ಬೆಂಗಳೂರು: ‘ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಹೈಕೋರ್ಟ್ನ 50 ನ್ಯಾಯಮೂರ್ತಿಗಳಲ್ಲಿ ಯಾವ್ಯಾವ ನ್ಯಾಯಮೂರ್ತಿಗಳು ಎಷ್ಟೆಷ್ಟು ಕೇಸುಗಳನ್ನು ವಿಲೇವಾರಿ ಮಾಡುತ್ತಿದ್ದಾರೆ ಎಂಬ ಅಂಕಿ ಅಂಶಗಳನ್ನು ಪ್ರತಿ ತಿಂಗಳೂ ಸಾರ್ವಜನಿಕ ಅವಗಾಹನೆಗೆ ಬಿಡುಗಡೆ ಮಾಡುವಂತಾಗಬೇಕು’ ಎಂದು ಹೈಕೋರ್ಟ್ನ ಹಿರಿಯ ವಕೀಲರು ಆಗ್ರಹಿಸಿದ್ದಾರೆ.

‘ತಿಂಗಳ ಪ್ರತಿ ಶನಿವಾರಗಳಂದೂ ಹೈಕೋರ್ಟ್ನ ಪೂರ್ಣ ಕಲಾಪ ನಡೆಸುವ ಪ್ರಸ್ತಾವವನ್ನು 2026ರ ಜನವರಿಯಿಂದ ಅನುಷ್ಠಾನಗೊಳಿಸಬೇಕು’ ಎಂಬ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮತ್ತು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಕೆಲವು ಹಿರಿಯ ವಕೀಲರು, ‘ಈಗಿರುವ ಎಲ್ಲ ನ್ಯಾಯಮೂರ್ತಿಗಳ ಕಾರ್ಯಕ್ಷಮತೆ ವೃದ್ಧಿಯಾದರೆ ಶನಿವಾರವೂ ಕೆಲಸ ನಿರ್ವಹಿಸುವ ಅಗತ್ಯವೇ ಬರುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

‘ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನ್ಯಾಯಮೂರ್ತಿಗಳೂ ತಾವು ವಿಲೇವಾರಿ ಮಾಡುವ ಕೇಸುಗಳ ಸಂಖ್ಯೆಯನ್ನು ತಿಂಗಳ ಕೊನೆಯಲ್ಲಿ ಸಾರ್ವಜನಿಕ ಅವಗಾಹನೆಗೆ ಬಿಡುಗಡೆ ಮಾಡಬೇಕು. ಈ ದಿಸೆಯಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ನಿಖರ ಅಂಕಿ ಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಎಎಬಿ ಸಭೆ:

ತಿಂಗಳಲ್ಲಿ ಎರಡನೇ ಶನಿವಾರವನ್ನು ಹೊರತುಪಡಿಸಿ ಉಳಿದ ಶನಿವಾರಗಳಂದೂ ಹೈಕೋರ್ಟ್ನ ಪೂರ್ಣ ಕಲಾಪ ನಡೆಸುವ ಮುಖ್ಯ ನ್ಯಾಯಮೂರ್ತಿಗಳ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬೆಂಗಳೂರು ವಕೀಲರ ಸಂಘ ಮಂಗಳವಾರ (ಡಿ.16) ಸಾಮಾನ್ಯ ಸಭೆ ಕರೆದಿದೆ.

‘ಸಂಘದ ಬೈ–ಲಾದ ನಿಯಮ 17 ಎ ಅಡಿಯಲ್ಲಿ ಮಂಗಳವಾರ ಮಧ್ಯಾಹ್ನ 1.30ಕ್ಕೆ ಹೈಕೋರ್ಟ್ನ ವಕೀಲರ ಸಂಘದ ಹಾಲ್ನಲ್ಲಿ ಈ ಸಭೆ ನಡೆಯಲಿದೆ. ಸದಸ್ಯರು ಮತ್ತು ಎಲ್ಲ ಪದಾಂಕಿತ ಹಿರಿಯ ವಕೀಲರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬೇಕು’ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾಗತ:

‘ಸುಪ್ರೀಂ ಕೋರ್ಟ್ ನಿರ್ದೆಶನದ ಅನುಸಾರ ಶನಿವಾರಗಳಂದೂ ಹೈಕೋರ್ಟ್ನ ಕಲಾಪ ನಡೆಸಲು ಮುಂದಾಗಿರುವ ಮುಖ್ಯ ನ್ಯಾಯಮೂರ್ತಿಗಳ ಪ್ರಸ್ತಾವ ಸ್ವಾಗತಾರ್ಹ’ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಎಂ.ದೇವರಾಜ್ ಸ್ವಾಗತಿಸಿದ್ದಾರೆ.

ಪರಿಷತ್ನ ಮತ್ತೊಬ್ಬ ಸದಸ್ಯ ಎಸ್.ಹರೀಶ್, ‘ಪ್ರತಿ ಶನಿವಾರ ಹೈಕೋರ್ಟ್ ಮಾತ್ರವಲ್ಲ ಎಲ್ಲ ಅಧೀನ ನ್ಯಾಯಾಲಯಗಳಿಗೂ ರಜೆ ಕೊಡಬೇಕು. ಇವತ್ತು ವಕೀಲರ ವೃತ್ತಿಯ ಒತ್ತಡ ಹೆಚ್ಚಾಗುತ್ತಿದ್ದು ಅವರ ಆರೋಗ್ಯದ ಮೇಲೆ ತೀವ್ರ ದುಷ್ಟರಿಣಾಮ ಬೀರುತ್ತಿದೆ. ಲೋಕ ಅದಾಲತ್ ಮತ್ತು ಪರ್ಯಾಯ ನ್ಯಾಯ ತೀರ್ಮಾನ ಕೇಂದ್ರಗಳು ನಿವೃತ್ತ ನ್ಯಾಯಾಧೀಶರಿಗೆ ಗಂಜಿ ಕೇಂದ್ರಗಳಂತಾಗಿವೆ. ಲೋಕ ಅದಾಲತ್ಗಳಲ್ಲಿ ಕೇಸುಗಳು ಸರಿಯಾದ ರೀತಿಯಲ್ಲಿ ತೀರ್ಮಾನವಾಗುತ್ತಿಲ್ಲ. ಸಮಸ್ಯೆ ಪರಿಹರಿಸಬೇಕು ಎಂದರೆ ಕೋರ್ಟ್ಗಳ ಮೂಲಸೌಕರ್ಯ ಹೆಚ್ಚಾಗಬೇಕು. ನ್ಯಾಯಾಧೀಶರು, ನ್ಯಾಯಮೂರ್ತಿಗಳ ಸಂಖ್ಯೆ ದ್ವಿಗುಣಗೊಳ್ಳಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ವಕೀಲ ಎಸ್.ಬಿ.ಮಾರುತಿಗೌಡ, ‘ಅನಗತ್ಯ ರಜೆಗಳಿಂದಾಗಿ ವಕೀಲರಿಗೆ ಮಾತ್ರವಲ್ಲದೆ ನ್ಯಾಯಾಂಗ ಕ್ಷೇತ್ರವನ್ನೇ ನಂಬಿ ಜೀವನ ಕಟ್ಟಿಕೊಂಡಿರುವ ನೋಟರಿಗಳು, ಟೈಪಿಸ್ಟ್ಗಳು, ಹೋಟೆಲ್ ನೌಕರರು, ಜೆರಾಕ್ಸ್ ಅಂಗಡಿಯವರು, ಕ್ಲರ್ಕ್ಗಳು ಹೀಗೆ ಸಾವಿರಾರು ಜೀವನ ಅತಂತ್ರ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿ ಶನಿವಾರದ ಹೈಕೋರ್ಟ್ ಕಲಾಪದಿಂದ ಹತ್ತಾರು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಲು ವಾರದಲ್ಲಿ ಒಂದು ದಿನ ಹೆಚ್ಚುವರಿಯಾಗಿ ದೊರೆಯಲಿದೆ. ಇದರಿಂದ ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸಲು ಸಹಕಾರಿಯಾಗಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪದಾಂಕಿತ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್, ‘ಇಂತಹ ನಿರ್ಧಾರದಿಂದ ವರ್ಷದಲ್ಲಿ 20ರಿಂದ 24 ಶನಿವಾರಗಳು ಸಿಗಬಹುದೇನೊ. ಆದರೆ, ಇಷ್ಟು ದಿನಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಕೇಸುಗಳ ಸಂಖ್ಯೆಯನ್ನು ಕಡಿಮೆ ಮಾಡಿಬಿಡುತ್ತೇವೆ ಎಂಬುದು ಸರಿಯಲ್ಲ’ ಎಂದು ಹೇಳಿದ್ದಾರೆ.

‘ಶನಿವಾರ ಮತ್ತು ಭಾನುವಾರಗಳಂದು ವಕೀಲರು ತಮ್ಮ ದಾವೆ ತಯಾರಿ, ಕಕ್ಷಿಗಾರರ ಜೊತೆ ಚರ್ಚೆ, ಮಧ್ಯಸ್ಥಿಕೆ, ಸಾಕ್ಷಿ ವಿಚಾರಣೆಗೆ ಸಿದ್ಧಗೊಳ್ಳುವುದು... ಹೀಗೆ ಹಲವು ಆದ್ಯತೆಯ ವಿಷಯಗಳಲ್ಲಿ ಮಗ್ನರಾಗಿರುತ್ತಾರೆ. ಹೀಗಾಗಿ, ವಾಸ್ತವದಲ್ಲಿ ಶನಿವಾರಗಳಂದು ಅಧೀನ ನ್ಯಾಯಾಲಯಗಳಿಗೂ ರಜೆ ನೀಡುವ ಅವಶ್ಯಕತೆ ಇದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಸ್ಥಗಿತಗೊಂಡಿರುವ ನ್ಯಾಯಮೂರ್ತಿಗಳ ನೇಮಕ...

‘ಹೈಕೋರ್ಟ್ನಲ್ಲಿ ಕಳೆದ 3–4 ವರ್ಷಗಳಿಂದ ವಕೀಲ ವೃಂದದಿಂದ ಯಾರೊಬ್ಬರನ್ನು ನ್ಯಾಯಮೂರ್ತಿಗಳ ಹುದ್ದೆಗೆ ಪರಿಗಣಿಸಿಲ್ಲ. ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಮುಂದಾಗಬೇಕು’ ಎಂದು ವಕೀಲ ವೃಂದ ಒತ್ತಾಯಿಸಿದೆ.

‘ಕರ್ನಾಟಕ ಹೈಕೋರ್ಟ್ನ ಮಂಜೂರಾತಿ ಸಂಖ್ಯೆ 62. ಅದರಲ್ಲಿ ಸದ್ಯ 50 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತಿಂಗಳ ಕೊನೆಯ ವಾರದಲ್ಲಿ ಹಿರಿಯ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ನಿವೃತ್ತಿ ಹೊಂದುತ್ತಿದ್ದಾರೆ. ಇದರಿಂದ ಒಂದೆಡೆ ನ್ಯಾಯಮೂರ್ತಿಗಳ ಸಂಖ್ಯೆ ಕ್ಷೀಣಗೊಂಡರೆ ಮತ್ತೊಂದೆಡೆ ಕರ್ನಾಟಕ ಹೈಕೋರ್ಟ್ನ ಕೊಲಿಜಿಯಂನಲ್ಲಿ ರಾಜ್ಯದ ನ್ಯಾಯಮೂರ್ತಿಗಳ ಉಪಸ್ಥಿತಿಯೇ ಇಲ್ಲದಂತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.