ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌರ್ಯ ಪ್ರಶಸ್ತಿಗೆ ನೀಡುವ ಅನುದಾನ 5 ಪಟ್ಟು ಹೆಚ್ಚಿಸಿ ಆದೇಶ: ಸಿಎಂ ಬೊಮ್ಮಾಯಿ

Last Updated 16 ಡಿಸೆಂಬರ್ 2021, 6:23 IST
ಅಕ್ಷರ ಗಾತ್ರ

ಬೆಳಗಾವಿ: 'ಶೌರ್ಯ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರ್ಕಾರದಿಂದ ಒಂದು ಬಾರಿ ನೀಡುವ ನಗದು ಅನುದಾನವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಸರಾಸರಿ 5 ಪಟ್ಟು ಹೆಚ್ಚಳ ಮಾಡಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಭಾರತವು 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಜಯ ಸಾಧಿಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ ಮರಾಠಾ ಲಘು ಪದಾತಿ ದಳ ಕೇಂದ್ರ (ಎಂಎಲ್ಐಆರ್‌ಸಿ)ದಲ್ಲಿ ಗುರುವಾರ ನಡೆದ 'ವಿಜಯ ದಿವಸ' ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ನಂತರ ಅವರು ಮಾತನಾಡಿದರು.

'ಪರಮವೀರ ಚಕ್ರ ₹ 25 ಲಕ್ಷದಿಂದ ₹ 1.5 ಕೋಟಿ, ಮಹಾವೀರ ಚಕ್ರ ₹ 12 ಲಕ್ಷ‌ದಿಂದ ₹ 1 ಕೋಟಿ, ಅಶೋಕ ಚಕ್ರ ₹ 25 ಲಕ್ಷದಿಂದ ₹ 1.5 ಕೋಟಿ, ಕೀರ್ತಿ ಚಕ್ರ ₹ 12 ಲಕ್ಷದಿಂದ ₹ 1ಕೋಟಿ, ವೀರ ಚಕ್ರ ಹಾಗೂ ಶೌರ್ಯ ಚಕ್ರ ತಲಾ ₹ 8 ಲಕ್ಷದಿಂದ ₹ 50 ಲಕ್ಷಕ್ಕೆ ಹಾಗೂ ಭೂಸೇನಾ, ನೌಕಾ ಸೇನಾ ಹಾಗೂ ವಾಯುಸೇನಾ ಮೆಡಲ್ ತಲಾ ₹ 2 ಲಕ್ಷದಿಂದ ₹ 15 ಲಕ್ಷಕ್ಕೆ ಮತ್ತು 'ಮೆನ್ ಶನ್ ಎಎನ್‌ಡಿಎಸ್ ಪ್ಯಾಚ್'ಗೆ ₹ 2 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT