ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಸಂಜೆ 5 ಗಂಟೆ ನಡುವಣ ಅವಧಿಯಲ್ಲಿ 204 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 8 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,734 ಆಗಿದ್ದು, ಸಾವಿನ ಸಂಖ್ಯೆ 102ಕ್ಕೆ ಏರಿಕೆಯಾಗಿದೆ. ಈವರೆಗೆ 4,804 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2,824 ಸಕ್ರಿಯ ಪ್ರಕರಣಗಳಿವೆ.

ಇಂದು 348 ಮಂದಿ ಚೇತರಿಕೆಯಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹೊಸದಾಗಿ ಕಂಡುಬಂದ ಪ್ರಕರಣಗಳ ಪೈಕಿ ಇಬ್ಬರು ಬೇರೆ ದೇಶದಿಂದ ಬಂದವರಾದರೆ, 106 ಮಂದಿ ಅನ್ಯ ರಾಜ್ಯಗಳಿಂದ ಬಂದವರು.

ಇದನ್ನೂ ಓದಿ:Covid-19 India Update: ಒಂದೇ ದಿನ 2 ಸಾವಿರದ ಗಡಿ ದಾಟಿದ ಮೃತರ ಸಂಖ್ಯೆ

ಬೆಂಗಳೂರು ನಗರದಲ್ಲಿ ಅತಿಹೆಚ್ಚು, 55 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ, ಯಾದಗಿರಿ 37, ಬಳ್ಳಾರಿ 29, ಕಲಬುರ್ಗಿ 19, ಬೀದರ್ 12, ದಕ್ಷಿಣಕನ್ನಡ, ಧಾರವಾಡ ತಲಾ 8, ಮಂಡ್ಯ 7, ಹಾಸನ 5, ಉಡುಪಿ, ಬಾಗಲಕೋಟೆ, ಶಿವಮೊಗ್ಗ ತಲಾ 4, ದಾವಣಗೆರೆ, ಚಿಕ್ಕಬಳ್ಳಾಪುರ, ಉತ್ತರಕನ್ನಡ ತಲಾ 3, ರಾಯಚೂರು, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ 1 ಪ್ರಕರಣ ದೃಢಪಟ್ಟಿವೆ.

ದಾವಣಗೆರೆಜಿಲ್ಲೆಯಲ್ಲಿ ಮೂವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದುದೃಢಪಟ್ಟಿದೆ.45 ವರ್ಷದ ವ್ಯಕ್ತಿಗೆ (ಪಿ.7575) 6575ರ ಸಂಪರ್ಕದಿಂದ ಸೋಂಕು ತಗುಲಿದೆ. 50 ವರ್ಷದ ವ್ಯಕ್ತಿ (ಪಿ.7576) ಶೀತಜ್ವರ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದಿಂದ ಬಂದ 20 ವರ್ಷದ ಯುವತಿಯಲ್ಲಿ (ಪಿ.7577) ಸೋಂಕು ಕಾಣಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.