ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಭಾಷಾ ಆಯೋಗಕ್ಕೆ ಶಾಸನಾತ್ಮಕ ಸ್ಥಾನ -ಜೆ.ಸಿ.ಮಾಧುಸ್ವಾಮಿ

Last Updated 20 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾನ್ಯ ಜನರಿಗೂ ಸ್ಥಳೀಯ ಭಾಷೆಗಳಲ್ಲಿ ಕಾನೂನು ಜ್ಞಾನ ಮೂಡಿಸಲು ಶ್ರಮಿಸುತ್ತಿರುವ ‘ರಾಜಭಾಷಾ (ವಿಧಾಯೀ) ಆಯೋಗ’ಕ್ಕೆ ಇದೇ ಅಧಿವೇಶನದಲ್ಲಿ ಶಾಸನಾತ್ಮಕ ಸ್ಥಾನ ಕಲ್ಪಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ, ರಾಜಭಾಷಾ ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯಗಳ 74 ಅಧಿನಿಯಮಗಳ ಕನ್ನಡ ಆವೃತ್ತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಜಭಾಷಾ ಆಯೋಗ 1973ರಲ್ಲೇ ಸ್ಥಾಪನೆಯಾದರೂ, ಇತರೆ ಆಯೋಗಗಳಂತೆ ಅದಕ್ಕೆ ಶಾಸನಾತ್ಮಕ ಸ್ಥಾನ ಇರಲಿಲ್ಲ. ಅದಕ್ಕಾಗಿ, ಈ ಅಧಿವೇಶನದಲ್ಲೇ ಮಸೂದೆ ಮಂಡಿಸಲಾಗುತ್ತಿದೆ ಎಂದರು.

ಸಂವಿಧಾನ ರಚನೆಯ ಉದ್ದೇಶ ಸಫಲವಾಗಲು ಎಲ್ಲರೂ ಕಾನೂನು ಪಾಲನೆ ಮಾಡಬೇಕಿದೆ. ಹಿಂದೆಲ್ಲ ಆಳುವ ವರ್ಗಕ್ಕೆ ಕಾನೂನು ಗೊತ್ತಿದ್ದರೆ ಸಾಕು, ಇಂಗ್ಲಿಷ್‌ನಲ್ಲಿ ವಾದ ಮಾಡುವ ವಕೀಲರು ದೊಡ್ಡವರು ಎನ್ನುವ ಮನೋಭಾವ ಈಗ ಇಲ್ಲ. ಆಯೋಗ ಸ್ಥಳೀಯ ಭಾಷೆಗಳಲ್ಲಿ ಕಾನೂನುಗಳನ್ನು ಭಾಷಾಂತರಿಸುತ್ತಿದೆ. ಸಾಮಾನ್ಯ ಜನರಿಗೂ ಕಾನೂನಿನ ತಿಳಿವಳಿಕೆ ಮೂಡಿಸಲಾಗುತ್ತಿದೆ. ಇದರಿಂದ ಅಪರಾಧ ಚಟುವಟಿಕೆಗಳ ಕಡಿವಾಣಕ್ಕೂ ಸಹಕಾರಿಯಾಗಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.
ಅಶ್ವತ್ಥನಾರಾಯಣ, ಶಾಸಕ‌ ದಿನಕರ ಶೆಟ್ಟಿ, ರಾಜಭಾಷಾ ಆಯೋಗದ ಅಧ್ಯಕ್ಷ ಜಿ.ಶ್ರೀಧರ್‌, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಎಂ.ವೆಂಕಟೇಶ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT