ಬೆಂಗಳೂರು: ಅಧಿವೇಶನ ವೀಕ್ಷಿಸಲು ಬಂದಿದ್ದ ‘ದಿ ಆಶ್ರಮ ಶಾಲೆಯ’ ಮಕ್ಕಳ ಜತೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ ಸಂವಾದ ನಡೆಸಿದರು.

‘ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಸ್ಥಾಪಕರಾದ ಕೆ.ಎನ್. ಗುರುಸ್ವಾಮಿ ಅವರು ಸ್ಥಾಪಿಸಿದ ‘ದಿ ಆಶ್ರಮ ಶಾಲೆ’ಯ ಮಕ್ಕಳ ಜ್ಞಾನಾಸಕ್ತಿ, ಕುತೂಹಲ, ಶಿಕ್ಷಣದ ಭವಿಷ್ಯದ ಕುರಿತು ಉತ್ತಮ ಚಿಂತನೆಯನ್ನು ಮಕ್ಕಳು ಹೊಂದಿದ್ದಾರೆ. ಅವರ ಪ್ರಶ್ನಿಸುವ ಮನೋಭಾವ ಇಷ್ಟವಾಯಿತು ಎಂದು ಮಧು ಬಂಗಾರಪ್ಪ ಹೇಳಿದರು.

‘ಶಿಕ್ಷಣ ಕ್ಷೇತ್ರದ ಸುಧಾರಣೆ, ಶಾಲಾ ಶಿಕ್ಷಣ ಇಲಾಖೆಯು ಎಸ್ಎಸ್ಎಲ್ಸಿ, ಪಿಯುಗೆ ರೂಪಿಸಿದ ಮೂರು ಪರೀಕ್ಷಾ ಪದ್ಧತಿ ಸೇರಿದಂತೆ ಹಲವು ಶೈಕ್ಷಣಿಕ ವಿಚಾರಗಳನ್ನು ಮಕ್ಕಳ ಜತೆ ಹಂಚಿಕೊಳ್ಳಲಾಯಿತು. ಭವಿಷ್ಯದ ಶಿಕ್ಷಣ ಕ್ಷೇತ್ರದ ಪ್ರಗತಿಯಲ್ಲಿ ಸಹಭಾಗಿಗಳಾಗುವಂತೆ ಅವರನ್ನು ಪ್ರೋತ್ಸಾಹಿಸಲಾಯಿತು’ ಎಂದು ಮಧು ಬಂಗಾರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.