₹4,659 ಕೋಟಿ ಹಿಂಬಾಕಿ:
ಪಿಂಚಣಿ ಮತ್ತು ಗ್ರಾಚ್ಯುಟಿಯ ರಾಜ್ಯ ಸರ್ಕಾರದ ಪಾಲನ್ನು ಭರಿಸಲು ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿ ವಿದ್ಯುತ್ ಬಳಕೆದಾರರಿಂದ ₹8,519.55 ಕೋಟಿ ಮೊತ್ತವನ್ನು ವಸೂಲಿ ಮಾಡಲು ಕೆಇಆರ್‌ಸಿ ಸಮ್ಮತಿಸಿದೆ. ಈ ಪೈಕಿ 2021–22ರಿಂದ 2024–25ನೇ ಆರ್ಥಿಕ ವರ್ಷಗಳವರೆಗಿನ ಹಿಂಬಾಕಿ ಮೊತ್ತವೇ ₹4,659.34 ಕೋಟಿಯಷ್ಟಿದೆ. ಹಿಂಬಾಕಿ ಮೊತ್ತವನ್ನು 2025–26ರಿಂದ 2030–31ನೇ ಆರ್ಥಿಕ ವರ್ಷದವರೆಗೆ ಆರು ವಾರ್ಷಿಕ ಕಂತುಗಳಲ್ಲಿ ತಲಾ ₹776.56 ಕೋಟಿಯಷ್ಟನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ.