಲ. ಬಂದರೆ ಬೇಡ ಎನ್ನಲ್ಲ’ ಎಂದರು.

‘ಯಾರು, ಯಾರ ಬಳಿ ಹೋಗುತ್ತಾರೆ ಎನ್ನುವುದನ್ನು ಕಾಲವೇ ತಿಳಿಸಲಿದೆ. ಜೆಡಿಎಸ್‌ ಶಾಸಕರು ಮತ್ತು ಮುಖಂಡರು ಪಕ್ಷ ತೊರೆದು ಹೋಗುವ ಭಯ ಹಾಗೂ ಏಕಾಂಗಿಯಾಗಿ ಚುನಾವಣೆ ಎದುರಿಸುವ ಆತಂಕದಿಂದ ಕುಮಾರಸ್ವಾಮಿ ಬಿಜೆಪಿ ಜತೆ ಕೈಜೋಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸುವುದು ಕಷ್ಟವೆಂದು ಬಿಜೆಪಿಯವರು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT