ನವದೆಹಲಿ:ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ದೋನಿ ಅವರುಟೆರಿಟೋರಿಯಲ್ ಆರ್ಮಿಯ ಪ್ಯಾರಚೂಟ್ ರೆಜಿಮೆಂಟ್‌ನಲ್ಲಿ ತರಬೇತಿ ಆರಂಭಿಸಿದ್ದಾರೆ. ರೆಜಿಮೆಂಟ್‌ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿದ್ದು, ಅವರು ಬುಧವಾರವೇ ಬೆಟಾಲಿಯನ್ ಕೂಡಿಕೊಂಡರು.

ತರಬೇತಿ ಸಲುವಾಗಿ ಕ್ರಿಕೆಟ್‌ನಿಂದ ಎರಡು ತಿಂಗಳು ಬ್ರೇಕ್ ಪಡೆಯುವುದಾಗಿ ದೋನಿ ಬಿಸಿಸಿಐಗೆ ತಿಳಿಸಿದ್ದರು. ಹೀಗಾಗಿ ಅವರು ಆಗಸ್ಟ್ 3ರಿಂದ ವೆಸ್ಟ್‌ಇಂಡೀಸ್ ವಿರುದ್ಧ ಆರಂಭವಾಗಲಿರುವ ಮೂರು ಟಿ20, ಮೂರು ಏಕದಿನ ಪಂದ್ಯಗಳ ಸರಣಿಯಿಂದ ಹಿಂದೆ ಸರಿದಿದ್ದರು.

2015ರಲ್ಲಿ ಆಗ್ರಾ ವಾಯುಸೇನಾ ಶಿಬಿರದಲ್ಲಿ ನಡೆದಿದ್ದತರಬೇತಿ ವೇಳೆ ಪ್ಯಾರಾಚೂಟ್ ಮೂಲಕ ಜಿಗಿಯುವ ತರಬೇತಿ ಪೂರ್ಣಗೊಳಸಿ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಇದನ್ನೂ ಓದಿ:ವಿಂಡೀಸ್ ಪ್ರವಾಸಕ್ಕೆ ತಂಡ ಆಯ್ಕೆ; ಹಿಂದೆ ಸರಿದ ಧೋನಿ

ಧೋನಿ, ಶೂಟರ್ ಅಭಿನವ್ ಬೀಂದ್ರಾ ಹಾಗೂ ವಿಜ್ಞಾನಿ ದೀಪಕ್ ರಾವ್ ಅವರಿಗೆ ಟೆರಿಟೋರಿಯಲ್ ಆರ್ಮಿಯ ಪ್ಯಾರಾಚೂಟ್ ರೆಜಿಮೆಂಟ್‌ನಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು 2011ರಲ್ಲಿ ಪ್ರದಾನ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.