ನವದೆಹಲಿ/ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವಲ್ಲಿ ಹಲವು ಅಕ್ರಮಗಳು ನಡೆದಿವೆ. ಅಷ್ಟೇ ಅಲ್ಲದೆ, ಮುಡಾದಲ್ಲಿ ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿದೆ’ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತವೂ ತನಿಖೆ ನಡೆಸುತ್ತಿದೆ. ಇ.ಡಿಯು ತನ್ನ ತನಿಖೆಯ ಕೆಲ ಮಾಹಿತಿಗಳನ್ನು ಒಳಗೊಂಡ ವರದಿಯನ್ನು ಲೋಕಾಯುಕ್ತ ತನಿಖಾಧಿಕಾರಿಗಳಿಗೆ ಐದು ದಿನಗಳ ಹಿಂದೆ ನೀಡಿದೆ ಎಂದು ಮೂಲಗಳು ಖಚಿತಪಡಿಸಿವೆ. ಈ ವರದಿಯ ಕೆಲ ಭಾಗಗಳು ಸುದ್ದಿಸಂಸ್ಥೆಗಳಿಗೆ ಸೋರಿಕೆಯಾಗಿದ್ದು, ಅವುಗಳಲ್ಲಿ ಯಾವ ಹಂತದಲ್ಲೆಲ್ಲಾ ಅಕ್ರಮ ನಡೆದಿದೆ ಎಂಬುದನ್ನು ತನಿಖಾಧಿಕಾರಿಗಳು ವಿವರಿಸಿದ್ದಾರೆ.

‘ಕರ್ತವ್ಯ ಲೋಪ, ನಿಯಮ ಉಲ್ಲಂಘನೆ, ಸಹಿಗಳ ನಕಲಿ, ದಾಖಲೆ ತಿದ್ದುವಿಕೆ ಮತ್ತು ಸಾಕ್ಷ್ಯ ನಾಶದಂತಹ ಅಕ್ರಮಗಳು ನಡೆದಿವೆ’ ಎಂದು ಇ.ಡಿ ಹೇಳಿದೆ.

‘ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಲ್ಲಿ ಅಕ್ರಮ ನಡೆದಿದೆ. ದಾಖಲೆ ಪರಿಶೀಲನೆ, ಸ್ಥಳಭೇಟಿ ಪರಿಶೀಲನೆಯಲ್ಲಿ ಲೋಪಗಳಾಗಿವೆ. ಡಿನೋಟಿಫೈ ಪ್ರಕ್ರಿಯೆ ನಡೆಯುವಾಗ ಸಿದ್ದರಾಮಯ್ಯ ಅವರು ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದರು’ ಎಂಬುದನ್ನು ಇ.ಡಿ ಪುನರುಚ್ಚರಿಸಿದೆ.

‘ಈ ಜಮೀನನ್ನು ಮಾರಾಟ ಮಾಡುವಲ್ಲಿ, ಮಲ್ಲಿಕಾರ್ಜುನ ಸ್ವಾಮಿ ಖರೀದಿಸುವಲ್ಲಿ ನಿಯಮಗಳ ಉಲ್ಲಂಘನೆಯಾಗಿವೆ. ಆನಂತರ ಭೂಪರಿವರ್ತನೆ ವೇಳೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯಿಂದ ಕರ್ತವ್ಯ ಲೋಪಗಳಾಗಿವೆ’ ಎಂದು ಇ.ಡಿ ವಿವರಿಸಿದೆ.

‘ಸ್ಥಳ ಪರಿಶೀಲನೆಯನ್ನು ಸರಿಯಾಗಿ ನಡೆಸಿಲ್ಲ. ವಿವಾದಿತ ಜಮೀನಿನಲ್ಲಿ ಕಟ್ಟಡಗಳು ಇದ್ದರೂ, ಕಟ್ಟಡಗಳು ಇಲ್ಲ ಎಂದು ವರದಿ ನೀಡಿದ್ದಾರೆ ಸ್ಥಳ ಪರಿಶೀಲನೆ ನಡೆದ ಸಂದರ್ಭದಲ್ಲಿ ಕಟ್ಟಡಗಳು ಇದ್ದವು ಎಂಬುದನ್ನು ಉಪಗ್ರಹ ನಕ್ಷೆಗಳು ತೋರಿಸುತ್ತವೆ. ಆದರೆ ಅದನ್ನು ಅಧಿಕಾರಿಗಳು ಉಲ್ಲೇಖಿಸಿಲ್ಲ’ ಎಂದು ವಿವರಿಸಿದೆ.

‘ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಸ್.ಜಿ.ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ಗೆ ಮುಡಾ ಕಚೇರಿಯಲ್ಲಿ ಹೆಚ್ಚು ಪ್ರಭಾವವಿದ್ದು, ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ಅದನ್ನು ಬಳಸಿಕೊಂಡಿದ್ದಾರೆ. ಜತೆಗೆ ಹಲವರ ಸಹಿಗಳನ್ನು ನಕಲು ಮಾಡಿದ್ದಾರೆ’ ಎಂದು ಇ.ಡಿ ಹೇಳಿದೆ.

‘ಪಾರ್ವತಿ ಅವರು ಪರಿಹಾರಕ್ಕಾಗಿ 2014ರ ಜೂನ್ 14ರಂದು ಸಲ್ಲಿಸಿದ್ದ ಅರ್ಜಿಯನ್ನು ತಿದ್ದಲಾಗಿದೆ. ಅರ್ಜಿಯಲ್ಲಿನ ಕೆಲವು ಪದಗಳಿಗೆ ವೈಟನರ್ ಹಚ್ಚಿದ್ದು, ಆ ಬದಲಾವಣೆಗಳನ್ನು ದೃಢೀಕರಿಸಿಲ್ಲ. ಅವರ ಅರ್ಜಿಗಳನ್ನು ನಿವೇಶನ ಹಂಚಿಕೆ ವಿಭಾಗಕ್ಕೆ ಕಳುಹಿಸಿಲ್ಲ. ಬದಲಿಗೆ ಮುಡಾ ಆಯುಕ್ತರಾಗಿದ್ದ ಡಿ.ಬಿ. ನಟೇಶ್ ಸ್ವತಃ ತಾವೇ ನಿರ್ವಹಣೆ ಮಾಡಿದ್ದಾರೆ. ಅವರು ಅನುಕೂಲ ಮಾಡಿಕೊಟ್ಟಿರುವುದನ್ನು ಇದು ಸೂಚಿಸುತ್ತದೆ’ ಎಂದು ಇ.ಡಿ ವಿವರಿಸಿದೆ.

‘ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಆದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮಗ ಮತ್ತು ಶಾಸಕರಾಗಿದ್ದ ಯತೀಂದ್ರ, ಮುಡಾ ಸದಸ್ಯರಾಗಿದ್ದರು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು’ ಎಂಬುದನ್ನು ಇ.ಡಿ ಪುನರುಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.