ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಬರೆಸಿಕೊಳ್ಳಲು 9 ವರ್ಷದ ಹೆಣ್ಣು ಮಗು ಕೂಡಿಟ್ಟಿದ್ದರು: ದೇವೇಗೌಡ ಆರೋಪ

Published 17 ಏಪ್ರಿಲ್ 2024, 10:28 IST
Last Updated 17 ಏಪ್ರಿಲ್ 2024, 10:28 IST
ಅಕ್ಷರ ಗಾತ್ರ

ಮೂಡಿಗೆರೆ (ಚಿಕ್ಕಮಗಳೂರು): ‘ಬಿಡದಿ ಬಳಿಯ ರಸ್ತೆಯ ಬದಿಯ ಜಾಗ ಬರೆಸಿಕೊಳ್ಳಲು ಒಂಬತ್ತು ವರ್ಷದ ಹೆಣ್ಣು ಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಕೂಡಿ ಹಾಕಿದ್ದರಲ್ಲ... ಅದಕ್ಕಾಗಿ ಅವರ ಕೈ ಇನ್ನಷ್ಟು ಬಲಪಡಿಸಬೇಕಾ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸದೇ ಹರಿಹಾಯ್ದರು.

ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಮೆರಿಕದಲ್ಲಿ ದುಡಿದು ತಂದಿದ್ದ ಹಣದಲ್ಲಿ ಉದ್ಯಮಿಯೊಬ್ಬರು ಬಿಡದಿ ಬಳಿ ಐ.ಟಿ. ಕಂಪನಿ ಸ್ಥಾಪನೆ ಮಾಡಲು ಮುಂದಾಗಿದ್ದರು. ಬಹಳಾ ವರ್ಷ ಆಗಿರುವುದರಿಂದ ಅವರ ಹೆಸರು ಮರೆತಿದ್ದೇನೆ. ಅದರ ಹಿಂದಿನ ದಿನ ಇವರು ಸುಳ್ಳು ಕ್ರಯಪತ್ರ ಸಿದ್ಧಡಿಸುತ್ತಾರೆ. ನನ್ನ ಬಳಿ ದಾಖಲೆ ಇದೆ. ಅದನ್ನು ಮುಂದಿಟ್ಟುಕೊಂಡು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ಎರಡೂ ಕಡೆ ಮುಖಭಂಗವಾಗುತ್ತದೆ. ಆ ಬಳಿಕ ಆ ವ್ಯಕ್ತಿಯ ಮಗಳನ್ನು ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದ ಪಕ್ಕದ ಮನೆಯಲ್ಲಿ ಒಂಬತ್ತು ದಿನ ಇಡುತ್ತಾರೆ’ ಎಂದು ವಿವರಿಸಿದರು.

‘ಆಸ್ತಿ ಪತ್ರಕ್ಕೆ ಸಹಿ ಹಾಕಿ 9 ವರ್ಷದ ಮಗಳನ್ನು ಕರೆದುಕೊಂಡು ಹೋಗುವಂತೆ ತಿಳಿಸುತ್ತಾರೆ. ಆಸ್ತಿ ಬರೆದುಕೊಟ್ಟು ಮಗಳು ಕರೆತರುವಂತೆ ತಾಯಿ ತನ್ನ ಗಂಡನ ಕಾಲು ಹಿಡಿಯುತ್ತಾಳೆ. ಕಣ್ಣು ಕಟ್ಟಿದ ಸ್ಥಿತಿಯಲ್ಲಿ ಮಗಳನ್ನು ಅಪ್ಪನಿಗೆ ತೋರಿಸಿ ಮತ್ತೆ ಒಳಗೆ ಕರೆದೊಯ್ಯುತ್ತಾರೆ. ಚುನಾವಣೆಯಲ್ಲಿ ಈ ಪ್ರಸಂಗ ಬಳಸಿ ಎಂದು ವಕೀಲರೊಬ್ಬರು ನನಗೆ ಸಲಹೆ ಕೊಟ್ಟಿದ್ದರು’ ಎಂದು ಹೇಳಿದರು.

‘₹16 ಲಕ್ಷ ಮತ್ತು ₹4 ಲಕ್ಷದ ಎರಡು ಚೆಕ್‌ಗಳನ್ನು ಬರೆದುಕೊಡುತ್ತಾರೆ. ಅವು ಲ್ಯಾಪ್ಸ್ ಆಗುತ್ತವೆ. ಆ ವ್ಯಕ್ತಿ ಕೊನೆಗೆ ಎಲ್ಲಾ ಆಸ್ತಿ ಕಳೆದುಕೊಂಡು ಬೇರೊಬ್ಬರ ಅಧೀನದಲ್ಲಿ ಕೆಲಸ ಮಾಡುತ್ತಾರೆ. ಈ ವಿಷಯ ಹೊರಗೆ ಹೇಳಿದರೆ ಏನಾಗುತ್ತೆ ಗೊತ್ತಲ್ಲ ಎಂದು ಕಬ್ಬನ್ ಪಾರ್ಕ್‌ನಲ್ಲಿ ಹೆದರಿಸುತ್ತಾರೆ. ಇಂತವರ ಕೈ ಬಲಪಡಿಸಬೇಕಾ’ ಎಂದು ದೇವೇಗೌಡರ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT