ಮಂಗಳೂರು: ಜೈಲಿನಲ್ಲಿ ಕೈದಿ ಮೇಲೆ ಹಲ್ಲೆ ನಡೆಸಿ ₹ 20 ಸಾವಿರ ಸುಲಿಗೆ ಮಾಡಿದ ನಾಲ್ವರು ವಿಚಾರಣಾಧೀನ ಕೈದಿಗಳ ಮೇಲೆ ಕೊಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಧನು ಯಾನೆ ಧನುಷ್ ಭಂಡಾರಿ, ದಿಲ್ಲು ಯಾನೆ ದಿಲೇಶ್ ಬಂಗೇರ, ಲಾಯ್ ವೇಗಸ್ ಮತ್ತು ಸಚಿನ್ ತಲಪಾಡಿ ಇದೇ ತಿಂಗಳ 12ರಂದು ಮಂಗಳೂರು ಜೈಲಿನಲ್ಲಿ ಇನ್ನೊಬ್ಬ ಕೈದಿ ಮೇಲೆ ಹಲ್ಲೆ ನಡೆಸಿ ಹಣ ಕಸಿದುಕೊಂಡಿದ್ದರು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಪೈಕಿ ಕೆಲವರು ಈಗಾಗಲೇ ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಕೊಕಾ ಕಾಯ್ದೆಯ ‘ಸಂಘಟಿತ ಅಪರಾಧ’ ಸೆಕ್ಷನ್ ಅಡಿಯಲ್ಲಿ ಎಲ್ಲರ ಮೇಲೆಯೂ ‘ಕೊಕಾ’ ದಾಖಲಿಸಲಾಗಿದೆ ಎಂದು ಕಮಿಷನರ್ ವಿವರಿಸಿದ್ದಾರೆ.

‘ಕೈದಿ ಮೇಲೆ ಹಲ್ಲೆ ಮಾಡಿ ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಹಲ್ಲೆಗೊಳಗಾದ ಕೈದಿ ತನ್ನ ಪತ್ನಿಯ ಮೂಲಕ ಆರೋಪಿಗಳ ಪೈಕಿ ಒಬ್ಬನ ಬ್ಯಾಂಕ್ ಖಾತೆಗೆ ಹಣವನ್ನು ಹಾಕಿಸಿದ್ದಾನೆ. ಇದರಲ್ಲಿ ಭಾಗಿಯಾದ ನಾಲ್ವರ ವಿರುದ್ಧ ಭಾರತೀಯ ನೀತಿಸಂಹಿತೆಯ ಸೆಕ್ಷನ್ 308(4) ಮತ್ತು 3(5) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳು 3 ವರ್ಷಗಳ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇತ್ತು. ಆದರೆ ಕೊಕಾ ಕಾಯ್ದೆಯಡಿ ಬಂದ ಕಾರಣ ಕನಿಷ್ಠ 5 ವರ್ಷದಿಂದ ಜೀವಾವಧಿ ಶಿಕ್ಷೆಯ ವರೆಗೆ ಲಭಿಸುವ ಸಾಧ್ಯತೆ. ಸಾವಿಗೆ ಕಾರಣವಾಗುವ ಪ್ರಕರಣದಲ್ಲಿ ಭಾಗಿಯಾದರೆ ಗಲ್ಲು ಶಿಕ್ಷೆಯ ಸಾಧ್ಯತೆಯೂ ಇದೆ’ ಎಂದು ಕಮಿಷನರ್ ತಿಳಿಸಿದ್ದಾರೆ.

ಎರಡು ಅಥವಾ ಅದಕ್ಕೂ ಹೆಚ್ಚು ಬಾರಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ಕೊಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಇಂಥವರ ಜೊತೆಗೂಡಿ ಒಂದೇ ಒಂದು ಪ್ರಕರಣದಲ್ಲಿ ಆರೋಪಿಯಾದರೆ ಅವರು ಕೂಡ ಕೊಕಾ ಕಾಯ್ದೆಯಡಿಗೆ ಬರುತ್ತಾರೆ. ಕಾಯ್ದೆಯ ಪ್ರಕಾರ ಡಿಎಸ್ಪಿ ದರ್ಜೆಯ ಅಧಿಕಾರಿ ಕೊಕಾ ಪ್ರಕರಣದ ತನಿಖೆ ನಡೆಸಬೇಕು. ಮಂಗಳೂರು ಜೈಲಿನಲ್ಲಿ ನಡೆದ ಹಲ್ಲೆ ಮತ್ತು ವಸೂಲಿ ಪ್ರಕರಣದ ತನಿಖೆಯನ್ನು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.