ಮಂಗಳೂರು: ಇಲ್ಲಿನ ಕಂಕನಾಡಿಯ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ 150ನೇ ವರ್ಷಾಚರಣೆಯು ನಾಗಬ್ರಹ್ಮ ಮಂಡಲೋತ್ಸವದೊಂದಿಗೆ ಬುಧವಾರ ಬೆಳಿಗ್ಗೆ ಸಂಪನ್ನಗೊಂಡಿತು.

ಕಂಕನಾಡಿ ಕ್ಷೇತ್ರದಲ್ಲಿ ಫಲಪುಷ್ಪಗಳಿಂದ ಅಲಂಕೃತವಾಗಿದ್ದ ಭವ್ಯವೇದಿಕೆಯಲ್ಲಿ ಮನೋಜ್ ಶಾಂತಿ ಮತ್ತು ಬಳಗದವರು ನಾಗಬ್ರಹ್ಮ ಮಂಡಲೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇದಕ್ಕೂ ಮುನ್ನ ಕ್ಷೇತ್ರದಲ್ಲಿ ಹಾಲಿಟ್ಟು ಸೇವೆ ನಡೆಯಿತು.

ಕರಾವಳಿಯಾದ್ಯಂತ ನಡೆಯುವ ನಾಗಮಂಡಲೋತ್ಸವವನ್ನು ಬ್ರಾಹ್ಮಣ ಸಮುದಾಯವರೇ ಹೆಚ್ಚಾಗಿ ನೆರವೇರಿಸುತ್ತಾರೆ. ಕಂಕನಾಡಿ ಕ್ಷೇತ್ರದ ನಾಗಬ್ರಹ್ಮ ಮಂಡಲೋತ್ಸವವನ್ನು ಬಿಲ್ಲವ ಸಮುದಾಯದ ನಾಗಪಾತ್ರಿ ಮನೋಜ್ ಶಾಂತಿ ಮತ್ತು ಬಳಗದವರು ನಿರ್ವಹಿಸಿದರು.

ಕ್ಷೇತ್ರಕ್ಕೆ 150 ವರ್ಷ ತುಂಬಿದ ಸಲುವಾಗಿ ಮಾ.3ರಿಂದ ಸಹಸ್ರ ನಾರಿಕೇಳ ಗಣಯಾಗ, ಬ್ರಹ್ಮ ಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಈ ಕಾರ್ಯಕ್ರಮಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ಗರಡಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.