ನವದೆಹಲಿ: ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಸಣ್ಣ ಸಣ್ಣ ಹಾಗೂ ಅವಕಾಶ ವಂಚಿತ ಸಮುದಾಯಗಳನ್ನು ಪರಿಗಣಿಸಬೇಕು ಎಂಬ ಹಕ್ಕೊತ್ತಾಯ ‘ಕೈ’ ಪಾಳಯದಲ್ಲಿ ವ್ಯಕ್ತವಾಗಿದೆ.

‘ಅಹಿಂದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಬಿಂಬಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರ ದಾಖಲೆ ಮುರಿಯುವ ಉಮೇದಿನಲ್ಲಿದ್ದಾರೆ. ಅವರು ಎರಡು ಅವಧಿಗೆ ಮುಖ್ಯಮಂತ್ರಿಯಾಗಲು ಸಣ್ಣ ಸಮುದಾಯಗಳ ಕೊಡುಗೆ ದೊಡ್ಡದು. ಆದರೆ, ತಮ್ಮ ಏಳು ವರ್ಷಗಳ ಅಧಿಕಾರದ ಅವಧಿಯಲ್ಲಿ ಸಣ್ಣ ಸಮುದಾಯಗಳನ್ನು ಗುರುತಿಸಿದ್ದು ಕಡಿಮೆ. ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ಈ ಹಿಂದೆ ಪ್ರಭಾವಿಗಳಿಗೆ ಮಣೆ ಹಾಕಿದ್ದರು. ಈ ಸಲ ಅಂತಹ ಒತ್ತಡಕ್ಕೆ ಮಣಿಯಬಾರದು. ಸಣ್ಣ ಸಮುದಾಯಗಳಿಗೆ ಅವಕಾಶ ಕಲ್ಪಿಸಬೇಕು’ ಎಂದು ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯಸಭೆ ಹಾಗೂ ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಸಣ್ಣ ಸಮುದಾಯವನ್ನು ಗುರುತಿಸುವ ಪರಿಪಾಟವನ್ನು ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಬೆಳೆಸಿಕೊಂಡಿದೆ. ಕಾಂಗ್ರೆಸ್ನಲ್ಲಿ ಅಂತಹ ಸಂಸ್ಕೃತಿಯೇ ಇಲ್ಲ. ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಯ ಬಾಲಂಗೋಚಿಗಳಿಗೆ ಮಣೆ ಹಾಕಲಾಗುತ್ತಿದೆ. ಇದರಿಂದಾಗಿ, ಕೆಲವು ಮುಖಂಡರು ಪದೇ ಪದೇ ಪರಿಷತ್ಗೆ ಆಯ್ಕೆಯಾಗುತ್ತಿದ್ದಾರೆ. ಪಕ್ಷ ಸಂಘಟನೆಗೆ ಅವರ ಕೊಡುಗೆ ಶೂನ್ಯ. ಈ ಸಲ ಹೊಸ ಪರಂಪರೆಗೆ ನಾಂದಿ ಹಾಡಬೇಕು’ ಎಂದು ಮತ್ತೊಬ್ಬ ನಾಯಕರು ಒತ್ತಾಯಿಸಿದರು.

ಪರಿಷತ್ಗೆ ನಾಮನಿರ್ದೇಶನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ನ ನಾಯಕರೊಂದಿಗೆ ಗುರುವಾರ ಸಮಾಲೋಚನೆ ನಡೆಸಲಿದ್ದಾರೆ. ಪರಿಷತ್ ಸದಸ್ಯರಾಗಲು 150ಕ್ಕೂ ಅಧಿಕ ಮುಖಂಡರು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಲ್ಲಿ ವರ್ಷದಿಂದ ಲಾಬಿ ನಡೆಸಿದ್ದಾರೆ.

ಇದೇ 2ರಂದು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿಗೆ ಬರಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರನ್ನು ಇದೇ 3ರಂದು ಭೇಟಿ ಮಾಡಿ ಚರ್ಚೆ ನಡೆಸಲು ಕಾಲಾವಕಾಶ ಕೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಇದೇ ವೇಳೆ ಪ್ರಸ್ತಾಪವಾಗುವ ಸಂಭವ ಇದೆ.

ಪರಿಷತ್ ಸದಸ್ಯರಾಗಿದ್ದ ಕಾಂಗ್ರೆಸ್ನ ಯು.ಬಿ.ವೆಂಕಟೇಶ್, ಪ್ರಕಾಶ್ ರಾಠೋಡ್ ಅವರ ಅವಧಿ 2024ರ ಅಕ್ಟೋಬರ್ಗೆ ಹಾಗೂ ಜೆಡಿಎಸ್ನ ಕೆ.ಎಂ. ತಿಪ್ಪೇಸ್ವಾಮಿ ಅವಧಿ ಜನವರಿಗೆ ಅಂತ್ಯವಾಗಿದೆ. ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸಿ.ಪಿ.ಯೋಗೇಶ್ವರ ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಕಾಂಗ್ರೆಸ್ನಿಂದ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಅವಕಾಶ ಇದೆ.

ಯು.ಬಿ.ವೆಂಕಟೇಶ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆ ಬಳಿಕ ಅವರನ್ನು ಎಐಸಿಸಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಅವರು ಖರ್ಗೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಮತ್ತೊಂದು ಅವಧಿಗೆ ಪರಿಷತ್ ಸದಸ್ಯರಾಗಲು ಲಾಬಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಆಪ್ತರಾಗಿರುವ ಪ್ರಕಾಶ್ ರಾಠೋಡ್ ಅವರು ಲಂಬಾಣಿ ಕೋಟಾದಲ್ಲಿ ತಮಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪರಾಭವ ಅನುಭವಿಸಿದ್ದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಲಾಬಿ ನಡೆಸಿದ್ದಾರೆ. ‘ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಎಂದು ಎಐಸಿಸಿ ಸೂಚನೆ ನೀಡಿದೆ. ಪರಿಷತ್ಗೆ ನಾಮನಿರ್ದೇಶನ ಮಾಡಿದರೆ 12 ಜಿಲ್ಲೆಗಳಲ್ಲಿ ನಾನೇ ಕಟ್ಟಡ ಕಟ್ಟಿಸಿಕೊಡುತ್ತೇನೆ’ ಎಂದು ಅವರು ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

‘ಕಳೆದ 30 ವರ್ಷಗಳಿಂದ ಕಾಂಗ್ರೆಸ್ನಿಂದ ಜೈನ ಸಮುದಾಯದವರನ್ನು ಪರಿಷತ್ಗೆ ನಾಮನಿರ್ದೇಶನ ಮಾಡಿಲ್ಲ. ಈ ಸಲ ಅವಕಾಶ ಕಲ್ಪಿಸಬೇಕು’ ಎಂದು ಜೈನ ಸಮುದಾಯದ ನಾಯಕರು ಅಹವಾಲು ಮಂಡಿಸಿದ್ದಾರೆ. ಬಿಎಂಟಿಸಿ ಮಾಜಿ ಅಧ್ಯಕ್ಷ ನಾಭಿರಾಜ್ ಜೈನ್ ಪರಿಷತ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ. ಜೈನ ಸಮುದಾಯದ ನಿಯೋಗವು ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ‘ರಾಜ್ಯದಲ್ಲಿ ಜೈನ ಸಮುದಾಯದವರು 50 ಲಕ್ಷದಷ್ಟು ಇದ್ದಾರೆ. ಎಂ. ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅಭಯಚಂದ್ರ ಜೈನ್ ಅವರನ್ನು ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿತ್ತು. ಆ ಬಳಿಕ ಸಮುದಾಯವರನ್ನು ಪರಿಗಣಿಸಿಯೇ ಇಲ್ಲ’ ಎಂದು ವೇಣುಗೋಪಾಲ್ ಗಮನಕ್ಕೆ ತಂದಿದ್ದಾರೆ.

ಪಕ್ಷದ ನಾಯಕರಾದ ಬಿ.ಎಲ್.ಶಂಕರ್. ವಿ.ಆರ್.ಸುದರ್ಶನ್, ಸಾಧು ಕೋಕಿಲಾ, ಸಂಗೀತ ಕಟ್ಟಿ, ಬಾಲರಾಜ್ ನಾಯಕ್, ವಿನಯ್ ಕಾರ್ತಿಕ್, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್, ಸಿ.ಎಸ್.ದ್ವಾರಕಾನಾಥ್, ರಮೇಶಬಾಬು, ಕೆಪಿಸಿಸಿ ಕಚೇರಿ ಕಾರ್ಯದರ್ಶಿ ಎಲ್.ನಾರಾಯಣ್, ಸೂರಜ್ ಹೆಗ್ಡೆ, ಐಶ್ವರ್ಯಾ ಮಹದೇವ್, ಕಮಲಾಕ್ಷಿ ರಾಜಣ್ಣ, ವಿಜಯ ಮುಳಗುಂದ್, ಆರತಿ ಕೃಷ್ಣ, ಪುಷ್ಪಾ ಅಮರನಾಥ್, ಡಾ.ಆನಂದ ಕುಮಾರ್ ಮತ್ತಿತರರು ಪ್ರಯತ್ನ ನಡೆಸಿದ್ದಾರೆ.

ನಾಳೆ ಕರ್ನಾಟಕ ಭವನ ಉದ್ಘಾಟನೆ

ದೆಹಲಿಯ ಚಾಣಕ್ಯಪುರಿಯಲ್ಲಿರುವ ನೂತನ ಕರ್ನಾಟಕ ಭವನ ‘ಕಾವೇರಿ’ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 2ರಂದು ಸಂಜೆ 6.30ಕ್ಕೆ ಉದ್ಘಾಟಿಸಲಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ 2019ರಲ್ಲಿ ಭೂಮಿ ಪೂಜೆ ನಿರ್ಮಿಸಲಾಗಿತ್ತು. ಆರಂಭದಲ್ಲಿ ಈ ಕಟ್ಟಡದ ಅಂದಾಜು ವೆಚ್ಚ ₹80 ಕೋಟಿ ಆಗಿತ್ತು. ಈಗ ₹140 ಕೋಟಿಗೆ ಏರಿದೆ. ಕಟ್ಟಡ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ಸಿದ್ದರಾಮಯ್ಯ ಹಾಗೂ ಸದನ ಸಮಿತಿಯ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.