ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ಮುಡಾಗೆ ಬರೆದ ಪತ್ರದಲ್ಲಿನ ಸಹಿಯೇ ಬೇರೆ ಇದೆ. ಸಿದ್ದರಾಮಯ್ಯ ಅವರು ಟಾರ್ಚ್ ಬಿಟ್ಟು ತೋರಿಸಿದ ವೈಟ್ನರ್ ಹಿಂದಿನ ಸಾಲಿನ ಪತ್ರದ ಸಹಿಯೇ ಬೇರೆ ಇದೆ ಎಂದು ಬಿಜೆಪಿ ಆರೋಪಿಸಿದೆ.
ಭ್ರಷ್ಟ ಮುಖ್ಯಮಂತ್ರಿಗಳೇ, ಒಂದು ಸತ್ಯವನ್ನು ಮರೆಮಾಚಲು ಹೋಗಿ ಹಲವು ಸುಳ್ಳುಗಳನ್ನು ಹೇಳಿದ್ದೀರಿ ಎಂದು ಎಕ್ಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ನಾನೇ ಸತ್ಯ ಹರಿಶ್ಚಂದ್ರರ ಕೊನೆಯ ತುಂಡು ಎನ್ನುವ ರೀತಿ ಲಜ್ಜೆಬಿಟ್ಟು ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವ ಭಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಗತ್ತಿನ ಮುಂದೆ ಸತ್ಯವನ್ನು ಮರೆಮಾಚಲು ಹೋಗಿ ಇದೀಗ ಬೆತ್ತಲಾಗಿದ್ದಾರೆ ಎಂದಿದೆ.
ಮಾಹಿತಿ ಹಕ್ಕಿನಡಿ ಆರ್‌ಟಿಐ ಕಾರ್ಯಕರ್ತ ಪಡೆದ, ಶ್ರೀಮತಿ ಪಾರ್ವತಿಯವರು ಮುಡಾಗೆ ಬರೆದ ಪತ್ರದಲ್ಲಿನ ಸಹಿಯೇ ಬೇರೆ ಇದೆ. ನಕಲಿರಾಮಯ್ಯನವರು ಟಾರ್ಚ್ ಬಿಟ್ಟು ತೋರಿಸಿದ ವೈಟ್ನರ್ ಹಿಂದಿನ ಸಾಲಿನ ಪತ್ರದ ಸಹಿಯೇ ಬೇರೆ ಇದೆ. ಭ್ರಷ್ಟ ಮುಖ್ಯಮಂತ್ರಿಗಳೇ, ಒಂದು ಸತ್ಯವನ್ನು ಮರೆಮಾಚಲು ಹೋಗಿ ಹಲವು ಸುಳ್ಳುಗಳನ್ನು ಹೇಳಿದ್ದೀರಿ. ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನಂತೆ ಸುಳ್ಳು ಸುದ್ದಿ ಹರಡುವುದಕ್ಕೆ ನಾಚಿಕೆ ಆಗುವುದಿಲ್ಲವೇ? ಮೊದಲು ರಾಜೀನಾಮೆ ಕೊಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.