ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರುವಅನುದಾನವನ್ನು ಕಡಿತ ಮಾಡಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ವಿಷಯ ಪ್ರಸ್ತಾಪಿಸಿ 'ಪ್ರಜಾವಾಣಿ' ಪತ್ರಿಕೆ ವರದಿಯನ್ನು ಉಲ್ಲೇಖಿಸಿದರು.

ಬರ ಪರಿಹಾರ ಕಾಮಗಾರಿಗಳ ನಿರ್ವಹಣೆ ಮತ್ತು ಕೇಂದ್ರದ ಅನುದಾನ ಕೊರತೆ ಕುರಿತಂತೆ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಲೇಬೇಕಾದ ಪಾಲಿನಲ್ಲಿ ಕಡಿತ ಮಾಡಿರುವ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಪತ್ರ ಬರೆದಿರುವುದನ್ನು ಸದನದ ಗಮನಕ್ಕೆ ತಂದರು.

‘2019–20ರ ಸಾಲಿನಲ್ಲಿ ಕೇಂದ್ರ ನೀಡಲೇಬೇಕಾಗಿದ್ದ ಮೊತ್ತದಲ್ಲಿ ₹ 17 ಸಾವಿರ ಕೋಟಿ ಕೊರತೆಯಾಗಲಿದೆ. ಅನುದಾನ ಹಂಚಿಕೆ ಲೆಕ್ಕದಲ್ಲಿ ₹8,813, ಜಿಎಸ್ಟಿ ಪಾಲಿನಲ್ಲಿ₹4 ಸಾವಿರ ಕೋಟಿ, ಜಿಎಸ್ಟಿ ಪರಿಹಾರ ರೂಪದಲ್ಲಿ₹ 3 ಸಾವಿರ ಕೋಟಿ ಕೊರತೆಯಾಗಲಿದೆ ಎಂದುಹಣಕಾಸು ಇಲಾಖೆ ಮೂಲಗಳು ಹೇಳಿವೆ ಎಂದು ಪ್ರಜಾವಾಣಿ ವರದಿ ಮಾಡಿರುವುದನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು.

ಒಟ್ಟಾರೆ ಕೇಂದ್ರದ ಮೂಲಗಳಿಂದ ರಾಜ್ಯಕ್ಕೆ ಸುಮಾರು 17 ಸಾವಿರ ಕೋಟಿ ನಷ್ಟವಾಗಲಿದೆ ಎಂದರು. ದೇಶದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಕಟ್ಟುವುದರಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೂ ರಾಜ್ಯಕ್ಕೆ ಅನುದಾನ ಕಡಿತ ಮಾಡಿರುವುದು ಯಾಕೆ ಎಂದು ಪ್ರಶ್ನೆ ಮಾಡಿದರು. ಕೇಂದ್ರದಲ್ಲಿ ನಿಮ್ಮದೆ ಸರ್ಕಾರವಿದ್ದರೂ ಅನುದಾನ ತರುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿಪಲರಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸದರು.

ಬರ ಪರಿಹಾರ ನಿರ್ವಹಣೆ: ರಾಜ್ಯ ಸರ್ಕಾರ ಬರ ಪರಿಹಾರ ನಿರ್ವಹಣೆಯಲ್ಲೂ ವಿಪಲವಾಗಿದೆ ಎಂದು ಸಿದ್ಧರಾಮಯ್ಯ ಟೀಕಿಸಿದರು.

ಬರ ಪೀಡಿತ ಪ್ರದೇಶಗಳಿಗೆ ಸಚಿವರು ಸಮರ್ಪವಾಗಿ ಪ್ರವಾಸ ಕೈಗೊಂಡಿಲ್ಲ ಹಾಗೂ ಪರಿಹಾರ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಸೋಮಣ್ಣ ದಸರಾ ಕಾರ್ಯಕ್ರಮಗಳ ವೇಳೆ ಗೊಂದಲವಾಗಿರಬಹುದು ಆದರೆ ಸರ್ಕಾರ ಬರ ಪರಿಹಾರ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿದೆ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.