ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದದೇ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸದನದಿಂದ ತೆರಳುವ ವೇಳೆ ನಡೆದ ಕೋಲಾಹಲ ಶುಕ್ರವಾರ ಎರಡೂ ಸದನಗಳಲ್ಲಿ ಕಲಹಕ್ಕೆ ಎಡೆ ಮಾಡಿಕೊಟ್ಟಿತು.

‘ಅಗೌರವ’ಕ್ಕೆ ಅರ್ಧ ದಿನ ಬಲಿ

ಬೆಂಗಳೂರು: ‘ರಾಜ್ಯಪಾಲರಿಗೆ ಅಗೌರವ ತೋರಿದ ಸಚಿವ ಎಚ್.ಕೆ. ಪಾಟೀಲ ಮತ್ತು ಇತರ ಸದಸ್ಯರನ್ನು ಅಮಾನತು ಮಾಡಬೇಕು’ ಎಂದು ಬಿಜೆಪಿ ಸದಸ್ಯರು ಹಟ ಹಿಡಿದರೆ, ‘ಸಂವಿಧಾನಕ್ಕೆ, ರಾಷ್ಟ್ರಗೀತೆಗೆ ಅವಮಾನ ಮಾಡಿರುವ ರಾಜ್ಯಪಾಲರು ನಾಡಿನ ಜನರ ಕ್ಷಮೆ ಕೇಳಬೇಕು’ ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.

ಆಡಳಿತ– ವಿರೋಧ ಪಕ್ಷದ ಸದಸ್ಯರ ವಾಕ್ಸಮರದಿಂದಾಗಿ ಶುಕ್ರವಾರ ವಿಧಾನಸಭೆಯ ಅರ್ಧ ದಿನದ ಕಲಾಪ ಕೋಲಾಹಲಕ್ಕೆ ಬಲಿಯಾಯಿತು.

ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ರಾಜ್ಯಪಾಲರನ್ನು ಗೌರವಯುತವಾಗಿ ಸದನಕ್ಕೆ ಕರೆತಂದು ನಿರ್ಗಮಿಸುವಾಗ ಅಗೌರವ ತೋರಿದ್ದು ಸರಿಯಲ್ಲ. ರಾಜ್ಯಪಾಲರಿಗೆ ಅಗೌರವ ತೋರಿದವರನ್ನು ಅಮಾನತು ಪಡಿಸಿ ಮೇಲ್ಪಂಕ್ತಿ ಹಾಕಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯ ಎಸ್.ಸುರೇಶ್ ಕುಮಾರ್, ‘ಬಿ.ಕೆ.ಹರಿಪ್ರಸಾದ್, ಎಚ್.ಸಿ.ಬಾಲಕೃಷ್ಣ ಅವರು ರಾಜ್ಯಪಾಲರನ್ನು ಅಡ್ಡಗಟ್ಟಲು ಯತ್ನಿಸಿದರು. ಒಂದೊಮ್ಮೆ ರಾಜ್ಯಪಾಲರು ಬಿದ್ದಿದ್ದರೆ ಸದನದ ಸ್ಥಿತಿ ಏನಾಗುತ್ತಿತ್ತು’ ಎಂದು ಪ್ರಶ್ನಿಸಿದರು.

ಕಾನೂನು ಸಚಿವ ಎಚ್.ಕೆ. ಪಾಟೀಲ, ‘ನಾನು ರಾಜ್ಯಪಾಲರು ಓಡಿ ಹೋದರು ಎಂದಿದ್ದನ್ನು ಇಲ್ಲ ಎನ್ನುವುದಿಲ್ಲ. ರಾಷ್ಟ್ರಗೀತೆ ನುಡಿಸುವವರೆಗೆ ನಿಲ್ಲದ ರಾಜ್ಯಪಾಲರು ನಾಡಿನ ಜನ, ಸದನದ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು. ‘ಎಲ್ಲ ವಿಷಯಗಳನ್ನು ಪರಿಶೀಲಿಸಿ ಸೂಕ್ತ ರೂಲಿಂಗ್ ನೀಡಲಾಗುವುದು’ ಎಂದ ಸಭಾಧ್ಯಕ್ಷ ಯು.ಟಿ. ಖಾದರ್, ಚರ್ಚೆಗೆ ಅಂತ್ಯ ಹಾಡಿದರು.

ಗದ್ದಲದಲ್ಲೆ ಕಳೆದ ದಿನದ ಕಲಾಪ

‘ರಾಜ್ಯಪಾಲರಿಗೆ ಅಡ್ಡಿಪಡಿಸಿದ ಸದಸ್ಯರನ್ನು ಅಮಾನತು ಮಾಡಬೇಕು’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರ ಪಟ್ಟು, ಅದಕ್ಕೆ ಕಾಂಗ್ರೆಸ್ ಸದಸ್ಯರ ಆಕ್ಷೇಪದಿಂದಾಗಿ ಉಂಟಾದ ಗದ್ದಲದಲ್ಲಿಯೇ ಪರಿಷತ್ತಿನ ಶುಕ್ರವಾರದ ಕಲಾಪ ಕೊನೆಗೊಂಡಿತು.

ಒಂದು ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ‘ಗೂಂಡಾಗಿರಿ ಕಾಂಗ್ರೆಸ್ಗೆ ಧಿಕ್ಕಾರ’ ಕೂಗಿದರು. ಕಾಂಗ್ರೆಸ್ ಸದಸ್ಯರು, ‘ರಾಷ್ಟ್ರಗೀತೆಗೆ ಅವಮಾನ ಮಾಡಿದ ರಾಜ್ಯಪಾಲರಿಗೆ ಧಿಕ್ಕಾರ’ ಎಂದರು. ಘೋಷಣೆಗಳಿಂದ ಆರಂಭವಾದ ಗದ್ದಲವು ಅವಾಚ್ಯ ಪದಗಳ ಬಳಕೆಗೆ ದಾರಿಮಾಡಿಕೊಟ್ಟಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಪೀಠದಿಂದ ಪದೇ–ಪದೇ ಎದ್ದುನಿಂತು ಗದ್ದಲ ನಿಲ್ಲಿಸಬೇಕಾಯಿತು.

‘ಕಾಂಗ್ರೆಸ್ನ ಎಸ್.ರವಿ ಮತ್ತು ಬಿ.ಕೆ.ಹರಿಪ್ರಸಾದ್ ಅವರು ರಾಜ್ಯಪಾಲರಿಗೆ ಅಡ್ಡಿಪಡಿಸಿದರು. ಅವರನ್ನು ಅಮಾನತು ಮಾಡಬೇಕು’ ಎಂದು ಇಬ್ಬರ ಹೆಸರನ್ನೂ ಉಲ್ಲೇಖಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಹೊರಟ್ಟಿ ಅವರಿಗೆ ಶುಕ್ರವಾರ ಮಧ್ಯಾಹ್ನ ಎರಡನೇ ಮನವಿ ಸಲ್ಲಿಸಿದರು.

ಮನವಿಯನ್ನು ಸದನದ ನೀತಿ ನಿರೂಪಣಾ ಸಮಿತಿಯ ಪರಿಶೀಲನೆಗೆ ವಹಿಸಿದ ಸಭಾಪತಿ ನಿರ್ಧಾರವನ್ನು ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿದರು. ನಿರ್ಧಾರವನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಸದಸ್ಯರ ಮನವಿ ಪತ್ರ ಓದಿದ ಹೊರಟ್ಟಿ, ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳುವವರೆಗೂ ತಾವು ನೀಡಿದ್ದ ರೂಲಿಂಗ್ ಅನ್ನು ಕಾಯ್ದಿರಿಸಿದರು.

‘ರಾಷ್ಟ್ರಗೀತೆಗೆ ಅವಮಾನ ಅಲ್ಲವೇ?’

‘ರಾಜ್ಯಪಾಲರು ಭಾಷಣವನ್ನು ಎಷ್ಟಾದರೂ ಓದಲಿ. ರಾಷ್ಟ್ರಗೀತೆ ಮುಗಿಯುವವರೆಗೆ ಇರಬೇಕಲ್ಲವೇ? ಅದಕ್ಕೂ ಮೊದಲೇ ನಿರ್ಗಮಿಸಿರುವುದು ರಾಷ್ಟ್ರಗೀತೆಗೆ ಅವಮಾನ ಮಾಡಿದಂತೆ ಅಲ್ಲವೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಧ್ಯ ಪ್ರವೇಶಿಸಿದ ಅವರು, ‘ನನ್ನ ಸರ್ಕಾರ ಎಂದು ರಾಜ್ಯಪಾಲರು ಹೇಳುವುದು ತಪ್ಪೇನೂ ಅಲ್ಲ. ಅವರು ಸರ್ಕಾರದ ಮುಖ್ಯಸ್ಥರು. ಆದರೆ, ಅವರು ರಾಷ್ಟ್ರಗೀತೆಯ ಬಳಿಕ ಸದನದಿಂದ ತೆರಳಬೇಕಿತ್ತು’ ಎಂದರು.

‘ರಾಜ್ಯಪಾಲರು ಓಡಿ ಹೋಗಲಿಲ್ಲ. ವೇಗವಾಗಿ ಹೋದರು ಅಷ್ಟೆ. ಅವರು ರಾಜ್ಯದ ರಾಜ್ಯಪಾಲರೇ ಹೊರತು ನಿಮ್ಮ ರಾಜ್ಯಪಾಲರೂ ಅಲ್ಲ, ನಮ್ಮ ರಾಜ್ಯಪಾಲರೂ ಅಲ್ಲ’ ಎಂದು ವಿರೋಧ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಹೇಳಿದರು.

‘ರಾಜ್ಯಪಾಲರು ಹೊರಟು ಹೋಗುತ್ತಿದ್ದಂತೆಯೇ ನಾನು ಅವರ ಹಿಂದೆ ಓಡಿ ಹೋಗಿ ಕಳುಹಿಸಿಕೊಟ್ಟೆ’ ಎಂದೂ ಮುಖ್ಯಮಂತ್ರಿ ಹೇಳಿದರು.

ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷ ಪಟ್ಟು

‘ಮದ್ಯ ಮಾರಾಟ ಸನ್ನದು ನೀಡಲು ಲಂಚದ ರೂಪದಲ್ಲಿ ಸುಮಾರು ₹4,000 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಲು ಮುಂದಾಗಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆ ಪಡೆದು, ನಂತರ ತನಿಖೆ ಆರಂಭಿಸಬೇಕು’ ಎಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಉಭಯ ಸದನಗಳಲ್ಲಿ ಆಗ್ರಹಿಸಿದ್ದು ಕಲಾಪ ಕಲಹಕ್ಕೆ ನಾಂದಿ ಹಾಡಿತು.

ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಗದ್ದಲ ಮತ್ತು ಕೂಗಾಟ ಹೆಚ್ಚಾದ ಕಾರಣ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಆದರೂ ವಿರೋಧ ಪಕ್ಷದ ಶಾಸಕರು ಧರಣಿ ಬಿಟ್ಟು ಕದಲದೇ ಇದ್ದುದರಿಂದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕಲಾಪವನ್ನು ಜ.27ಕ್ಕೆ ಮುಂದೂಡಿದರು.

ನಿಲುವಳಿ ಸೂಚನೆಯಡಿ ವಿಷಯವನ್ನು ಪ್ರಸ್ತಾಪಿಸಲು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸಭಾಧ್ಯಕ್ಷರನ್ನು ಕೋರಿದರು. ‘ನಿಲುವಳಿ ಸೂಚನೆಯಡಿ ಕೊಡಲು ಸಾಧ್ಯವಿಲ್ಲ. ಬೇಕಿದ್ದರೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿ ಅಥವಾ ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತನೆ ಮಾಡಿಕೊಡುತ್ತೇನೆ’ ಎಂದು ಸಭಾಧ್ಯಕ್ಷರು ಹೇಳಿದರು.

ಸಭಾಧ್ಯಕ್ಷರ ಸಲಹೆಯನ್ನು ಬಿಜೆಪಿ ಸದಸ್ಯರು ತೀವ್ರವಾಗಿ ಪ್ರತಿರೋಧಿಸಿದರು. ಪ್ರತಿರೋಧವನ್ನು ಗಣನೆಗೆ ತೆಗೆದುಕೊಳ್ಳದ ಸಭಾಧ್ಯಕ್ಷರು, ವಂದನಾ ನಿರ್ಣಯದ ಮೇಲೆ ಮಾತನಾಡುವಂತೆ ಕಾಂಗ್ರೆಸ್ನ ಎ.ಎಸ್. ಪೊನ್ನಣ್ಣ ಅವರಿಗೆ ಸೂಚಿಸಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.

‘ಇದೊಂದು ದೊಡ್ಡ ಹಗರಣ. ಇದರ ಬಗ್ಗೆ ಮಾತನಾಡಲು ಅವಕಾಶ ನೀಡಬೇಕು. ಕಿಕ್ ಬ್ಯಾಕ್ ಆಗಿದೆ, ಲೋಕಾಯುಕ್ತದಲ್ಲಿ ದೂರು ಸಲ್ಲಿಕೆಯಾಗಿದೆ. ಈ ಹಿಂದೆ ರಾಜ್ಯದ ಹಲವು ಯೋಜನೆಗಳ ಹಣವನ್ನು ಅಕ್ರಮವಾಗಿ ವಿವಿಧ ರಾಜ್ಯಗಳ ಚುನಾವಣೆಗೆ ಸಾಗಿಸಿ ಬಳಸಿದ ರೀತಿಯಲ್ಲಿ ಈಗ ಅಸ್ಸಾಂ, ತಮಿಳುನಾಡು, ಕೇರಳ ಚುನಾವಣೆಗಳಲ್ಲಿ ಬಳಸಲು ಮದ್ಯದ ಹಣ ಬಳಸಲಾಗುತ್ತಿದೆ’ ಎಂದು ಬಿಜೆಪಿಯ ವಿ.ಸುನಿಲ್ಕುಮಾರ್ ಆರೋಪಿಸಿದರು.

‘ಸನ್ನದು ಪಡೆಯಲು ಸಚಿವರಿಗೆ ಹಣ ನೀಡಬೇಕು ಎಂದು ಅಧಿಕಾರಿಗಳು ಹೇಳುವ ಒಟ್ಟು ನಾಲ್ಕು ಆಡಿಯೊಗಳ ಪೆನ್ ಡ್ರೈವ್ ನನ್ನ ಬಳಿ ಇದೆ. ಅದನ್ನು ಎಲ್ಲರೂ ಕೇಳಬಹುದು’ ಎಂದು ಹೇಳಿದ ಅಶೋಕ ಪೆನ್ ಡ್ರೈವ್ ಪ್ರದರ್ಶಿಸಿದರು.

‘ಸನ್ನದುಗಳನ್ನು ಭಾರಿ ಮೊತ್ತಕ್ಕೆ ಮಾರಲಾಗುತ್ತಿದೆ. ನಿಮ್ಮ ಬಳಿ ದಾಖಲೆ ಇದ್ದರೆ ಸದನದಲ್ಲಿ ಮಂಡಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪಂಥಾಹ್ವಾನ ನೀಡಿದ್ದಾರೆ. ಆದ್ದರಿಂದ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿದರೆ ಎಲ್ಲ ದಾಖಲೆಗಳನ್ನು ಮುಂದಿಡುತ್ತೇನೆ. ಇದರಲ್ಲಿರುವ ಮಾಹಿತಿ ಸುಳ್ಳು ಎಂದಾದರೆ ಯಾವುದೇ ಶಿಕ್ಷೆ ಎದುರಿಸಲು ಸಿದ್ಧನಿದ್ದೇನೆ’ ಎಂದು ಸವಾಲು ಹಾಕಿದರು. ಗದ್ದಲದ ಮಧ್ಯೆ ಪೊನ್ನಣ್ಣ ಅವರ ಭಾಷಣ ಯಾರ ಕಿವಿಗೂ ತಲುಪಲಿಲ್ಲ.

ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ‘ರಾಜ್ಯಪಾಲರ ನಡೆಯ ಕುರಿತು ಉತ್ತಮ ಅಂಶಗಳನ್ನು ಹೇಳುತ್ತಿದ್ದಾರೆ. ಗಲಾಟೆಯಿಂದಾಗಿ ಯಾರಿಗೂ ಕೇಳುತ್ತಿಲ್ಲ’ ಎಂದು ಸಭಾಧ್ಯಕ್ಷರಿಗೆ ಹೇಳಿದರು. ಸಭಾಧ್ಯಕ್ಷರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಇಡೀ ಕಲಾಪವನ್ನು ನಗುತ್ತಲೇ ಆಲಿಸಿದರು.

ಪರಿಷತ್ನಲ್ಲೂ ಆಗ್ರಹ: ತಿಮ್ಮಾಪುರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ವಿರೋಧ ಪಕ್ಷಗಳ ಬಿಜೆಪಿ, ಜೆಡಿಎಸ್ ಸದಸ್ಯರು ವಿಧಾನಪರಿಷತ್ನಲ್ಲೂ ಪಟ್ಟು ಹಿಡಿದರು.

ಲಂಚ ಪ್ರಕರಣದಲ್ಲಿ ಅಬಕಾರಿ ಉಪ ಆಯುಕ್ತ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಬಿದ್ದ ವಿಚಾರದ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವರನ್ನು ತಕ್ಷಣ ವಜಾ ಮಾಡಬೇಕು. ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ನಿಯಮ 330ಕ್ಕೆ ಬದಲಾಯಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ಮುಖ್ಯಸಚೇತಕ ಎನ್.ರವಿಕುಮಾರ್ ಸೇರಿದಂತೆ ಬಿಜೆಪಿ, ಜೆಡಿಎಸ್ ಸದಸ್ಯರು ಅಬಕಾರಿ ಹಗರಣದ ಘೋಷಣಾ ಫಲಕಗಳನ್ನು ಪ್ರದರ್ಶಿಸಿ, ಪ್ರತಿಭಟನೆ ನಡೆಸಿದರು.

ವಿಬಿ ಜಿ ರಾಮ್ ಜಿ: ಚರ್ಚೆ

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಇದೇ 27 ಮತ್ತು 28ರಂದು ಚರ್ಚೆ ನಡೆಯಲಿದೆ. ಇದಕ್ಕೆ 28ರಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಲಿದ್ದಾರೆ. ಇದೇ 29ರಿಂದ 31ರವರೆಗೆ ವಿಬಿ ಜಿ ರಾಮ್ ಜಿ ಕಾಯ್ದೆಯ ನಿರ್ಣಯ ಕುರಿತು ಚರ್ಚೆ ನಡೆಯಲಿದ್ದು, 31ರಂದು ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.