ಕದ್ದುಮುಚ್ಚಿ ಹಣ ನೀಡಿಲ್ಲ: ಶಿವಕುಮಾರ್
ವಿಜಯಪುರ: ‘ನ್ಯಾಷನಲ್ ಹೆರಾಲ್ಡ್ ನಮ್ಮ ಪಕ್ಷ ನಡೆಸುವಂತಹ ಪತ್ರಿಕೆ. ಅದಕ್ಕೆ ನಾನು ಹಾಗೂ ಸುರೇಶ್ ತಲಾ ₹25 ಲಕ್ಷ ದುಡ್ಡು ಕೊಟ್ಟಿದ್ದೇವೆ. ನಮ್ಮ ಟ್ರಸ್ಟ್‌ನಿಂದಲೂ ದೇಣಿಗೆ ನೀಡಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕೊಲ್ಹಾರದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್, ‘ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಹೋದರ ಡಿ.ಕೆ.ಸುರೇಶ, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಮತ್ತು ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ಸುದ್ದಿಗಾರರಿಗೆ ಉತ್ತರಿಸಿದ ಅವರು, ‘ನಾವು ದುಡಿದ ಆಸ್ತಿಯಿಂದ ರಾಜಾರೋಷವಾಗಿ ಹಣ ನೀಡಿದ್ದೇವೆ. ನಾವು ಕದ್ದುಮುಚ್ಚಿ ನೀಡಿಲ್ಲ’ ಎಂದು ಹೇಳಿದರು.