ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ದ 75 ಸರ್ಕಾರಿ ಶಾಲೆಗಳಿಗೆ ‘ನೇತಾಜಿ ಅಮೃತ ಶಾಲೆಗಳು’ ಪಟ್ಟ

Last Updated 25 ಜನವರಿ 2022, 11:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲೆಗೆ ಕನಿಷ್ಠ 2ರಂತೆ ಒಟ್ಟು 75 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ‘ನೇತಾಜಿ ಅಮೃತ ಶಾಲೆಗಳು’ ಎಂದು ಘೋಷಿಸಿ, ಈ ಶಾಲೆಗಳಲ್ಲಿ ಎನ್‌ಸಿಸಿ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ನೇತಾಜಿ ಅಮೃತ ಶಾಲೆಗಳು’ ಎಂದು ಘೋಷಿಸುವ ಪ್ರತಿ ಶಾಲೆಯಿಂದ 100 ವಿದ್ಯಾರ್ಥಿಗಳಂತೆ ಒಟ್ಟು 7,500 ವಿದ್ಯಾರ್ಥಿಗಳಿಗೆ ಎನ್‌ಸಿಸಿ ತರಬೇತಿ ನೀಡಲು, ಒಬ್ಬ ವಿದ್ಯಾರ್ಥಿಗೆ ತಗಲುವ ವೆಚ್ಚ ತಲಾ ₹12 ಸಾವಿರದಂತೆ ಒಟ್ಟು ₹9 ಕೋಟಿ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.

ಸದ್ಯ ರಾಜ್ಯದಲ್ಲಿ 44 ಸಾವಿರಗಳಲ್ಲಿ ಶಾಲೆಗಳಲ್ಲಿ ಮತ್ತು 3,400 ಕಾಲೇಜುಗಳಲ್ಲಿ ಎನ್‌ಸಿಸಿ ಘಟಕಗಳಿವೆ. ಹೀಗೆ ಒಟ್ಟು 78 ಸಾವಿರ ಘಟಕಗಳಿವೆ.

ಎನ್‌ಸಿಸಿ ಪುನಶ್ಚೇತನಗೊಳಿಸುವ ಮತ್ತು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 125ನೇ ಜನ್ಮ ದಿನಾಚರಣೆ ಕುರಿತಂತೆ ಇದೇ 23ರಂದು ಎನ್‌ಸಿಸಿ ಕಮಾಂಡರ್‌ ಪಿ.ಎಸ್‌. ಕನ್ವಾರ್‌ ಅವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಂತೆ ಪ್ರತಿ ಜಿಲ್ಲೆಗೆ ಕನಿಷ್ಠ 2ರಂತೆ ಒಟ್ಟು 75 ಶಾಲೆಗಳಲ್ಲಿ ಎನ್‌ಸಿಸಿ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT