1933ರ ವಸತಿಗೃಹದಲ್ಲಿ ವಾಸ

ರಾಯಚೂರು ಜಿಲ್ಲೆ ತುರುವಿಹಾಳ ಪಟ್ಟಣದ ಬಳಗನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವಸತಿ ಗೃಹಗಳಿದ್ದು, ಈ ವಸತಿ ಗೃಹಗಳ ಕಟ್ಟಡ 1933ನೇ ಸಾಲಿನಲ್ಲಿ ನಿರ್ಮಾಣಗೊಂಡಿದ್ದು, ಶಿಥಿಲಾವಸ್ಥೆ ಯಲ್ಲಿರುವ ಈ ವಸತಿಗೃಹದಲ್ಲಿ 10 ಪೊಲೀಸ್ ಸಿಬ್ಬಂದಿ ಕುಟುಂಬಗಳು ವಾಸವಿದ್ದು, ಈ ಕಟ್ಟಡ ನೆಲಸಮಗೊಳಿಸಿ ಹೊಸದಾಗಿ ಕಟ್ಟಿಕೊಡಲಾಗುವುದು

-ಜಿ.ಪರಮೇಶ್ವರ, ಗೃಹ ಸಚಿವ.

ಪ್ರಶ್ನೆ: ಬಸನಗೌಡ ತುರವಿಹಾಳ್, ಕಾಂಗ್ರೆಸ್

ಮದ್ಯಪಾನ ಜಾಗೃತಿಗೆ ಅನುದಾನವಿಲ್ಲ

ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿಲ್ಲ. ಇದಕ್ಕೆ ಅನುದಾನದ ಕೊರತೆ ಇದೆ. ಇದಕ್ಕಾಗಿ ಹೆಚ್ಚು ಅನುದಾನ ಕೇಳುತ್ತೇವೆ. ಗ್ರಾಮ ಸಭೆಗಳಿಗೆ ಹೋಗಿ ಅಹವಾಲುಗಳನ್ನು ಕೇಳದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಗ್ರಾಮಾಂತರ ಪ್ರದೇಶದಲ್ಲಿ ಸಾರಾಯಿ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ

-ಆರ್.ಬಿ.ತಿಮ್ಮಾಪುರ, ಅಬಕಾರಿ ಸಚಿವ.

ಪ್ರಶ್ನೆ: ಹರೀಶ್ ಬಿ.ಪಿ

ಸಿಗಂದೂರಿಗೆ ಪೋಲಿಸ್ ಠಾಣೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರಿಗೆ ಅಪಾರ ಪ್ರಮಾಣದ ಪ್ರವಾಸಿಗರು ಮತ್ತು ಭಕ್ತರು ಬರುವುದರಿಂದ ಪೊಲೀಸ್ ಠಾಣೆ ಆರಂಭಿಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಪೊಲೀಸ್ ಆಯೋಗ ವರದಿಯ ಮಾರ್ಗಸೂಚಿಯ ಮಾನದಂಡವನ್ನು ಸಡಿಲಿಸುತ್ತೇವೆ

-ಜಿ.ಪರಮೇಶ್ವರ, ಗೃಹ ಸಚಿವ.

ಪ್ರಶ್ನೆ: ಗೋಪಾಲಕೃಷ್ಣ ಬೇಳೂರು, ಕಾಂಗ್ರೆಸ್

ರಾಜ್ಯದಲ್ಲಿ 600 ಹುಲಿಗಳು

ರಾಜ್ಯದಲ್ಲಿ ಹಿಂದಿನ ಹುಲಿ ಗಣತಿ ನಡೆದಾಗ 563 ಹುಲಿಗಳು ಇರುವುದು ಪತ್ತೆಯಾಗಿತ್ತು. ಈಚೆಗೆ ಹುಲಿ-ಮಾನವ ಸಂಘರ್ಷ ಹೆಚ್ಚಾದ ಕಾರಣ, ಕ್ಯಾಮೆರಾ ಟ್ರ್ಯಾಪ್ ಮತ್ತಿತರ ವಿಧಾನಗಳ ಮೂಲಕ ಹುಲಿಗಳ ಸಂಖ್ಯೆ ಲೆಕ್ಕಹಾಕಲಾಗಿದೆ. ರಾಜ್ಯದಲ್ಲಿ ಈಗ 600ಕ್ಕೂ ಹೆಚ್ಚು ಹುಲಿಗಳು ಇರುವುದು ಪತ್ತೆಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಧಾರಣಾ ಸಾಮರ್ಥ್ಯ 100 ಹುಲಿಗಳಷ್ಟು ಮಾತ್ರ. ಆದರೆ ಅಲ್ಲಿ ಈಗ 200ರಷ್ಟು ಹುಲಿಗಳಿವೆ ಎಂಬುದು ಗೊತ್ತಾಗಿದೆ. ಮಾನವ-ವನ್ಯಜೀವಿ ಸಂಘರ್ಷಕ್ಕೆ ಗುರಿಯಾಗಿದ್ದ 32 ಹುಲಿಗಳನ್ನು ಸೆರೆಹಿಡಿಯಲಾಗಿದೆ

-ಈಶ್ವರ ಬಿ.ಖಂಡ್ರೆ, ಅರಣ್ಯ ಸಚಿವ.

ಪ್ರಶ್ನೆ: ಡಿ.ತಿಮ್ಮಯ್ಯ, ಕಾಂಗ್ರೆಸ್

ಕಾಯಂ ವೈದ್ಯಕೀಯ ಅಧೀಕ್ಷಕರಿಲ್ಲ

*33 ರಾಜ್ಯದಲ್ಲಿರುವ ವೈದ್ಯಕೀಯ ಸಂಸ್ಥೆಗಳ ಸಂಖ್ಯೆ

*4 ವೈದ್ಯಕೀಯ ಅಧೀಕ್ಷಕರ ಕಾಯಂ ನೇಮಕಾತಿ ಆಗಿರುವ ಸಂಸ್ಥೆಗಳು

*21 ಪ್ರಭಾರ ವೈದ್ಯಕೀಯ ಅಧೀಕ್ಷಕರು ಇರುವ ಸಂಸ್ಥೆಗಳು

*6 ವೈದ್ಯಕೀಯ ಅಧೀಕ್ಷಕ ಹುದ್ದೆಯೇ ಸೃಜನೆಯಾಗದ ಸಂಸ್ಥೆಗಳು

*1 ವೈದ್ಯಕೀಯ ಅಧೀಕ್ಷಕರ ನಿಯೋಜನೆ ಇಲ್ಲದ ಸಂಸ್ಥೆ

ಭ್ರೂಣ ಪತ್ತೆ ತಡೆಗೆ ಚಿಂತನೆ

ಒಂದೆಡೆಯಿಂದ ಮತ್ತೊಂದೆಡೆಗೆ ಸುಲಭವಾಗಿ ಸಾಗಿಸ ಬಹುದಾದ ಪೋರ್ಟೆಬಲ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳು ಬಳಕೆಯಲ್ಲಿವೆ. ಈ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಭ್ರೂಣ ಲಿಂಗ ಪತ್ತೆ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಹೆಣ್ಣು ಭ್ರೂಣ ಹತ್ಯೆಗಳಿಗೆ ಇದು ಕಾರಣವಾಗುತ್ತಿದೆ. ಹೀಗಾಗಿ ಇಂತಹ ಯಂತ್ರಗಳಿಗೆ ಕಡಿವಾಣ ಹಾಕಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ.

ಪ್ರಶ್ನೆ: ಸಿ.ಟಿ.ರವಿ, ಬಿಜೆಪಿ

ಮತ್ತಷ್ಟು ಕ್ಯಾನ್ಸರ್ ಆಸ್ಪತ್ರೆ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವುದು ಸರ್ಕಾರದ ಗುರಿ. ಅದರಂತೆಯೇ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುವ ಮತ್ತು ದೂರದ ಜಿಲ್ಲೆಗಳ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೇರೆಡೆ ಕ್ಯಾನ್ಸರ್ ಆಸ್ಪತ್ರೆ ಗಳನ್ನು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ಆರಂಭಿಸಲಾಗು
ತ್ತಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಡಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

-ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ.

ಪ್ರಶ್ನೆ: ಎಂ.ಪಿ.ಕುಶಾಲಪ್ಪ, ಬಿಜೆಪಿ

ಕಸ್ತೂರಿರಂಗನ್ ವರದಿ ಜಾರಿ ಸಾಧ್ಯವಿಲ್ಲ

ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಈವರೆಗೆ ಆರು ಅಧಿಸೂಚನೆಗಳನ್ನು ಹೊರಡಿಸಿದ್ದು, ಅವುಗಳ ಜಾರಿ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆಅಷ್ಟೂ ಬಾರಿ ಪತ್ರ ಬರೆದಿದ್ದೇವೆ. ಸರ್ಕಾರದ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. 2024ರಲ್ಲಿ ಕೇಂದ್ರವು ಹೊರಡಿಸಿದ್ದ 6ನೇ ಅಧಿಸೂಚನೆಯಲ್ಲಿ ರಾಜ್ಯದ ಪಶ್ಚಿಮ ಘಟ್ಟದ 20,668 ಚದರ ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ಸೂಚಿಸಿತ್ತು. ಅದರಲ್ಲಿ 16,000 ಚದರ ಕಿ.ಮೀ.ನಷ್ಟು ಪ್ರದೇಶವು ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಿತ ಪ್ರದೇಶ ಮತ್ತು ಸಂರಕ್ಷಿತ ಅರಣ್ಯ ಪ್ರದೇಶ ಇವೆ. ಉಳಿದ 4,000 ಚದರ ಕಿ.ಮೀ. ಪ್ರದೇಶ ಅರಣ್ಯ ಪ್ರದೇಶದಿಂದ ಹೊರಗೆ ಇದೆ.ಈ ವರದಿ ಜಾರಿ ಸಾಧ್ಯವಿಲ್ಲ ಎಂದು ಕೇಂದ್ರದ ಅಧಿಸೂಚನೆಯನ್ನು ತಿರಸ್ಕರಿಸಿದ್ದೇವೆ.

-ಈಶ್ವರ ಬಿ.ಖಂಡ್ರೆ, ಅರಣ್ಯ ಸಚಿವ.

ಪ್ರಶ್ನೆ: ಐವನ್ ಡಿಸೋಜ, ಕಾಂಗ್ರೆಸ್

ಶಿವಮೊಗ್ಗಕ್ಕೆ ಪೊಲೀಸ್ ಕಮಿಷನರೇಟ್ ಪರಿಶೀಲನೆ

ಶಿವಮೊಗ್ಗ ಜಿಲ್ಲೆಗೆ ಹೊಸದಾಗಿ 32 ಎಸ್ಐಗಳನ್ನು ನೀಡಲಾಗುವುದು. ಈ ಎಸ್ಐಗಳು ತರಬೇತಿ ಹಂತದಲ್ಲಿದ್ದಾರೆ. ಮುಂದಿನ ಹಂತದಲ್ಲಿ ಇನ್ನೂ 10 ಎಸ್ಐ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶಿವಮೊಗ್ಗಕ್ಕೆ ಪೊಲೀಸ್ ಕಮಿಷನರೇಟ್ ಮಾಡಲು ಕೆಲವು ಮಾನದಂಡ ಅನುಸರಿಸಬೇಕಾಗುತ್ತದೆ. ಸಾಧಕ–ಬಾಧಕಗಳನ್ನು ನೋಡಿ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುತ್ತೇವೆ. ರಾಜ್ಯದಲ್ಲಿ 1600 ಪಿಎಸ್ಐ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಮಂಡಿಸಲಾಗಿದೆ

-ಜಿ.ಪರಮೇಶ್ವರ,ಗೃಹ ಸಚಿವ.

ಪ್ರಶ್ನೆ: ಎಸ್.ಎನ್. ಚನ್ನಬಸಪ್ಪ, ಬಿಜೆಪಿ