ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೂಬಾ –ಚವಾಣ್‌ ಕಾದಾಟ: ಬಿಜೆಪಿಯ ಆಂತರಿಕ ಕಲಹ ಬೀದಿ ಜಗಳವಾಗಿದೆ ಎಂದ ಕಾಂಗ್ರೆಸ್

Published 18 ಆಗಸ್ಟ್ 2023, 6:48 IST
Last Updated 18 ಆಗಸ್ಟ್ 2023, 6:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸಂಸದ ಭಗವಂತ ಖೂಬಾ ಮತ್ತು ಶಾಸಕ ಪ್ರಭು ಚವಾಣ್‌ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಜೋರಾಗಿದೆ.

ಈ ಇಬ್ಬರು ನಾಯಕ ಬಹಿರಂಗ ಹೇಳಿಕೆ ಕುರಿತಾದ ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ‘ಬಿಜೆಪಿ ಶಾಸಕ ಪ್ರಭು ಚವಾಣ್‌ ಅವರು ಬಿಜೆಪಿ ಸಂಸದರ ಮೇಲೆ ಕೊಲೆ ಷಡ್ಯಂತ್ರದ ಆರೋಪ ಹೋರಿಸಿದ ನಂತರ ಭಗವಂತ ಖೂಬಾ ಅವರು ‘ಅಹಿತಕರ ಘಟನೆ ನಡೆದರೆ ನಾನು ಹೊಣೆಯಲ್ಲ’ ಎಂದು ಅಂಟಿಸಿಪೇಟರಿ ಬೇಲ್ ಪಡೆಯುತ್ತಿದ್ದಾರೆ. ಇದರ ಅರ್ಥ ಬಿಜೆಪಿ ಶಾಸಕ ಚವಾಣ್‌ ಅವರು ಮುಂದೆ ಅಹಿತಕರ ಘಟನೆಯನ್ನು ಎದುರಿಸಬೇಕಾಗುತ್ತದೆ ಎಂಬ ಸುಳಿವು ನೀಡಿದ್ದೇ’ ಎಂದು ಪ್ರಶ್ನಿಸಿದೆ.

‘ಶಾಸಕರ ಆರೋಪದ ಬಗೆಗಿನ ತನಿಖೆಗೆ ರಾಜ್ಯದ ಪೊಲೀಸರ ಬದಲು ಸಿಬಿಐ ತನಿಖೆಗೆ ಆಗ್ರಹಿಸಿಲ್ಲವೇಕೆ?, ಸಂಸದರ ಷಡ್ಯಂತ್ರದ ಬಗ್ಗೆ ಮೋದಿಗೆ ದೂರು ಕೊಡಲಿಲ್ಲವೇಕೆ?, ತಮ್ಮ ಶಾಸಕರಿಗೆ ಜೀವ ಬೆದರಿಕೆ ಇದ್ದರೂ ಬಿಜೆಪಿ ಮೌನ ವಹಿಸಿರುವುದೇಕೆ’ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಎಸ್ಪಿಗೆ ಪತ್ರ ಬರೆದ ಕೇಂದ್ರ ಸಚಿವ ಖೂಬಾ

‘ಔರಾದ್‌ ಬಿಜೆಪಿ ಶಾಸಕ ಪ್ರಭು ಚವಾಣ್‌ ಅವರು ನನ್ನ ವಿರುದ್ಧ ಮಾಡಿರುವ ಗಂಭೀರ ಸ್ವರೂಪದ ಆರೋಪಗಳೆಲ್ಲ ಸುಳ್ಳು. ನನಗೆ ಅವರ ಮೇಲೆ ಯಾವುದೇ ದ್ವೇಷ, ಅಸೂಯೆ ಇಲ್ಲ. ಈ ಸುಳ್ಳು ಆರೋಪಗಳ ಕುರಿತು ತನಿಖೆ ನಡೆಸಬೇಕು. ಭವಿಷ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ ಅದಕ್ಕೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ಅದಕ್ಕೆ ನಾನು ಹೊಣೆಗಾರನಲ್ಲ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಖೂಬಾ ಹಠಾವೋ, ಬೀದರ್ ಬಚಾವೋ: ಬಿಜೆಪಿ ಶಾಸಕ ಪ್ರಭು ಚವಾಣ್‌

‘ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಠಾವೋ, ಬೀದರ್ ಬಚಾವೋ ಮಾಡುವುದು ಅನಿವಾರ್ಯವಾಗಿದೆ. ಖೂಬಾ ಬದಲು ಸಾಮಾನ್ಯ ಕಾರ್ಯಕರ್ತನಿಗೆ ಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವಂತೆ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡುತ್ತೇನೆ’ ಎಂದು ಔರಾದ್‌ ಬಿಜೆಪಿ ಶಾಸಕ ಪ್ರಭು ಚವಾಣ್‌ ತಿಳಿಸಿದ್ದಾರೆ.

ಇವನ್ನೂ ಓದಿ...

ಖೂಬಾ ಹಠಾವೋ, ಬೀದರ್ ಬಚಾವೋ: ಬಿಜೆಪಿ ಶಾಸಕ ಪ್ರಭು ಚವಾಣ್‌

ಅಹಿತಕರ ಘಟನೆ ನಡೆದರೆ ನಾನು ಹೊಣೆಯಲ್ಲ: ಎಸ್ಪಿಗೆ ಪತ್ರ ಬರೆದ ಕೇಂದ್ರ ಸಚಿವ ಖೂಬಾ

ಅಲ್ಪಸಂಖ್ಯಾತರಿಗೆ ನೀಡುವ ಅನುದಾನ, ಹಿಂದೂ ದೇವಾಲಯಗಳಿಗೆ ಏಕಿಲ್ಲ: ಯತ್ನಾಳ್ ಪ್ರಶ್ನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT