ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಧರ್ಮಸ್ಥಳ ಸೇವಾ ಗುಂಪುಗಳ ಸಾಲ ಮರುಪಾವತಿ ಎರಡು ವಾರ ಮುಂದೂಡಿಕೆ

Last Updated 17 ಆಗಸ್ಟ್ 2018, 13:40 IST
ಅಕ್ಷರ ಗಾತ್ರ

ಬೆಂಗಳೂರು:ಕೊಡಗು, ಕರಾವಳಿ, ಅರೆ ಮಲೆನಾಡು ವರುಣನ ಆರ್ಭಟದಿಂದ ತ್ತರಿಸಿದೆ. ಈ ಸಮಯದಲ್ಲು ಸ್ವಯಂ ಸೇವಾ ಗುಂಪುಗಳು(ಉದಾ; ಎಸ್‌ಡಿಎಂ ಗ್ರಾಮೀಣ ಕೂಟ) ಸಾಲದ ಕಂತು ಕಟ್ಟಲು ಜನರನ್ನು ಪೀಡಿಸುತ್ತಿದವೆ. ಮಳೆ ನಿಲ್ಲುವವರೆಗಾದರು ಜನರ ಮೇಲೆ ಸೌಜನ್ಯ ತೋರಬಾರದೆ ಎಂದು ನಜ್ಮಾ ನಝೀರ್ ಚಿಕನೇರಲೆ ಎಂಬುವರು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟಗೆಸ್ಪಂದಿಸಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕೊಡಗು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಘಗಳ ವಾರದ ಸಭೆ ಮತ್ತು ಆರ್ಥಿಕ ವಹಿವಾಟನ್ನು ಎರಡು ವಾರ ಕಾಲ ಮುಂದೂಡಿದ್ದಾರೆ.

‘ಕೆಲವು ಗಂಟೆಗಳ ಹಿಂದೆ ನಾನು ಹಾಕಿದ್ದ ಒಂದು ಪೋಸ್ಟ್ ನೋಡಿ ಸಾಹಿತಿ ಬೋಳುವಾರು ಮೊಹಮದ್ ಕುಞಿ ಫೋನ್ ಮಾಡಿದ್ದರು.ವಾಸ್ತವಾಂಶವನ್ನು ಅರ್ಥಮಾಡಿಕೊಂಡ ಬೋಳುವಾರರು ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆಯ ಅಧಿಕಾರಿಗಳೊಂದಿಗೆ ಮಾತನಾಡಿ ಸ್ವಸಹಾಯ ಗುಂಪುಗಳ ಸಾಲದ ಕಂತು ಮರುಪಾವತಿಯನ್ನು ಎರಡುವಾರಗಳ ಕಾಲ ಮುಂದೂಡಿಸಿದ್ದಾರೆ. ಧನ್ಯವಾದಗಳು ಬೋಳುವಾರರಿಗೆ ಮತ್ತು ಶೀಘ್ರ ಸ್ಪಂದಿಸಿದ ಅಧಿಕಾರಿಗಳಿಗೆ ಎಂದು ಧರ್ಮಸ್ಥಳ ಸ್ವಯಂ ಸೇವಾ ಯೋಜನೆ ಅಧಿಕಾರಿಗಳು ನೀಡಿರುವ ಪ್ರಕಟಣೆಯ ಪ್ರತಿಯನ್ನೂ ಅವರು ಹಾಕಿದ್ದಾರೆ.

ನಜ್ಮಾ ನಝೀರ್ ಚಿಕನೇರಲೆ (Najma Nazeer Chikkanerale) ಅವರು ಕೊಡಗು, ಕರಾವಳಿ, ಅರೆಮಲೆನಾಡು ವರುಣನ ಆರ್ಭಟದಿಂದ ತತ್ತರಿಸಿದೆ. ಈ ಸಮಯದಲ್ಲು ಸ್ವಯಂ ಸೇವಾ ಗುಂಪುಗಳು (ಉದಾ:ಎಸ್.ಡಿ.ಎಂ,ಗ್ರಾಮೀಣ್ ಕೂಟ) ಸಾಲದ ಕಂತು ಕಟ್ಟಲು ಜನರನ್ನು ಪೀಡಿಸುತ್ತಿದ್ದಾರೆ. ಮಳೆ ನಿಲ್ಲುವವರೆಗಾದರು ಜನರ ಮೇಲೆ ಸೌಜನ್ಯ ತೋರಬಾರದೆ ಎಂದು ಬರೆದು #ದುಡ್ಡು ಹ್ಯಾಷ್ ಟ್ಯಾಗ್‌ನೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಕೊಡಗು ಜಿಲ್ಲೆಯಲ್ಲಿನ ಪರಿಸ್ಥಿತಿಯ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣಾಭಿವೃದ್ಧಿ ಯೋಜನೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಪರಿಸ್ಥಿತಿ ಬೇಗ ಸಹ ಸ್ಥಿತಿಗೆ ಬರಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದಾರೆ. ಜಿಲ್ಲೆಯಲ್ಲಿ ಅಗತ್ಯವಿರುವ ತುರ್ತು ಕಾರ್ಯಗಳಿಗೆ ಬೇಕಾದ ಎಲ್ಲಾಬಗೆಯ ನೆರವನ್ನು ನೀಡುವಂತೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಜನರಿಗಾಗಿರುವ ಅನಾನುಕೂಲತೆಗಳನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯ ಎಲ್ಲಾ ಸ್ವ ಸಹಾಯ ಸಂಘಗಳ ಸಭೆ ಮತ್ತು ಆರ್ಥಿಕ ವಹಿವಾಟನ್ನುಎರಡು ವಾರ ಕಾಲ ಮುಂದೂಡಲು ಕಾರ್ಯಕರ್ತರಿಗೆ ಸೂಚಿಸಿದರು ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್‌.ಎಚ್‌. ಮಂಜುನಾಥ್‌ ತಿಳಿಸಿದ್ದಾರೆ.

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT