ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಪತ್ರ ಬರೆದಿದ್ದಾರೆ. ‘ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ ಕನ್ನಡವನ್ನು ತಪ್ಪಾಗಿ ಬಳಸಿ, ಭಾಷೆಯನ್ನು ಅಗೌರವಿಸಿದ್ದರ ಬಗ್ಗೆ ದೂರುಗಳು ಬಂದಿವೆ. ಸಾಮಾಜಿಕ ಜಾಲತಾಣದಲ್ಲಿಯೂ ಪ್ರಾಧಿಕಾರವನ್ನು ಗುರುತು ಮಾಡಿ, ದೂರು ಸಲ್ಲಿಸಲಾಗುತ್ತಿದೆ. ಸರ್ಕಾರದಲ್ಲಿ ಜವಾಬ್ದಾರಿಯುತ ಹುದ್ದೆ ಅಲಂಕರಿಸಿರುವವರು ಕನ್ನಡವನ್ನು ತಪ್ಪಾಗಿ ಬರೆದು, ಆದೇಶ ಹೊರಡಿಸುವುದು ಭಾಷೆಯ ಬಗೆಗಿನ ನಿರ್ಲಕ್ಷ್ಯ ತೋರಿಸಯತ್ತದೆ’ ಎಂದು ತಿಳಿಸಲಾಗಿದೆ.