ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಒಡೆಯುವ ಮನಸ್ಸುಗಳಿಗಿಂತ ಕೂಡಿಬಾಳುವ ಮನಸ್ಸುಗಳೇ ಹೆಚ್ಚು:ಸಿದ್ದರಾಮಯ್ಯ

Published : 20 ಅಕ್ಟೋಬರ್ 2023, 10:08 IST
Last Updated : 20 ಅಕ್ಟೋಬರ್ 2023, 10:08 IST
ಫಾಲೋ ಮಾಡಿ
Comments

ಬೆಂಗಳೂರು: ಕರುನಾಡಿನಲ್ಲಿ ಒಡೆಯುವ ಮನಸ್ಸುಗಳಿಗಿಂತ ಕೂಡಿಬಾಳುವ ಮನಸ್ಸುಗಳೇ ಹೆಚ್ಚು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಾತ್ರೆ ವ್ಯಾಪಾರ: ‘ಧರ್ಮ’ಕ್ಕೆ ಸೊಪ್ಪುಹಾಕದ ಗ್ರಾಹಕರು’ ಎಂಬ ಪ್ರಜಾವಾಣಿಯ ವಿಶೇಷ ವರದಿಯನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಅವರು, ಸೌಹಾರ್ದತೆಯ ನೆಲದಲ್ಲಿ ದ್ವೇಷದ ಬೆಂಕಿ ಬಹುಕಾಲ ಬಾಳದು. ಕರುನಾಡಿನಲ್ಲಿ ಒಡೆಯುವ ಮನಸುಗಳಿಗಿಂತ ಕೂಡಿಬಾಳುವ ಮನಸುಗಳೇ ಹೆಚ್ಚಿವೆ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಹೇಳಿದ್ದಾರೆ.

‘ಕೋಮುವಾದದ ಪ್ರಯೋಗಶಾಲೆಯೆಂದು ಹೇಳಲಾಗುವ ಕರಾವಳಿ ಸೌಹಾರ್ದತೆಯ ಪಾಠಶಾಲೆಯಾಗಲಿ, ಇದಕ್ಕಾಗಿ ಕರಾವಳಿಯ ಎಲ್ಲ ಸೌಹಾರ್ದ ಮನಸುಗಳು ಒಂದಾಗಲಿ ಎಂದು ಆಶಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT