ನಾರಾಯಣ ಗುರುಗಳ ತತ್ವ ಹೈಜಾಕ್ ಯತ್ನ: ಪಿಣರಾಯಿ ಎಚ್ಚರಿಕೆ
‘ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಾರಾಯಣ ಗುರುಗಳ ತತ್ವ–ಬೋಧನೆಗಳನ್ನು ‘ಹೈಜಾಕ್’ ಮಾಡಲು ಯತ್ನಿಸುತ್ತಿವೆ. ಈ ಬಗ್ಗೆ ಎಚ್ಚರಿಕೆ ಅಗತ್ಯ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ‘ನಾರಾಯಣ ಗುರುಗಳನ್ನು ನಿರ್ದಿಷ್ಟವಾದ ಧರ್ಮ ಅಥವಾ ಸಮುದಾಯಕ್ಕೆ ಸೀಮಿತಗೊಳಿಸುವ ಯತ್ನಗಳ ಬಗ್ಗೆ ಜನರು ಜಾಗೃತರಾಗಬೇಕು’ ಎಂದರು. ‘ಆಧುನಿಕ ಕೇರಳ ನಿರ್ಮಾಣದಲ್ಲಿ ನಾರಾಯಣ ಗುರುಗಳ ದೂರದೃಷ್ಟಿ ಹಾಗೂ ಆಧ್ಯಾತ್ಮಿಕತೆ ಪ್ರಭಾವ ಇದೆ’ ಎಂದೂ ಅವರು ಹೇಳಿದರು.