ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

510 ಪುನಶ್ಚೇತನ ವಾಹನಗಳಿಗೆ ಚಾಲನೆ

ಕೆಎಸ್‌ಆರ್‌ಟಿಸಿ 62ನೇ ಸಂಸ್ಥಾಪನಾ ದಿನಾಚರಣೆ
Published 1 ಆಗಸ್ಟ್ 2023, 15:52 IST
Last Updated 1 ಆಗಸ್ಟ್ 2023, 15:52 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ವತಿಯಿಂದ ಪುನಶ್ಚೇತನಗೊಂಡಿರುವ 510 ವಾಹನಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಚಾಲನೆ ನೀಡಿದರು.

ನಿಗಮದ 62ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, 9 ಲಕ್ಷದಿಂದ 10 ಲಕ್ಷ ಕ್ರಮಿಸಿದ ವಾಹನಗಳನ್ನು ಎರಡು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ 385 ಹಾಗೂ 13 ವಿಭಾಗಗಳಲ್ಲಿ 125 ವಾಹನಗಳು ಸೇರಿದಂತೆ ಒಟ್ಟಾರೆ 510 ಹಳೆಯ ಬಸ್‌ಗಳನ್ನು ಪುನಶ್ಚೇತನಗೊಳಿಸಲಾಗಿದೆ. ಆಧುನಿಕ ವಿಧಾನಗಳನ್ನು ಹಾಗೂ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಪುನಶ್ಚೇತನ ವಾಹನಗಳನ್ನು ಕಾರ್ಯಾಚರಣೆಗೆ ಬಳಸಿಕೊಂಡ ಎರಡು ಪ್ರಾದೇಶಿಕ ಕಾರ್ಯಾಗಾರಗಳಿಗೆ ತಲಾ ₹2 ಲಕ್ಷ, ವಿಭಾಗಗಳಿಗೆ ತಲಾ ₹1 ಲಕ್ಷ ಪುರಸ್ಕಾರ ನೀಡಲಾಯಿತು. ಪುನಶ್ಚೇತನದ ನೇತೃತ್ವ ವಹಿಸಿದ್ದ ಮೂವರು ಹಿರಿಯ ತಾಂತ್ರಿಕ ಅಧಿಕಾರಿಗಳಿಗೆ ತಲಾ ₹50 ಸಾವಿರ ನೀಡಲಾಯಿತು.

ಸಾರಿಗೆ ಮಿತ್ರಕ್ಕೆ ಚಾಲನೆ: ಘಟಕಗಳ ಗಣಕೀಕರಣ, ಆನ್‌ಲೈನ್‌ ರಜೆ ನಿರ್ವಹಣೆ, ಸೇವಾ ಪುಸ್ತಕ ಹಾಗೂ ವೈಯಕ್ತಿಕ ವಿವರಗಳ ಗಣಕೀಕರಣದ ಸಾರಿಗೆ ಮಿತ್ರ ಎಚ್‌ಆರ್‌ಎಂಎಸ್‌ ಯೋಜನೆಗೆ ಚಾಲನೆ ನೀಡಲಾಯಿತು.

ಐದು ವರ್ಷ ಅಪಘಾತ ಹಾಗೂ ಅಪರಾಧರಹಿತ ಚಾಲನೆ ಮಾಡಿದ 38 ಚಾಲಕರಿಗೆ ಬೆಳ್ಳಿ ಪದಕ, ತಲಾ ₹2 ಸಾವಿರ ನಗದು, ಮಾಸಿಕ ₹250 ಭತ್ಯೆ ನೀಡಲಾಯಿತು. ನಾಲ್ಕು ಸಾರಿಗೆ ನಿಗಮಗಳಲ್ಲಿನ ಅನುಕಂಪ ಆಧಾರಿತ 14 ಹುದ್ದೆಗಳಲ್ಲಿ, 10 ಮಂದಿಗೆ ತಾಂತ್ರಿಕ ಹುದ್ದೆ, ನಾಲ್ವರಿಗೆ  ಚಾಲಕ–ನಿರ್ವಾಹಕ ಹುದ್ದೆಯ ನೇಮಕಾತಿ ಪತ್ರ ನೀಡಲಾಯಿತು.

ಅಪಘಾತ ಸ್ಥಳಕ್ಕೆ ಧಾವಿಸಿ ಪರಿಹಾರ ಕೈಗೊಳ್ಳಲು 20 ನೂತನ ಬೊಲೆರೊ ವಾಹನಗಳಿಗೆ ಚಾಲನೆ ನೀಡಲಾಯಿತು. ನಿಗಮದ ಚಟುವಟಿಕೆಗಳ ಕುರಿತು ಆಂತರಿಕ ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ನಿಯತಕಾಲಿಕ ‘ಸಾರಿಗೆ ಸಂಪದ‘ ಬಿಡುಗಡೆ ಮಾಡಲಾಯಿತು.

ನಿಗಮದ ಸಿಬ್ಬಂದಿ ಮಕ್ಕಳ ವಿದ್ಯಾರ್ಥಿ ವೇತನ ಒದಗಿಸುವ ‘ಸಾರಿಗೆ ವಿದ್ಯಾ ಚೇತನ’ ಯೋಜನೆ ಜಾರಿಗೊಳಿಸಲಾಗಿದೆ. ಪಿಯುಸಿ, ಪದವಿ ಬಿ.ಎ., ಬಿ.ಕಾಂ., ಪಿಎಚ್‌.ಡಿ ಹಾಗೂ ವಿದೇಶದಲ್ಲಿ ಮಾಡುತ್ತಿರುವ ಪದವಿ ವ್ಯಾಸಂಗವನ್ನು ಈ ಯೋಜನೆಗೆ ಸೇರಿಸಲಾಗಿದೆ. 10 ಸಿಬ್ಬಂದಿ ಮಕ್ಕಳಿಗೆ ಈ ವಿದ್ಯಾರ್ಥಿವೇತನವನ್ನು ಸಚಿವರು ವಿತರಿಸಿದರು.

ಏಕ ಸದಸ್ಯ ಸಮಿತಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪ‍ಕ ನಿರ್ದೇಶಕಿ  ಜಿ. ಸತ್ಯವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT