ಹುಬ್ಬಳ್ಳಿ: ಇಲಾಖೆಯ ಆಡಳಿತವನ್ನು ಜನರ ಮನೆ ಬಾಗಿಲಿಗೆ ತಂದಿರುವ ಕಂದಾಯ ಸಚಿವ ಅಶೋಕ ಮಾಡುತ್ತಿರುವ ಕೆಲಸವೇ ನಿಜವಾದ ಗ್ರಾಮ ವಾಸ್ತವ್ಯ. ಹಿಂದೆ ಕೆಲ ಜನಪ್ರತಿನಿಧಿಗಳು ಮಧ್ಯರಾತ್ರಿ ಬಂದು ಬೆಳಿಗ್ಗೆ ಎದ್ದು ಹೋಗಿದ್ದು ಗ್ರಾಮ ವಾಸ್ತವ್ಯವೇ? ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೊದಲೆಲ್ಲ ತಮಗೆ ಬರಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಜನ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. ಈಗ ಆಡಳಿತವೇ ಜನರ ಮನೆ ಬಾಗಿಲಿಗೆ ಬಂದಿದೆ. ಇದಕ್ಕೆ ಅಶೋಕ ಅವರ ಗ್ರಾಮ ವಾಸ್ತವ್ಯದ ಯೋಜನೆ ಕಾರಣ ಎಂದರು.

ಓದಿ:ಚುನಾವಣೆ ಬಳಿಕ ಯಡಿಯೂರಪ್ಪ ಬದಲಾವಣೆ ನಿಶ್ಚಿತ: ಬಸನಗೌಡ ಪಾಟೀಲ್ ಯತ್ನಾಳ

ಬಡವರಿಗೆ ಸರ್ಕಾರದ ಯೋಜನೆ ತಲುಪಬೇಕಿದ್ದರೆ ಬುದ್ದಿವಂತಿಕೆ ಬೇಕಾಗಿಲ್ಲ, ಹೃದಯವಂತಿಕೆ ಬೇಕು. ಅಂತಹ ಹೃದಯವಂತಿಕೆ ಕೆಲಸವನ್ನು ಅಶೋಕ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಬೊಮ್ಮಾಯಿ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.