ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳ 10ನೇ ತಾರೀಖಿಗೆ ಸೆಷನ್ಸ್ ನ್ಯಾಯಾಲಯದಲ್ಲಿ ಮುದ್ದತು ನಿಗದಿಯಾಗಿದೆ. ಅಂದು ಕೋರ್ಟ್‌ನಲ್ಲಿ ದೋಷಾರೋಪ ಹೊರಿಸುವ ಮುನ್ನಿನ ಪ್ರಕ್ರಿಯೆ ನಡೆಯುತ್ತದೆ. ‘ನೀವು ತಪ್ಪು ಮಾಡಿದ್ದೀರಿ ಎಂಬುದನ್ನು ಒಪ್ಪಿಕೊಳ್ಳುತ್ತೀರೋ ಅಥವಾ ಕೇಸನ್ನು ನಡೆಸಿ, ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸುತ್ತೀರಾ’ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಎಲ್ಲ ಆರೋಪಿಗಳಿಂದ ಪಡೆಯಲಾಗುವ ಉತ್ತರವನ್ನು ಸಿಆರ್‌ಪಿಸಿ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973) ಕಲಂ 227ರ ಅಡಿಯಲ್ಲಿ ಅಧಿಕೃತ ಹೇಳಿಕೆಯ ಮುಖಾಂತರ ದಾಖಲು ಮಾಡಿಕೊಳ್ಳುವ ನ್ಯಾಯಾಧೀಶರು ಪ್ರಕರಣವನ್ನು ಮುಂದಿನ ನ್ಯಾಯಿಕ ವಿಚಾರಣೆಗೆ ಅಣಿಗೊಳಿಸುತ್ತಾರೆ.