ಬೆಂಗಳೂರು: ಬಿಜೆಪಿಯಲ್ಲಿ ಹಿರಿಯರಿಗೆ ಬೆಲೆ ಇಲ್ಲ ಎನ್ನುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಾಂಗ್ರೆಸ್ ಇತಿಹಾಸ ಮರೆತಂತೆ ಕಾಣುತ್ತದೆ ಎಂದು ಬಿಜೆಪಿಯ ಕರ್ನಾಟಕ ಘಟಕ ಟ್ವೀಟ್ ಮಾಡಿದೆ.

ಸುರ್ಜೇವಾಲ ಹೇಳಿಕೆಗೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಬಿಜೆಪಿ, ‘ಗಾಂಧಿ ಕುಟುಂಬದ ಏಳಿಗೆಗಾಗಿ ನೀವು ಅಪಮಾನಿಸಿದ ನಾಯಕರ ಪಟ್ಟಿ ಕೊಡಬೇಕೇ, ಸುರ್ಜೇವಾಲ’ ಎಂದು ಪ್ರಶ್ನಿಸಿದೆ.

ಓದಿ:ಸಂಪುಟ ರಚನೆ: ಸಂಭವನೀಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ

‘ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಎರಡೆರಡು ಬಾರಿ ಸೋಲಿಸಿದ್ದು ಕಾಂಗ್ರೆಸ್ ಎಂಬುದನ್ನು ದೇಶದ ಜನರು ಮರೆತಿಲ್ಲ. ಹಿರಿಯ ನಾಯಕ, ದಲಿತ ಮುತ್ಸದ್ಧಿಯೊಬ್ಬರಿಗೆ ಕಾಂಗ್ರೆಸ್ ಪಕ್ಷ ನೀಡಿದ ಗೌರವದ ಪರಿ ಇದುವೆಯಾ’ ಎಂದು #ಕುತಂತ್ರಿಕಾಂಗ್ರೆಸ್ ಎಂಬ ಹ್ಯಾಷ್ಟ್ಯಾಗ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

‘ಸೀತಾರಾಂ ಕೇಸರಿಯವರನ್ನು ಶೌಚಾಲಯದಲ್ಲಿ ಕೂಡಿ ಹಾಕಿದ್ದು, ಪಿ.ವಿ. ನರಸಿಂಹರಾವ್ ಪಾರ್ಥಿವ ಶರೀರಕ್ಕೆ ಪಕ್ಷದ ಕಚೇರಿಯಲ್ಲಿ ಗೌರವ ಸಲ್ಲಿಕೆಗೆ ಅವಕಾಶ ತಪ್ಪಿಸಿದ್ದು ಯಾವ ರೀತಿಯ ಗೌರವ? ಕಾಂಗ್ರೆಸ್ ಪಕ್ಷವು ಹಿರಿಯರಿಗೆ ಕೊಡುವ ಗೌರವದ ಪರಿ ಇದುವೇ’ ಎಂದು ಬಿಜೆಪಿ ಟ್ವೀಟ್ನಲ್ಲಿ ಉಲ್ಲೇಖಿಸಿದೆ.

ಓದಿ:ಕಾಂಗ್ರೆಸ್ಸಿಗರು ‘ಬೇಹುಗಾರಿಕೆಯ ಜೇಮ್ಸ್ಬಾಂಡ್ಗಳು’: ಕೇಂದ್ರ ಸಚಿವ ನಖ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.