ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್ಸಿ) ವಿದ್ಯುತ್ ದರಗಳನ್ನು ಪರಿಷ್ಕರಿಸಿದ್ದು, ಕೃಷಿ ಪಂಪ್ಸೆಟ್ಗಳಿಗೆ ಬಳಸುವ ವಿದ್ಯುತ್ ದರವನ್ನು ಯೂನಿಟ್ಗೆ ಸರಾಸರಿ 95 ಪೈಸೆ ಕಡಿಮೆ ಮಾಡಿದೆ. ಆದರೆ, ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಹೆಚ್ಚಿಸಲಾಗಿದೆ.

2025–26ನೇ ಸಾಲಿಗೆ ನಿಗದಿಪಡಿಸಿರುವ ವಿದ್ಯುತ್ ದರಗಳನ್ನು ಪರಿಷರಿಸಬೇಕು ಎಂದು ಎಸ್ಕಾಂಗಳು ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೆಇಆರ್ಸಿ ಒಪ್ಪಿಗೆ ನೀಡಿ, ಪರಿಷ್ಕೃತ ದರಗಳನ್ನು ಮಂಗಳವಾರ ಪ್ರಕಟಿಸಿದೆ. ಆದರೆ, ಇದು ಯಾವಾಗ ಜಾರಿಯಾಗಲಿದೆ ಎಂಬ ಬಗ್ಗೆ ಕೆಇಆರ್ಸಿ ಆದೇಶದಲ್ಲಿ ಸ್ಪಷ್ಟನೆ ಇಲ್ಲ. ಆದರೆ, ಇದು 2025–26ನೇ ಸಾಲಿನ ಪರಿಷ್ಕೃತ ದರವಾಗಿರುವುದರಿಂದ 2025ರ ಏಪ್ರಿಲ್ ಒಂದರಿಂದಲೇ ಪೂರ್ವಾನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಬಳಸುವ ವಿದ್ಯುತ್ ದರವನ್ನು ಯೂನಿಟ್ಗೆ ಕನಿಷ್ಠ 10 ಪೈಸೆಯಿಂದ ಗರಿಷ್ಠ 95 ಪೈಸೆವರೆಗೆ ಹೆಚ್ಚಿಸಲಾಗಿದೆ.

ಕೃಷಿಗೆ ಬಳಸುವ ವಿದ್ಯುತ್ ದರವನ್ನು ಕಡಿಮೆ ಮಾಡಿರುವುದರಿಂದ, ಸಹಾಯಧನದ ರೂಪದಲ್ಲಿ ನೀಡುವ ಮೊತ್ತವು ₹1,254.88 ಕೋಟಿಯಷ್ಟು ಸರ್ಕಾರಕ್ಕೆ ಉಳಿತಾಯವಾಗಲಿದೆ.

ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಕೃಷಿಗೆ ಬಳಸುವ ಪ್ರತಿ ಯೂನಿಟ್ ವಿದ್ಯುತ್ಗೆ ಪ್ರಸ್ತುತ ₹8.30 ಪೈಸೆ ದರ ಇತ್ತು. ಇದನ್ನು ಪರಿಷ್ಕರಿಸಿ ಬೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್ಗೆ ₹6.57, ಮೆಸ್ಕಾಂ ವ್ಯಾಪ್ತಿಯಲ್ಲಿ ₹7.40, ಚೆಸ್ಕಾಂ ವ್ಯಾಪ್ತಿಯಲ್ಲಿ ₹7.73, ಹೆಸ್ಕಾಂ ವ್ಯಾಪ್ತಿಯಲ್ಲಿ ₹7.73 ಹಾಗೂ ಜೆಸ್ಕಾಂ ವ್ಯಾಪ್ತಿಯಲ್ಲಿ ₹7.79 ನಿಗದಿಪಡಿಸಲಾಗಿದೆ.

ಹಿಂದೆ ಎಲ್ಲ ಕಂಪನಿಗಳ ವ್ಯಾಪ್ತಿಯಲ್ಲಿ ಕೃಷಿ ಪಂಪ್ಸೆಟ್ಗಳಿಗೆ ಒಂದೇ ರೀತಿಯ ದರವನ್ನು ನಿಗದಿಪಡಿಸಲಾಗಿತ್ತು. ಆದರೆ, ಈಗ ಕಂಪನಿವಾರು ಪ್ರತ್ಯೇಕವಾಗಿ ದರ ನಿಗದಿಪಡಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚು ಪಂಪ್ಸೆಟ್ಗಳು ಇದ್ದು, ಇಲ್ಲಿ ಕಡಿಮೆ ದರ ನಿಗದಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.