ಅಸಲಿಗೆ ದೊಡ್ಡ ಮಜಾವಾದಿ– ಜೆಡಿಎಸ್
‘ಹೇಳಿಕೊಳ್ಳುವುದು ನಾನೊಬ್ಬ ಸಮಾಜವಾದಿ. ಅಸಲಿಗೆ ದೊಡ್ಡ ಮಜಾವಾದಿ. ಅಂದು ₹ 70 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ‘ಹ್ಯೂಬ್ಲೊ ವಾಚ್’ ಕಟ್ಟಿ ಟೀಕೆಗೆ ಗುರಿಯಾಗಿದ್ದರು. ಇಂದು ಅವರ ಕೈಯಲ್ಲಿ ಚಿನ್ನದಿಂದ ತಯಾರಿಸಿದ ಕಾರ್ಟಿಯರ್ ಬ್ರ್ಯಾಂಡ್‌ನ ₹ 43 ಲಕ್ಷ ಬೆಲೆ ಬಾಳುವ ಐಷಾರಾಮಿ ವಾಚ್. ಸಿದ್ದರಾಮಯ್ಯ ಅವರೇ, ಸಮಾಜವಾದದ ಬಗ್ಗೆ ಬೊಗಳೆ ಭಾಷಣ ಮಾಡಲು ನಿಮಗೆ ಯಾವ ನೈತಿಕತೆ ಇದೆ’ ಎಂದು ಜೆಡಿಎಸ್ ‘ಎಕ್ಸ್’ ಮಾಡಿ ಟೀಕಿಸಿದೆ.