ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ಆಯ್ಕೆ ವಿಚಾರವಾಗಿ ಹೈಕಮಾಂಡ್ ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡಿದೆ. ಆದರೆ ಯಾರು ಹೇಳಿದ್ದೂ ನಡೆಯುವುದಿಲ್ಲ. ಹೈಕಮಾಂಡ್ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲರ ಹೆಸರು ಮುಂಚೂಣಿಯಲ್ಲಿರಬಹುದು. ಆದರೆವಾಸ್ತವಾಂಶ ಮಾಧ್ಯಮದವರಿಗೆ ಗೊತ್ತಿಲ್ಲ.ಮುಂದಿನ ವಾರ ಹೈಕಮಾಂಡ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೆ’ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮತ್ತೊಂದು ಲೆಕ್ಕಾಚಾರ ಚಾಲ್ತಿಯಲ್ಲಿರುವ ಸುಳಿವು ಬಿಟ್ಟುಕೊಟ್ಟರು.

‘ಹೈಕಮಾಂಡ್ ಬಳಿನನ್ನ ಪರವಾಗಿ ನಾಯಕರು ಮಾತನಾಡಿದ್ದಾರೆ.ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿ ವೇಳೆಸಿದ್ದರಾಮಯ್ಯ ಯಾವವಿಚಾರ ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ಯಾರಿಗಾದರೂ ಅಧ್ಯಕ್ಷ ಪಟ್ಟ ನೀಡಲಿ. ನಾವೆಲ್ಲರೂ ಒಗ್ಗೂಡಿಕೆ ಕೆಲಸ ಮಾಡುತ್ತೇವೆ’ ಎಂದು ಒಗ್ಗಟ್ಟಿನ ಮಂತ್ರ ಪಠಿಸಿದರು.

‘ನಮ್ಮದು ರಾಷ್ಟ್ರೀಯ ಪಕ್ಷ, ದೊಡ್ಡ ಪಕ್ಷ.ಅಸಮಾಧಾನ ಮತ್ತು ಅಭಿಪ್ರಾಯ ಭೇದಗಳು ಸಹಜ.ಇವೆಲ್ಲವನ್ನೂ ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ’ ಎಂದು ನುಡಿದರು.

ಬೇಗ ಇತಿಶ್ರೀ: ಗುಂಡೂರಾವ್

‘ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಅಂಥ ಗೊಂದಲವೇನೂ ಆಗಿಲ್ಲ. ಆದಷ್ಟೂ ಬೇಗ ಅಧ್ಯಕ್ಷರನ್ನು ಘೋಷಿಸಿ ಊಹಾಪೋಹಗಳಿಗೆ ಇತಿಶ್ರೀ ಹಾಡಬೇಕು.ಬೇಗ ಮಾಡ್ತಾರೆ ಎಂಬ ವಿಶ್ವಾಸವಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದಿನೇಶ್ ಗುಂಡೂರಾವ್ ಹೇಳಿದರು.

‘ನಮ್ಮ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ನಮ್ಮವರೇ. ಇಲ್ಲಿ ಮೂಲ–ವಲಸಿಗ ಅಂತ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.