ಸ್ವಾಮಿ ವಿವೇಕಾನಂದರು ‘if India lives who dies and if India dies who lives’ ಎಂದು ಆಗಾಗ ಹೇಳುತ್ತಿದ್ದರು. ಇದು ಭಾರತೀಯ ಜ್ಞಾನ ಪರಂಪರೆಯ ಉಳಿವು ಮತ್ತು ಮುಂದುವರಿಕೆಯ ದೃಷ್ಟಿಯಿಂದ ಹೇಳಿದ ಮಾತು. ಈ ಮಾತು ತಮ್ಮ ಆಳ್ವಿಕೆಯ ನಾಡಿನ ಧರ್ಮ ಮತ್ತು ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ನಾಡನ್ನು ಪ್ರವರ್ಧಮಾನಕ್ಕೆ ತಂದ ನಾಡಪ್ರಭು ಕೆಂಪೇಗೌಡರ ವ್ಯಕ್ತಿತ್ವಕ್ಕೆ ಸರಿ ಹೊಂದುತ್ತದೆ. ಅಪೂರ್ವ ಸಾಹಸಿ, ಕನಸುಗಾರ ಕೆಂಪೇಗೌಡರು ನಾಡಪ್ರಭು ಮಾತ್ರವಲ್ಲ ಧರ್ಮಪ್ರಭುಗಳೂ ಆಗಿದ್ದರು.

ಮಾನವ ಸಂಪನ್ಮೂಲವೇ ಒಂದು ನಾಡಿನ ಅತ್ಯಮೂಲ್ಯ ಸಂಪನ್ಮೂಲ ಎಂದು ಅರಿತಿದ್ದ ಕೆಂಪೇಗೌಡರು, ನಾಡಿನ ಕುಶಲಕರ್ಮಿಗಳ ಕೌಶಲವನ್ನು ದೇಶದ ಒಳಿತಿಗೆ ಹಾಗೂ ಪ್ರಗತಿಗೆ ಬಳಸಿದಾಗ ದೇಶವು ಪ್ರಗತಿಯ ಪಥದಲ್ಲಿ ಸಾಗುತ್ತದೆ ಎಂದು ಮನಗಂಡಿದ್ದರು. ಹೀಗಾಗಿಯೇ, ತಮ್ಮ ಕಾಲಮಾನದ ಎಲ್ಲ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ, ಆಶ್ರಯ ನೀಡಿದರು. ಅವರ ದೂರದೃಷ್ಟಿಯ ಫಲದಿಂದಾಗಿಯೇ ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ‘ಸಿಲಿಕಾನ್ ಸಿಟಿ’ ಎಂಬ ಅಭಿದಾನ ದಕ್ಕಿತು.

ಉತ್ತಮ ಆಡಳಿತಗಾರರೂ ಆಗಿದ್ದ ಕೆಂಪೇಗೌಡರು, ಬೆಂಗಳೂರು ಎಂಬ ನವನಗರ ನಿರ್ಮಾಣದ ಕನಸು ಕಂಡರು. ಅಪ್ರತಿಮ ಕರ್ತೃತ್ವಶಕ್ತಿಯಿದ್ದ ಧೀಮಂತ ನಾಯಕರಾದ ಅವರು, ಪ್ರಾಚೀನ ಕಾಲದಿಂದಲೂ ವಾಣಿಜ್ಯ ಪಥಗಳು ಸಾಗುತ್ತಿದ್ದ ಹಾಗೂ ಭೌಗೋಳಿಕವಾಗಿ ಆಯಕಟ್ಟಿನ ಪ್ರದೇಶದಲ್ಲಿ ಬೆಂಗಳೂರು ನಿರ್ಮಿಸಿದರು. ಕ್ರಿ.ಶ.1537ರಲ್ಲಿ ಕೆಂಪೇಗೌಡರು 'ದೇವರಾಯಪಟ್ಟಣ' ಎಂಬ ಹೆಸರಿನಲ್ಲಿ ತಮ್ಮ ಹೊಸ ರಾಜಧಾನಿ ಹಾಗೂ ಉತ್ಪಾದನೆ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಂಗಳೂರು ನಗರವನ್ನು ಕಟ್ಟಿ, ಅದಕ್ಕೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಗಡಿ ಗೋಪುರಗಳನ್ನು ನಿರ್ಮಿಸಿದರು. ನಗರದ ಸುತ್ತ ಕಂದಕವುಳ್ಳ ಮಣ್ಣಿನ ಕೋಟೆ ನಿರ್ಮಿಸಿ, ಅದರ ಎಲ್ಲ ದಿಕ್ಕಿನಲ್ಲಿ ಕೆರೆಗಳನ್ನು ಕಟ್ಟಿಸಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರು. ತರಗುಪೇಟೆ, ಚಿಕ್ಕಪೇಟೆ, ಅಕ್ಕಿಪೇಟೆ, ಅರಳೆಪೇಟೆ, ಬಳೇಪೇಟೆ ಮುಂತಾದ ಹತ್ತಾರು ಪೇಟೆಗಳನ್ನು ನೆಲೆಗೊಳಿಸಿ, ಕುಶಲಕರ್ಮಿಗಳಿಗೆ ಅಗತ್ಯವಾದ ವೈವಿಧ್ಯಮಯ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು ನಗರದ ಅಭಿವೃದ್ಧಿಗೆ ಕಾರಣವಾಯಿತು. ಈ ನಗರದ ಶಿಸ್ತುಬದ್ಧ ನಿರ್ಮಾಣವನ್ನು ಕಂಡ ಬ್ರಿಟಿಷ್ ಅಧಿಕಾರಿಗಳು ‘ಆಧುನಿಕ ನಗರ ನಿರ್ಮಾತೃಗಳು ನವನಗರಗಳನ್ನು ನಿರ್ಮಾಣ ಮಾಡುವ ರೀತಿಯಲ್ಲಿಯೇ ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕೆಂಪೇಗೌಡರು ಸ್ವಭಾವತಃ ಧಾರ್ಮಿಕ ವ್ಯಕ್ತಿಯಾಗಿದ್ದರು ಹಾಗೂ ಎಲ್ಲ ಮತಧರ್ಮಗಳನ್ನು ಸಮಭಾವದಿಂದ ಕಂಡವರು. ಇಂತಹ ದೂರದೃಷ್ಟಿಯ ದೊರೆಯ ಆಶ್ರಯದಲ್ಲಿ ಬೆಂಗಳೂರು ನಗರವು ದಕ್ಷಿಣ ಭಾರತದ ಪ್ರಮುಖ ಮತ್ತು ಶ್ರೀಮಂತ ನಗರವಾಗಿ ಬೆಳೆಯಿತು. ಬೆಂಗಳೂರು ನಗರ ನಿರ್ಮಾಣವು ವಿಜಯನಗರ ಸಾಮ್ರಾಜ್ಯದ ಚರಿತ್ರೆಯಲ್ಲಿ ಒಂದು ಮಹತ್ವದ ಘಟನೆಯಾಯಿತು. ಅನೇಕ ಚಕ್ರವರ್ತಿಗಳು, ಸಾಮ್ರಾಟರು, ದೊಡ್ಡ ದೊಡ್ಡ ರಾಜ ಮನೆತನಗಳು ಕಟ್ಟಿದ ರಾಜಧಾನಿಗಳು, ಬೃಹತ್ ನಗರಗಳು ಇಂದು ಅಸ್ತಿತ್ವದಲ್ಲಿಲ್ಲ. ಆದರೆ ಕೆಂಪೇಗೌಡರು ಕಟ್ಟಿದ ಬೆಂಗಳೂರು ಈಗಲೂ ಉತ್ತರೋತ್ತರವಾಗಿ ಬೆಳೆಯುತ್ತಲೇ ಇದೆ.

ಕರ್ನಾಟಕದ ಇತಿಹಾಸದಲ್ಲಿ ಸ್ವತಂತ್ರ ರಾಜ ಮಹಾರಾಜರು ಪಡೆದಿರುವಷ್ಟೇ ಜನಪ್ರಿಯತೆ ಗಳಿಸಿದ ವ್ಯಕ್ತಿ ನಾಡಪ್ರಭು ಕೆಂಪೇಗೌಡರು. ಅವರು ವಿಜಯನಗರ ಸಾಮ್ರಾಜ್ಯದ ಉತ್ತುಂಗ ಸ್ಥಿತಿ, ಪತನ ಹಾಗೂ ಅವನತಿಗೆ ಸಾಕ್ಷಿಯಾಗಿದ್ದರು. ಕೃಷ್ಣದೇವರಾಯ, ಅಚ್ಯುತರಾಯ, ಸದಾಶಿವರಾಯ ಮತ್ತು ರಾಮರಾಯರ ಆಳ್ವಿಕೆಯ ಕಾಲದಲ್ಲಿ ಸುಮಾರು ಎಪ್ಪತ್ತು ವರ್ಷ ರಾಜ್ಯಭಾರ ಮಾಡಿದರು. ಶತಾಯುಷಿಗಳೂ ಹಾಗೂ ವಿಜಯನಗರ ಸಾಮ್ರಾಜ್ಯದ ನಾಡಪ್ರಭುಗಳಲ್ಲಿಯೇ ಅತ್ಯಂತ ಪ್ರಭಾವಶಾಲಿಗಳೂ ಜನಾನುರಾಗಿಯೂ ಆಗಿದ್ದರು. ತಮ್ಮ ಆಳ್ವಿಕೆಯ ಮೊರಸುನಾಡಿನಲ್ಲಿ ಮಹಿಳೆಯರು ದೇವರಿಗೆ ಕೈ ಬೆರಳನ್ನು ಅರ್ಪಿಸುತ್ತಿದ್ದ ಕ್ರೂರ ಆಚರಣೆಯನ್ನು ನಿಷೇಧಿಸಿದರು. ಇವರ ಲೌಕಿಕ ಮತ್ತು ಪಾರಮಾರ್ಥಿಕ ಸಾಧನೆಯನ್ನು ಕಂಡ ಪ್ರಜೆಗಳು ಇವರನ್ನು ‘ಧರ್ಮಪ್ರಭು’ ಎಂದು ಕೊಂಡಾಡುತ್ತಿದ್ದರು. ಇಂತಹ ದೊರೆಯನ್ನು ಐನೂರ ಹದಿನಾರನೆಯ ಜನ್ಮದಿನದ ಸಂದರ್ಭದಲ್ಲಿ ಜನರು ಕೃತಜ್ಞತೆಯಿಂದ ಸ್ಮರಿಸುತ್ತಿರುವುದು ಅರ್ಥಪೂರ್ಣ.

ಲೇಖಕರು: ಪೀಠಾಧ್ಯಕ್ಷರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.