ಬೆಂಗಳೂರು: ‘ಶಾಸಕ ಮುನಿರತ್ನ ಅವರ ಜೊತೆಯಲ್ಲಿದ್ದ ಎಲ್ಲ ಬಿಜೆಪಿ ಶಾಸಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ಎಚ್.ಡಿ. ರಂಗನಾಥ್ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುನಿರತ್ನ ಆರು ವರ್ಷಗಳ ಹಿಂದೆ ಬಿಜೆಪಿ ಮುಖಂಡರ ಮೇಲೆ ಎಚ್‌ಐವಿ ಹರಡುವ ಕೃತ್ಯ ಎಸಗಿರುವ ಆರೋಪವಿದೆ. ಎಚ್‌ಐವಿ ಸೋಂಕಿತರನ್ನು ಬಳಸಿಕೊಂಡು ಮಾಡಿರುವ ಇಂತಹ ದುಷ್ಕೃತ್ಯ ತಲೆತಗ್ಗಿಸುವಂಥದ್ದು’ ಎಂದರು.
ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ಮಧುಸೂದನ್ ಮಾತನಾಡಿ, ‘ಮುನಿರತ್ನ ಮಾಡಿರುವ ಕೃತ್ಯ ಬಾಂಬ್ ಹಾಕಿದಷ್ಟೇ ಘೋರ. ಇದು ಭಯೋತ್ಪಾದನೆಗೆ ಸಮ’ ಎಂದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಮುಖಂಡರಾದ ಶ್ರೀನಿವಾಸ್ ಇದ್ದರು.