ಭಾಲ್ಕಿ (ಬೀದರ್ ಜಿಲ್ಲೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಭಾಲ್ಕಿ ಬಸ್ ಘಟಕದ ಬಂಕ್ನಲ್ಲಿ ಡೀಸೆಲ್ ವ್ಯತ್ಯಾಸದಿಂದ ಸಂಸ್ಥೆಗೆ ₹ 1.48 ಲಕ್ಷ ನಷ್ಟವಾಗಿದ್ದು, ಅದಕ್ಕೆ ಕಾರಣರಾದ ಆರೋಪದ ಮೇರೆಗೆ ಇಬ್ಬರು ಘಟಕ ವ್ಯವಸ್ಥಾಪಕರು ಸೇರಿ ಏಳು ಸಿಬ್ಬಂದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಅಮಾನತು ಮಾಡಿದ್ದಾರೆ.

ಭಾಲ್ಕಿ ಘಟಕದ ಹಿಂದಿನ ಪ್ರಭಾರ ವ್ಯವಸ್ಥಾಪಕ ಮಹ್ಮದ್ ಇಸಾಕ್ (ಪ್ರಸ್ತುತ ಬೀದರ್ ವಿಭಾಗೀಯ ಕಾರ್ಯಾಗಾರದ ಸಹಾಯಕ ಕಾರ್ಯ ಅಧೀಕ್ಷಕ), ಈಗಿನ ಘಟಕ ವ್ಯವಸ್ಥಾಪಕ ಎಸ್.ಟಿ.ರಾಠೋಡ, ಪಾರುಪತ್ತೇಗಾರ ಸಂತೋಷ, ಕಿರಿಯ ಸಹಾಯಕ ಜಿತೇಂದ್ರ, ಸಹಾಯಕ ಲೆಕ್ಕಿಗ ಮಹೇಶ, ತಾಂತ್ರಿಕ ಸಹಾಯಕ ಬಸವರೆಡ್ಡಿ, ಭದ್ರತಾ ಸಿಬ್ಬಂದಿ ಶಿವಕುಮಾರ (ಪ್ರಸ್ತುತ ಔರಾದ್ ಘಟಕ) ಅಮಾನತುಗೊಂಡವರು.

ಜುಲೈ 1ರಂದು 2,488 ಲೀಟರ್ ಡೀಸೆಲ್ ವ್ಯತ್ಯಾಸ ಕಂಡು ಬಂದಿದ್ದು, ಇದರಿಂದ ಸಂಸ್ಥೆಗೆ ₹1.48 ಲಕ್ಷ ನಷ್ಟ ಉಂಟಾಗಿದೆ ಎಂದು ತನಿಖಾಧಿಕಾರಿಗಳು ವರದಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.