ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Kambala: ಪ್ರಥಮ ಬಹುಮಾನ ‍ಪಡೆದ ಮಲೆಕುಡಿಯರ ಕೋಣಗಳು

Published 27 ನವೆಂಬರ್ 2023, 9:52 IST
Last Updated 27 ನವೆಂಬರ್ 2023, 9:52 IST
ಅಕ್ಷರ ಗಾತ್ರ

ಬೆಂಗಳೂರು: ಇದೇ ಮೊದಲ ಬಾರಿಗೆ ಮಲೆಕುಡಿಯರ ಹೆಸರಿನಲ್ಲಿ ಕಂಬಳ ಸ್ಪರ್ಧೆಗೆ ಇಳಿದಿದ್ದ ಕೋಣಗಳು ಪ್ರಥಮ ಸ್ಥಾನ ಪಡೆದು ಗಮನಸೆಳೆದಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯ ಅವರ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆಯಿತು.

ಪಾರಂಬೇರಿನ ‘ಗುಂಡ‘ ಮತ್ತು ಬಿಳಿಯೂರು ‘ದಾಸ‘ ಮಹರಾಜಕರೆಯಲ್ಲಿ ಜಯಗಳಿಸಿತು. ಧನಂಜಯ ಗೌಡ ಸರಪಾಡಿ ಕೋಣಗಳನ್ನು ಓಡಿಸಿದರು. ಜಯಗಳಿಸುತ್ತಿದ್ದಂತೆಯೇ ಜಯಘೋಷಗಳು ಮೊಳಗಿದವು. ಕೋಣಗಳ ಜತೆಗೆ ಬಂದಿದ್ದವರು ಕುಣಿದು ಸಂಭ್ರಮಿಸಿದರು.

ಫೈನಲ್ ಗೆದ್ದ ನಾರಾಯಣ ಮಲೆಕುಡಿಯ ಅವರ ಕೋಣವು ಒಂದು ಲಕ್ಷ ನಗದು 16 ಗ್ರಾಂ ಚಿನ್ನ ಮತ್ತು ಟ್ರೋಫಿ ಗೆದ್ದಿದೆ. ಸೋಮವಾರ ರಾತ್ರಿ 4.30ಕ್ಕೆ ಬಹುಮಾನ ವಿತರಣೆ ನಡೆಯಿತು. ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಸಹಿತ ವಿವಿಧ ಗಣ್ಯರು ಬಹುಮಾನ ವಿತರಿಸಿದರು.

ಸೆಮಿಫೈನಲ್‌ನಲ್ಲಿ ಬೋಳದಗುತ್ತು ಮತ್ತು ನಾರಾಯಣ ಮಲೆಕುಡಿಯರ ಕೋಣಗಳ ನಡುವೆ ಸ್ಪರ್ಧೆ ನಡೆಯಿತು. ನಂತರ ರೋಚಕ ಫೈನಲ್‌ನಲ್ಲಿ ಮಹರಾಜಕರೆಯಲ್ಲಿ ಪರಂಬೇರು ನಾರಾಯಣ ಮಲೆಕುಡಿಯ ಅವರ ಕೋಣಗಳು ಮಹರಾಜ ಕರೆಯಲ್ಲಿ ಓಡಿ ಫೈನಲ್ ಗೆದ್ದಿತು.

ಈ ಕೋಣಗಳ ಪ್ರಾಯೋಜಕತ್ವವನ್ನು ಮಂಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರು ವಹಿಸಿದ್ದರು.

ಮಲೆಕುಡಿಯರ ಹೆಸರಿನಲ್ಲಿ ಸ್ಪರ್ಧೆಗೆ ಇಳಿದ ಕೋಣಗಳು ‍ಪ್ರಥಮ ಸ್ಥಾನಿಯಾಗಿದ್ದು ಖುಷಿ ತಂದಿದೆ. ತೀರಾ ನಿರ್ಲಕ್ಷ್ಯಕ್ಷಕ್ಕೆ ಒಳಗಾಗಿರುವ ಸಮುದಾಯವೊಂದರ ಕೋಣಗಳ ಬೆಂಗಳೂರು ಕಂಬಳದಲ್ಲಿ ಗೆದ್ದಿರುವುದು ಅಸಮಾನ್ಯ ಸಾಧನೆ. ಈ ಸಮುದಾಯ ಇನ್ನಷ್ಟು ಪ್ರವರ್ಧಮಾನಕ್ಕೆ ಬರಬೇಕು.
– ದಿನೇಶ್ ಹೆಗ್ಡೆ ಉಳೆಪಾಡಿ, ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT