ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳಲ್ಲಿ ಒಟ್ಟು 25,000 ಹೆಚ್ಚುವರಿ ನವೋದ್ಯಮಗಳನ್ನು ಸ್ಥಾಪಿಸುವ ಉದ್ದೇಶದ ‘ಕರ್ನಾಟಕ ನವೋದ್ಯಮ ನೀತಿ 2025– 2030’ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಇದಕ್ಕಾಗಿ ಐದು ವರ್ಷಗಳಿಗೆ ₹518.27 ಕೋಟಿ ನಿಗದಿ ಮಾಡಲಾಗಿದೆ. ಬೆಂಗಳೂರಿನಲ್ಲಿ 15 ಸಾವಿರ ಮತ್ತು ರಾಜ್ಯದ ಇತರ ನಗರಗಳಲ್ಲಿ 10 ಸಾವಿರ ನವೋದ್ಯಮಗಳು ಸ್ಥಾಪನೆಗೊಳ್ಳಲಿವೆ.

ರಾಜ್ಯದಲ್ಲಿ ನವೋದ್ಯಮ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅನುದಾನ, ಇನ್ಕ್ಯುಬೇಷನ್, ಮೂಲಸೌಕರ್ಯ, ಮಾರ್ಗದರ್ಶನ, ಕೌಶಲ ಅಭಿವೃದ್ಧಿ, ಮಾರುಕಟ್ಟೆ ಪ್ರವೇಶ, ವಿಸ್ತರಣೆ, ಅಂತರರಾಷ್ಟ್ರೀಯ ಸಹಯೋಗವನ್ನು ನವೋದ್ಯಮ ನೀತಿ ಒಳಗೊಂಡಿದೆ ಎಂದರು.

ಉದಯೋನ್ಮುಖ ಮತ್ತು ಮುಂದುವರಿದ ತಂತ್ರಜ್ಞಾನಗಳಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಕೃತಕ ಬುದ್ಧಿಮತ್ತೆ, ಬ್ಲಾಕ್ಚೈನ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಇತರ ಆಳವಾದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಾವೀನ್ಯವನ್ನು ಪ್ರೋತ್ಸಾಹಿಸಲಾಗುವುದು. ರಾಜ್ಯದ ವಿವಿಧ ನಗರಗಳಲ್ಲಿ ಉದ್ಯಮಿಗಳನ್ನು ಬೆಂಬಲಿಸಲು ನಾವೀನ್ಯ ಕೇಂದ್ರಗಳು, ಇನ್ಕ್ಯುಬೇಶನ್ ಕೇಂದ್ರಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಮುಖ ತೀರ್ಮಾನಗಳು:

*ಮೈಸೂರಿನ ಪಿಕೆಟಿಬಿ ಆಸ್ಪತ್ರೆಯ ಆವರಣದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ ನಿರ್ಮಿಸಲು ಮೊದಲನೇ ಹಂತದಲ್ಲಿ ಅಗತ್ಯವಿರುವ ಉಪಕರಣ ಖರೀದಿಗೆ ₹36.50 ಕೋಟಿ, ಎರಡನೇ ಹಂತದಲ್ಲಿ ಅಗತ್ಯವಿರುವ ಉಪಕರಣ ಖರೀದಿಗೆ ₹58.00 ಕೋಟಿ, ಒಟ್ಟು ₹94.50 ಕೋಟಿ ನೀಡಲು ಒಪ್ಪಿಗೆ

*ಹಿಂದುಳಿದ ವರ್ಗಗಳಿಗೆ ಮೀಸಲಿರುವ ಆದರೆ ಅರ್ಹ ಅಭ್ಯರ್ಥಿಗಳ ಲಭ್ಯತೆ ಇಲ್ಲದ ಕಾರಣ ಭರ್ತಿಯಾಗದೇ ಉಳಿದಿರುವ 67 ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಪರಿವರ್ತಿಸಿ, ಭರ್ತಿ ಮಾಡಲು ಒಪ್ಪಿಗೆ

*ಮಂಗಳೂರಿನ ಬಜ್ಪೆ ಗ್ರಾಮದಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ ₹20 ಕೋಟಿ

*ತುಮಕೂರು ಜಿಲ್ಲೆ ಕೊರಟಗೆರೆ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಕೆ

*ವಿಜಯಪುರ ನಗರದ ಸುತ್ತಲಿನ ಕೆಲವು ಕಂದಾಯ ಗ್ರಾಮಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿ ವಿಜಯಪುರ ಮಹಾನಗರ ಪಾಲಿಕೆ ಎಂದು ಘೋಷಣೆ

*ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿಯಾಗಿ ಮೇಲ್ದರ್ಜೆಗೆ ಏರಿಕೆ

*ಬೀದರ್ ಜಿಲ್ಲೆಯ ರಾಜೇಶ್ವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಕೆ

- ‘ಇಂದಿರಾ ಕಿಟ್’ ಪದಾರ್ಥ ಮಾರ್ಪಾಡು

ಇಂದಿರಾ ಆಹಾರ ಕಿಟ್ನಲ್ಲಿ ಫಲಾನುಭವಿಗಳಿಗೆ ತೊಗರಿ ಬೇಳೆ 1 ಕೆ.ಜಿ ಅಡುಗೆ ಎಣ್ಣೆ 1 ಲೀಟರ್ ಸಕ್ಕರೆ 1 ಕೆ.ಜಿ ಉಪ್ಪು 1 ಕೆ.ಜಿ ನೀಡಲಾಗುತ್ತದೆ. 1 ಕೆ.ಜಿ ಹೆಸರು ಕಾಳಿನ ಬದಲಿಗೆ ಅದರ ವೆಚ್ಚಕ್ಕನುಗುಣವಾಗಿ 1ರಿಂದ 3 ಸದಸ್ಯರಿಗೆ 1/4 ಕೆ.ಜಿ 3 ರಿಂದ 4 ಸದಸ್ಯರಿರುವ ಕುಟುಂಬಕ್ಕೆ 1/2 ಕೆ.ಜಿ ಹಾಗೂ 5 ಕ್ಕೂ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ 3/4 ಕೆ.ಜಿ ತೊಗರಿ ಬೇಳೆಯನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಪಶು ವಿ.ವಿ ಜಾಗದಲ್ಲಿ ನ್ಯಾಯಾಂಗ ವಸತಿ ಗೃಹ

ಬೆಂಗಳೂರಿನ ಹೆಬ್ಬಾಳದಲ್ಲಿರುವ ಕರ್ನಾಟಕ ಪಶು ಮತ್ತು ಪಶು ವೈದ್ಯಕೀಯ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೇರಿದ 4 ಎಕರೆ ಜಾಗವನ್ನು ಹೈಕೋರ್ಟ್ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕಾಗಿ ಹಸ್ತಾಂತರಿಸಲು ಸಚಿವ ಸಂಪುಟ ಸಭೆ ತೀರ್ಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.