ಬೆಂಗಳೂರು: ‘ದೇಶದ ಸಂವಿಧಾನ ನೀಡಿದ್ದು ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಎಂದು ಅನಿಲ್ ಲಾಡ್ ಹೇಳಿದ್ದರು. ಅದು ವೈರಲ್ ಆಗಿತ್ತು. ಆಗ ಒಬ್ಬ ಕಾಂಗ್ರೆಸ್ಸಿಗನೂ ಮಾತನಾಡಿಲ್ಲ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ADVERTISEMENT
ADVERTISEMENT
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಮದ್ಯ ಸೇವಿಸಿಯೇ ಸಂವಿಧಾನ ಬರೆದಿದ್ದಾರೆ (ದಾರು ಪೀಕೆ ಸಂವಿಧಾನ್ ಲಿಖಾ) ಎಂದು ‘ಇಂಡಿ’ ಒಕ್ಕೂಟದ ಅರವಿಂದ ಕೇಜ್ರಿವಾಲ್ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ಸಿನ ಉತ್ತರ ಏನು’ ಎಂದು ಪ್ರಶ್ನಿಸಿದರು.
‘ಸಂವಿಧಾನ ಬದಲಿಸಲೇಬೇಕೆಂದು ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ ನೀಡಿದ್ದ ಹೇಳಿಕೆಯ ವೀಡಿಯೊ ನನ್ನ ಬಳಿ ಇದೆ. ಕಾಂಗ್ರೆಸ್ಸಿನ ಯಾರಾದರೂ ಇದನ್ನು ವಿರೋಧಿಸಿದ್ದಾರಾ? ಅಂಬೇಡ್ಕರ್ ಕುರಿತು ವಿಧವಿಧವಾಗಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಬಾಯಿ ಬಿಟ್ಟಿಲ್ಲ’ ಎಂದು ಟೀಕಿಸಿದರು.
‘ಕಾಂಗ್ರೆಸ್ ಪ್ರೇರಣೆಯಿಂದ ಬೀದಿಗಳಿದಿರುವ ಕೆಲವು ಸಂಘಟನೆಗಳು ಅಮಿತ ಶಾ ಅವರ ಹೇಳಿಕೆಯನ್ನು ವಿರೋಧಿಸುತ್ತಿವೆ’ ಎಂದು ಆಕ್ಷೇಪಿಸಿದರು.