ಬೆಂಗಳೂರು: ‘ಭಾರತವು ಸೇವಾವಲಯದಲ್ಲಿ ಉತ್ತಮ ಸ್ಥಾನ ಹೊಂದಿದೆ. ಆದರೆ ತಯಾರಿಕಾ ವಲಯದಲ್ಲಿ ಕ್ರಮಿಸಬೇಕಾದ ಹಾದಿ ಬಹಳ ದೂರವಿದೆ’ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ನಾವೀನ್ಯತಾ ಪ್ರತಿಷ್ಠಾನವು ನಗರದ ನಾಗರಬಾವಿಯಲ್ಲಿ ಆರಂಭಿಸಿರುವ ದೂರಸಂಪರ್ಕ ಉತ್ಕೃಷ್ಠತಾ ಕೇಂದ್ರವನ್ನು ಗುರುವಾರ ಲೋಕಾರ್ಪಣೆ ಮಾಡಿ, ಮಾತನಾಡಿದರು.

‘ದೂರಸಂಪರ್ಕ ಕ್ಷೇತ್ರದಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಮೊಬೈಲ್–ಸ್ಮಾರ್ಟ್ಫೋನ್ ಬಳಸುವವರ ಸಂಖ್ಯೆ ಹತ್ತಾರು ಪಟ್ಟು ಹೆಚ್ಚಾಗಿದೆ. ಹತ್ತು ವರ್ಷಗಳ ಹಿಂದೆ ಭಾರತವು ಫೋನ್, ಸ್ಮಾರ್ಟ್ಫೋನ್ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಈಗ ರಫ್ತು ಮಾಡುವಷ್ಟು ಈ ಕ್ಷೇತ್ರ ಬೆಳದಿದೆ’ ಎಂದರು.

‘ದೂರಸಂಪರ್ಕ ಕ್ಷೇತ್ರದಲ್ಲಿ ಸೇವಾ ವಲಯಕ್ಕೆ ಹೆಚ್ಚು ಒತ್ತು ಸಿಕ್ಕಿದೆ. ಆದರೆ ಹೊಸ ಉತ್ಪನ್ನಗಳ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದೇವೆ. ಹೀಗಾಗಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ತಯಾರಿಕಾ ವಲಯಕ್ಕೆ ಒತ್ತು ನೀಡಬೇಕಾದ ಅನಿವಾರ್ಯತೆ ಇದೆ. ದೂರಸಂಪರ್ಕ ಉತ್ಕೃಷ್ಠತಾ ಕೇಂದ್ರವು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದರು.

‘ಸರ್ ಎಂ.ವಿಶ್ವಶ್ವೇರಯ್ಯ ದೇಶಕಂಡ ಶ್ರೇಷ್ಠ ಎಂಜಿನಿಯರ್ಗಳಲ್ಲಿ ಅಗ್ರರು. ಅವರಿಗೂ ನಮ್ಮ ಮನೆತನಕ್ಕೂ ಸಂಬಂಧವಿದೆ. 1903ರಲ್ಲಿ ವಿಶ್ವೇಶ್ವರಯ್ಯ ಅವರು ಪುಣೆಯಲ್ಲಿನ ಖಡಕವಾಸಲ ಅಣೆಕಟ್ಟು ನಿರ್ಮಾಣಕ್ಕೆ ತಾಂತ್ರಿಕ ನೆರವು ನೀಡಿದ್ದರು. ಅದನ್ನು ನೋಡಿ ನಮ್ಮ ಮನೆತನದವರು ಗ್ವಾಲಿಯರ್ ಅಣೆಕಟ್ಟು ನಿರ್ಮಾಣ ಮಾಡುವ ಸಂಬಂಧ ಅವರ ತಾಂತ್ರಿಕ ಸಲಹೆ ಮತ್ತು ನೆರವನ್ನು ಪಡೆದಿದ್ದರು’ ಎಂದರು

ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ, ‘ರಾಷ್ಟ್ರೀಯ ಮಟ್ಟದ ಈ ಕೇಂದ್ರವು, ಹಲವು ರಾಷ್ಟ್ರೀಯ ಸಂಸ್ಥೆಗಳು ಮತ್ತು ಉದ್ಯಮ ವಲಯದ ಸಹಯೋಗದಲ್ಲಿ ಸಂಶೋಧನೆಗಳನ್ನು ನಡೆಸಲು ನೆರವಾಗಲಿದೆ. ರಾಜ್ಯದಲ್ಲಿನ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಇದು ನೆರವಾಗಲಿದೆ’ ಎಂದರು.

ಕೇಂದ್ರದಲ್ಲಿನ ಸವಲತ್ತುಗಳು

ಹಬ್ ಅಂಡ್ ಸ್ಪೋಕ್ ಮಾದರಿಯಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು ವಿಟಿಯು ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಕೇಂದ್ರದಲ್ಲಿನ ಸವಲತ್ತುಗಳನ್ನು ಬಳಸಿಕೊಳ್ಳಬಹುದಾಗಿದೆ

ದೂರಸಂಪರ್ಕ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು. 6ಜಿ ತಂತ್ರಜ್ಞಾನ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯ ಮತ್ತು ವಾತಾವರಣ ಹೊಂದಿದೆ

ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷೀನ್ ಲರ್ನಿಂಗ್ ಕ್ಷೇತ್ರದ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ಪ್ರತ್ಯೇಕ ಪ್ರಯೋಗಾಲಯ

ವರ್ಚ್ಯುವಲ್ ರಿಯಾಲಿಟಿ (ವಿಆರ್) ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿಗೆ ಅತ್ಯಾಧುನಿಕ ಘಟಕ

ಕ್ವಾಂಟಮ್ ಕಂಪ್ಯೂಟಿಂಗ್ ಆರೋಗ್ಯ ಕ್ಷೇತ್ರದ ತಂತ್ರಜ್ಞಾನ ಅಭಿವೃದ್ಧಿಗೆ ವಿಶಿಷ್ಟ ಪ್ರಯೋಗಾಲಯಗಳು ವಿಡಿಯೊ ಸಂವಾದಕ್ಕೆ ಅಂತರರಾಷ್ಟ್ರೀಯ ಮಟ್ಟದ ಸ್ಟುಡಿಯೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.