ನರೇಗಾ ಯೋಜನೆ ಅಡಿ ಬಿಡುಗಡೆಯಾದ ಎಲ್ಲ ಹಣವೂ ನುಂಗಪ್ಪಗಳ ಜೇಬಿಗೆ ಹೋಗುತ್ತಿತ್ತು. ನುಂಗಪ್ಪಗಳ ಹಾವಳಿಗೆ ಕಡಿವಾಣ ಹಾಕಬೇಕೆಂದೇ ವಿಬಿ ಜಿ ರಾಮ್ ಜಿ ಜಾರಿಗೆ ತರಲಾಗಿದೆ. ಗಾಂಧೀಜಿ ಅವರ ರಾಮ ರಾಜ್ಯವನ್ನು ನನಸು ಮಾಡಲು ಜಿ ರಾಮ್ ಜಿ ಬಂದಿದ್ದಾನೆ. ಇದಕ್ಕೆ ಸಂಘಪ್ಪನನ್ನು ಏಕೆ ಪ್ರಶ್ನಿಸಬೇಕು. ಪತ್ರಿಕೆಗಳಿಗೆ ಗಾಂಧೀಜಿ–ಸಂಘಪ್ಪನ ಜಾಹೀರಾತು ನೀಡಲು ಸರ್ಕಾರ ಹಣ ವೆಚ್ಚ ಮಾಡುತ್ತಿದೆ.
ಛಲವಾದಿ ನಾರಾಯಣಸ್ವಾಮಿ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ
ನೀವು ಹೇಳಿದ ನುಂಗಪ್ಪಗಳ ಕತೆ ನಿಜವೇ ಆಗಿದ್ದರೆ ನರೇಗಾ ಅಡಿ ಕೋಟ್ಯಂತರ ಆಸ್ತಿಗಳ ಸೃಜನೆ ಆಗುತ್ತಿರಲಿಲ್ಲ. ನರೇಗಾದಿಂದ ಏನೆಲ್ಲಾ ಅನುಕೂಲವಾಗಿದೆ ಎಂಬುದರ ಬಗ್ಗೆ ಒಂದು ಪವರ್ ಪಾಯಿಂಟ್ ಪ್ರೆಸೆಂಟೇಷನ್ ನೀಡಲಿದ್ದೇನೆ. ದಯವಿಟ್ಟು ಬನ್ನಿ. ಪತ್ರಿಕೆ ನಡೆಸುವುದು ಸುಲಭವಲ್ಲ. ಹಲವು ರಾಜಕಾರಣಿಗಳು ಪತ್ರಿಕೆ ಆರಂಭಿಸಿ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಜಾಹೀರಾತುಗಳು ಇಲ್ಲದೆ ಪತ್ರಿಕೆಗಳು ಹೇಗೆ ನಡೆಯಬೇಕು? ಇಂತಹ ಜಾಹೀರಾತುಗಳು ಇನ್ನಷ್ಟು ಬರಬೇಕು.