ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಳ್ಳು ಸುದ್ದಿಗೆ ಕಡಿವಾಣ ಅಗತ್ಯ: ಸಿದ್ದರಾಮಯ್ಯ

Published : 21 ಸೆಪ್ಟೆಂಬರ್ 2024, 9:25 IST
Last Updated : 21 ಸೆಪ್ಟೆಂಬರ್ 2024, 9:25 IST
ಫಾಲೋ ಮಾಡಿ
Comments

ಮೈಸೂರು: ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕದೇ ಇದ್ದರೆ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸಾಮಾಜಿಕ ಮೌಲ್ಯಗಳು ಉಳಿಯುವುದು ಕಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಪತ್ರಿಕಾ ದಿನಾವಚರಣೆಯಲ್ಲಿ ಅವರು ಮಾತನಾಡಿದರು.

ಧಾರ್ಮಿಕ, ಸಾಮಾಜಿಕ ಘರ್ಷಣೆ ಹೆಚ್ಚಲು ಸುಳ್ಳು ಸುದ್ದಿ ಕಾರಣ. ಅದನ್ನು ಹರಡುವುದು ಯಾರಿಗೂ ಶೋಭೆ ತರುವ ಕೆಲಸ ಅಲ್ಲ‌ ಎಂದರು.

ವಾಕ್ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಜೀವಾಳ. ಪ್ರಜಾಪ್ರಭುತ್ವದ ಮೂರು ಅಂಗಗಳು ಸಮತೋಲನದಿಂದ ಕೆಲಸ ಮಾಡುವ ಜೊತೆಗೆ ಪತ್ರಿಕಾರಂಗ ಕೂಡ ಎಚ್ಚರಿಕೆಯಿಂದ ನಡೆಯಬೇಕು. ಇವುಗಳಿಗೆ ಅಪಾಯ ಬಂದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಬಂದ ಹಾಗೇ ಎಂದು ಎಚ್ಚರಿಸಿದರು.

ನೆಹರು ಹೇಳುವಂತೆ ಮಾಧ್ಯಮಗಳಿಗೆ ಯಾವ ನಿರ್ಬಂಧವೂ ಇರಬಾರದು ಎಂದು ಆಶಿಸಿದರು.

ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಫ್ಯಾಕ್ಟ್ ಚೆಕ್ ಘಟಕಗಳನ್ನು ಎಲ್ಲ ಪೊಲೀಸ್ ಠಾಣೆಗಳಲ್ಲಿ ಸ್ಥಾಪಿಸಲಾಗಿದೆ. ಆದರೆ ಎಲ್ಲ ಸುದ್ದಿಗಳನ್ನು ಕಾನೂನಿನಿಂದ ನಿಯಂತ್ರಿಸಲು ಸಾಧ್ಯ ಇಲ್ಲ. ವ್ಯಕ್ತಿ- ಸಮಾಜದ ತೇಜೋವಧೆಗೆ ಯಾರೂ ಮುಂದಾಗಬಾರದು ಎಂದು ಸಿದ್ದರಾಮಯ್ಯ ಕೋರಿದರು.

ಸಚಿವ ಎಚ್.ಸಿ.‌ ಮಹದೇವಪ್ಪ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಪ್ರಧಾನ ಭಾಷಣ ಮಾಡಿದರು. ಶಾಸಕರಾದ ತನ್ವೀರ್ ಸೇಠ್, ರವಿಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ನ್ಯೂಸ್ ಫಸ್ಟ್ ಚಾನಲ್‌ನ ಸಿಇಒ ರವಿಕುಮಾರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಇದ್ದರು.

anand photos
anand photos

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT