ಚಿಕ್ಕೋಡಿ (ಬೆಳಗಾವಿ): ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಿಂಬದಿಯಲ್ಲಿ, ಮಹಾರಾಷ್ಟ್ರದ ಕಿಡಿಗೇಡಿಗಳು ಮರಾಠಿಯಲ್ಲಿ ಬರೆದಿರುವ ಪೋಸ್ಟರ್ ಅಂಟಿಸಿರುವುದು ಶುಕ್ರವಾರ ಗೊತ್ತಾಗಿದೆ.

‘ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಆಗುವುದು’ ಎಂಬ ಪೋಸ್ಟರ್ ಅನ್ನು ಬಸ್ ಮೇಲೆ ಅಂಟಿಸಿದ್ದಾರೆ. ‘ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ, ಪುಣೆ’ ಹೆಸರು ಆ ಪೋಸ್ಟರ್‌ನಲ್ಲಿದೆ. ಇನ್ನೂ ಕೆಲವು ಬಸ್‌ಗಳ ಮೇಲೆ ಈ ರೀತಿಯ ಪೋಸ್ಟರ್ ಹಾಕಲಾಗಿದೆ ಎನ್ನಲಾಗುತ್ತಿದೆ. ಫೋಟೊಗಳು ಸಾಮಾಜಿಕಮಾಧ್ಯಮ ದಲ್ಲಿ ಹಬ್ಬಿವೆ. ಈ ಕೃತ್ಯದ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ಆಕ್ರಮಿತ ಪ್ರದೇಶಗ ಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳು ತ್ತೇವೆ’ ಎಂದು ಆ ರಾಜ್ಯದ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಈಚೆಗೆ ಹೇಳಿಕೆ ನೀಡಿದ್ದರು. ಗಡಿ ವಿವಾದದ ಕುರಿತು ಪುಸ್ತಕ ಬಿಡುಗಡೆ ಮಾಡಿದ್ದರು. ಮರಾಠಿ ಭಾಷಿಗರಿರುವ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದ್ದರು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ ಎಂದಿದ್ದರು. ಗಡಿ ವಿವಾದಕ್ಕೆ ಸಂಬಂಧಿಸಿದ 50 ವರ್ಷ ಹಳೆಯ ಸಾಕ್ಷ್ಯಚಿತ್ರವನ್ನು ಗುರುವಾರವಷ್ಟೇ ಬಿಡುಗಡೆ ಮಾಡಿ
ದ್ದರು. ಇದು ಕಿಡಿಗೇಡಿಗಳಿಗೆ ಕುಮ್ಮಕ್ಕು ಕೊಟ್ಟಂತಾಗುತ್ತಿದೆ ಹಾಗೂ ಎರಡೂ ರಾಜ್ಯಗಳ ಗಡಿಯಲ್ಲಿ ಸಾಮರಸ್ಯ ಕದಡಲು ಕಾರಣವಾಗುತ್ತಿದೆ’ ಎನ್ನುವ ದೂರು ಕನ್ನಡ ಹೋರಾಟಗಾರರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.