ಶಸ್ತ್ರಾಸ್ತ್ರ ಬಚ್ಚಿಟ್ಟ ಸ್ಥಳದ ಮಾಹಿತಿ?
‘ಅರಣ್ಯದಲ್ಲಿದ್ದ ವೇಳೆ ಆರು ಮಂದಿ ನಕ್ಸಲರು ಶಸ್ತ್ರಾಸ್ತ್ರ ಹೊಂದಿದ್ದರು ಎಂಬ ಮಾಹಿತಿ ನಕ್ಸಲ್ ನಿಗ್ರಹ ಪಡೆಗೆ ಸಿಕ್ಕಿತ್ತು. ಶರಣಾದ ಬಳಿಕ ಅವರು ಶಸ್ತ್ರಾಸ್ತ್ರ ವನ್ನು ಒಪ್ಪಿಸಿಲ್ಲ. ಬುಧವಾರ ತಡರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಶರಣಾದ ನಕ್ಸಲರಿಂದ ಶಸ್ತ್ರಾಸ್ತ್ರ ಇಟ್ಟಿರುವ ಸ್ಥಳದ ಮಾಹಿತಿ ಪಡೆಯಲಾಗಿದೆ. ಅವರು ಬೇರೆ ಬೇರೆ ಸ್ಥಳಗಳ ಹೆಸರು ಹೇಳಿದ್ದಾರೆ. ಬಾಡಿ ವಾರಂಟ್ ಮೇಲೆ ಮತ್ತೆ ಅವರನ್ನು ವಶಕ್ಕೆ ಪಡೆದುಕೊಂಡು ಆ ಸ್ಥಳಕ್ಕೆ ಕರೆದೊಯ್ದು ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗುವುದು’ ಎಂದು ಮೂಲಗಳು ತಿಳಿಸಿವೆ.