ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕೀಯ ದಿಗ್ವಿಜಯಕ್ಕೆ ಯಾಗದ ಮೊರೆ ಹೋದ ಎಚ್‌ಡಿಕೆ| ಇದೇ ಯಾಗ ಮಾಡಿಸಿದ್ದ KCR

ಫಾಲೋ ಮಾಡಿ
Comments

ಬಿಡದಿ (ರಾಮನಗರ): ಇಲ್ಲಿನ ಕೇತಗಾನಹಳ್ಳಿಯಲ್ಲಿ ಇರುವ ತೋಟದ ಮನೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಕುಟುಂಬವು 9 ದಿನಗಳ ಕಾಲ ಮಹಾಯಾಗ ಹಮ್ಮಿಕೊಂಡಿದೆ.

ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಯಾಗಕ್ಕೆ ಚಾಲನೆ ನೀಡಲಾಯಿತು. ಶಾಸಕರಾದ ಎಚ್‌.ಡಿ. ಕುಮಾರಸ್ವಾಮಿ –ಅನಿತಾ ದಂಪತಿ, ಎಚ್‌.ಡಿ. ರೇವಣ್ಣ ಹಾಗೂ ದೇವೇಗೌಡರ ಕುಟುಂಬದ ಆಪ್ತರಷ್ಟೇ ಪಾಲ್ಗೊಂಡಿದ್ದರು.

ಆಯತ ಚಂಡಿಯಾಗ ಜತೆಗೆ ಮಹಾರುದ್ರ ಸ್ವಾಹಾಕಾರ ಯಾಗವನ್ನು ಎಚ್‌ಡಿಕೆ ಕುಟುಂಬ ಕೈಗೊಂಡಿದೆ. ಕರ್ನಾಟಕ, ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರ ಸೇರಿದಂತೆ ನಾನಾ ಕಡೆಯಿಂದ 250 ರಿಂದ 300 ಪುರೋಹಿತರು ಈ ಯಾಗ ನಡೆಸಿಕೊಡುತ್ತಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಈ ಹಿಂದೆ ರಾಜಕೀಯ ದಿಗ್ವಿಜಯಕ್ಕಾಗಿ ಇಂತಹದ್ದೇ ಯಾಗ ನಡೆಸಿದ್ದರು. ಅಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರೇ ಇಲ್ಲಿಯೂ ನೇತೃತ್ವ ವಹಿಸಿದ್ದಾರೆ.

‘ನಮ್ಮ ತಂದೆ ಎಚ್‌.ಡಿ. ದೇವೇಗೌಡರ ಆರೋಗ್ಯ ವೃದ್ಧಿಯಾಗಲಿ, ನಮ್ಮ ಪಂಚರತ್ನ ಯೋಜನೆಗಳು ಯಶಸ್ವಿಯಾಗಲಿ ಮತ್ತು ನಾಡು ಸಮೃದ್ಧಿಯಾಗಲಿ ಎನ್ನುವ ಕಾರಣದಿಂದ ಈ ಯಾಗ ಹಮ್ಮಿಕೊಂಡಿದ್ದೇವೆ’ ಎಂದು ಕುಮಾರಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT