ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಯುವ ಛಾಯಾಗ್ರಾಹಕಿ ಸಾನ್ವಿಗೆ 'ಕರ್ನಾಟಕ ಆಸ್ಕರಿ' ಪ್ರಶಸ್ತಿ

Published 24 ಆಗಸ್ಟ್ 2023, 15:38 IST
Last Updated 24 ಆಗಸ್ಟ್ 2023, 15:38 IST
ಅಕ್ಷರ ಗಾತ್ರ

ಬೆಂಗಳೂರು: ವನ್ಯಜೀವಿ ಯುವ ಛಾಯಾಗ್ರಾಹಕಿ ಸಾನ್ವಿ ವಿದ್ಯಾಶಂಕರ್‌ಗೆ ಕರ್ನಾಟಕ ಆಸ್ಕರಿ ಪ್ರಶಸ್ತಿ 2023 ಲಭಿಸಿದೆ. ಕರ್ನಾಟಕದಲ್ಲಿ ಛಾಯಾಚಿತ್ರ ಪ್ರತಿಭೆ ಪ್ರೋತ್ಸಾಹಿಸಲು ಶಾರುಖ್ ಆಸ್ಕರಿ ಹಮೀದ್ ಅವರ ನೆನಪಿಗಾಗಿ ನೀಡುವ ಪ್ರಶಸ್ತಿಯನ್ನು ಇತ್ತೀಚೆಗೆ ನಗರದ ಚಿತ್ರಕಲಾ ಪರಿಷತ್‌ನಲ್ಲಿ ನಡೆದ ಯೂತ್ ಫೋಟೋಗ್ರಾಫಿಕ್ ಸೊಸೈಟಿ ಸಮಾರಂಭದಲ್ಲಿ ಸಾನ್ವಿ ಅವರಿಗೆ ನೀಡಿ ಗೌರವಿಸಲಾಯಿತು.

35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಛಾಯಾಗ್ರಾಹಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಸಲ 17 ವರ್ಷ ವಯಸ್ಸಿನ ಸಾನ್ವಿ ಅವರಿಗೆ ಲಭಿಸಿದೆ.  ಛಾಯಾಗ್ರಾಹಕರಾದ ಬಿ.ಕೆ. ಅಗರವಾಲ್, ಮುಖೇಶ್ ಶ್ರೀವಾಸ್ತವ ಮತ್ತು ಡಾ.ಪಂಕಜ್ ಶರ್ಮಾ ಆಸ್ಕರಿ ಅವಾರ್ಡ್ಸ್ 2023 ರ ತೀರ್ಪುಗಾರರಾಗಿದ್ದರು. 

ಈಗಾಗಲೇ ಮಸಾಯ್ ಮಾರಾ, ಕೀನ್ಯಾಕ್ಕೆ ಭೇಟಿ ನೀಡಿ ವನ್ಯಜೀವಿ ಛಾಯಾಗ್ರಹಣ ನಡೆಸಿರುವ ಪಿಯುಸಿ ವಿದ್ಯಾರ್ಥಿನಿ ಸಾನ್ವಿ ಅವರಿಗೆ ಹಲವಾರು ಪ್ರಶಸ್ತಿ, ಗೌರವಗಳು ಸಂದಿವೆ. ‌

ಪ್ರಶಸ್ತಿಯೊಂದಿಗೆ ಸಾನ್ವಿ
ಪ್ರಶಸ್ತಿಯೊಂದಿಗೆ ಸಾನ್ವಿ
ಸಾನ್ವಿ ಕ್ಲಿಕ್ಕಿಸಿದ ಚಿತ್ರ
ಸಾನ್ವಿ ಕ್ಲಿಕ್ಕಿಸಿದ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT