ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ ಹತ್ಯೆ: ಸಹಾಯಕನ ಕೃತ್ಯ ಶಂಕೆ

Published 10 ಜೂನ್ 2024, 8:13 IST
Last Updated 10 ಜೂನ್ 2024, 8:13 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಸಿದ್ದಾರ್ಥನಗರ ಸಮೀಪದ ಬನ್ನೂರು ರಸ್ತೆಯಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (92) ಅವರನ್ನು ಸೋಮವಾರ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅವರ ಸಹಾಯಕ ರವಿ (60) ಕೊಲೆ ಆರೋಪಿ ಎನ್ನಲಾಗಿದೆ.

‘ಸ್ವಾಮೀಜಿ 50 ವರ್ಷದಿಂದ ಮಠದ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ತಮಗೆ ನೆರವಾಗಲೆಂದು ಆರೋಪಿಯನ್ನು 3 ವರ್ಷದ ಹಿಂದೆ ಸೇರಿಸಿಕೊಂಡಿದ್ದರು. ಆತ ನಿತ್ಯ ಸಂಬಂಧಿಕರ ಮನೆಯಿಂದ ಆಹಾರ ತರುತ್ತಿದ್ದ, ಪೂಜೆಗೆ ಸಹಾಯ ಮಾಡುತ್ತಿದ್ದ’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ತಿಳಿಸಿದರು.

‘ಸೋಮವಾರ ಆಹಾರ ಪಡೆಯಲು ಆರೋಪಿಯು ಬಾರದ ಕಾರಣ ಸಂಬಂಧಿಕರು ಕರೆ ಮಾಡಿದ್ದರು. ಆತ ಸ್ಪಂದಿಸದಿದ್ದಾಗ ತಾವೇ ಮಠಕ್ಕೆ ಬಂದ ವೇಳೆ ಕೊಲೆ ವಿಚಾರ ಬೆಳಕಿಗೆ ಬಂತು. ಮಠದ ಆವರಣದಲ್ಲೇ ಇದ್ದ ಆರೋಪಿಯು ಪಾನಮತ್ತನಾಗಿದ್ದು, ಜೊತೆಗೆ ವಿಷವನ್ನೂ ಕುಡಿದಿದ್ದರಿಂದ ಕೆ.ಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಟ್ಟೆಯ ಮೇಲಿನ ರಕ್ತದ ಕಲೆ ಹಾಗೂ ಇನ್ನಿತರ ಸಾಕ್ಷಿ ಆಧರಿಸಿ ಆತನೇ ಕೊಲೆ ಮಾಡಿರಬಹುದೆಂಬುದು ಶಂಕಿಸಲಾಗಿದೆ. ಆತ ಗುಣಮುಖನಾದ ಬಳಿಕ ಕೊಲೆಯ ಕಾರಣ ಗೊತ್ತಾಗಲಿದೆ’ ಎಂದರು. ನಜರ್‌ಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿ
ರವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT