ಕಲಬುರ್ಗಿ: ಟಿಪ್ಪು ಸುಲ್ತಾನ್ ಈ ನೆಲದ ಧೀರ. ಆತನ ಅಧ್ಯಾಯ ಪಠ್ಯದಲ್ಲಿ ಇರಬೇಕು ಎಂದು ಹೇಳಿಕೆ ನೀಡಿದ ಪಕ್ಷದ ಮುಖಂಡ ಎಚ್. ವಿಶ್ವನಾಥ್ ಅವರಿಂದ ವಿವರಣೆ ಪಡೆಯುತ್ತೇನೆ. ಅವರ ಹೇಳಿಕೆ ವೈಯಕ್ತಿಕ. ಪಕ್ಷ ಟಿಪ್ಪು ಬಗ್ಗೆ ತನ್ನ ನಿಲುವು ಬದಲಾಯಿಸಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಎಂಬ ಕಾಂಗ್ರೆಸ್ ಮುಖಂಡರ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಯಡಿಯೂರಪ್ಪ ಅವರಂತಹ ನಾಯಕ ಕಾಂಗ್ರೆಸ್‌ನಲ್ಲಿಯೂ ಇಲ್ಲ. ಯಡಿಯೂರಪ್ಪ ದಕ್ಷರಿದ್ದಾರೆ. ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ’ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಗೊಂದಲ ಸೃಷ್ಟಿಸುತ್ತದೆ. ಕಾಂಗ್ರೆಸ್ ನಾಯಕರು ಗೊಂದಲ ಸೃಷ್ಟಿಸಿ ಬೆಂಕಿ ಹಚ್ಚಿ ಸುಖ ಅನುಭವಿಸುತ್ತಾರೆ. ಡಿ.ಜೆ ಹಳ್ಳಿ ಗಲಭೆ ಕಾಂಗ್ರೆಸ್‌ನ ಆಂತರಿಕ ಗೊಂದಲದಿಂದ ಆಗಿದೆ ಎಂದು ಹೇಳಿದರು.

‘ಕಾಂಗ್ರೆಸ್ ಇಂದು ವೃದ್ದಾಶ್ರಮವಾಗುತ್ತಿದೆ. ಅವರಿಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಲು ಆಗುತ್ತಿಲ್ಲ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.